ಮಡಿಕೇರಿ, ಜು. ೧೨: ಆರನೇ ತರಗತಿಯ ಪ್ರವೇಶಕ್ಕಾಗಿ ದಿನಾಂಕ ೩೦.೦೪.೨೦೨೨ರಂದು ನಡೆದ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ - ೨೦೨೨ ಇದರ ಫಲಿತಾಂಶ ಪ್ರಕಟವಾಗಿದ್ದು ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ತಿತಿತಿ.ಟಿಚಿvoಜಚಿಥಿಚಿ.gov.iಟಿನಲ್ಲಿ ಫಲಿತಾಂಶವನ್ನು ತಮ್ಮ ರೋಲ್ ನಂ ಮತ್ತು ಜನ್ಮದಿನಾಂಕವನ್ನು ನಮೂದಿಸಿ ಪರಿಶೀಲಿಸಬಹುದಾಗಿದೆ. ಅರ್ಹರಾದ ಮತ್ತು ಪ್ರವೇಶ ಬಯಸುವ ವಿದ್ಯಾರ್ಥಿಗಳು (ಅಭ್ಯರ್ಥಿಗಳು) ನವೋದಯ ವೆಬ್ಸೈಟ್ನಲ್ಲಿರುವ ಪ್ರವೇಶಕ್ಕೆ ಸಂಬAಧಿಸಿದ ಫಾರಂಗಳ ಪ್ರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಿದೆ ಅಥವಾ ನವೋದಯ ವಿದ್ಯಾಲಯದ ಕಚೇರಿಗೆ ಬಂದು ವಿದ್ಯಾಲಯ ಪ್ರಮಾಣಪತ್ರಗಳನ್ನು ಮತ್ತು ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ.