ಶ್ರೀಮಂಗಲ, ಜು. ೧೨: ಕಾವೇರಿ ತಾಯಿಯ ಬಗ್ಗೆ ಹಾಗೂ ಕೊಡವ ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿರುವುದನ್ನು ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ, ಸಾಂಸ್ಕೃತಿಕ ಸಂಸ್ಥೆ ಹಾಗೂ ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿಗಣೇಶ ಸೇವಾ ಸಮಿತಿಯ ಸದಸ್ಯರು ತೀವ್ರವಾಗಿ ಖಂಡಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.
ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದನ್ನು ಖಂಡಿಸಿ ತಕ್ಷಣವೇ ಈ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಮೂರು ಸಂಸ್ಥೆಗಳ ಸದಸ್ಯರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಈ ಸಂಬAಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಯಿತು.
ಈ ಸಂದರ್ಭ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್, ಉಪಾಧ್ಯಕ್ಷ ಮಾಣೀರ ವಿಜಯ್ ನಂಜಪ್ಪ, ಕಾರ್ಯದರ್ಶಿ ಮನ್ನೇರ ರಮೇಶ್, ಕ್ರೀಡೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಸಂಚಾಲಕ ಚಟ್ಟಂಗಡ ರವಿ ಸುಬ್ಬಯ್ಯ, ನಿರ್ದೇಶಕರಾದ ತಡಿಯಂಗಡ ಕರುಂಬಯ್ಯ, ಮನ್ನೇರ ಕಾವೇರಮ್ಮ, ಕೋಟ್ರಮಡ ಸುಮಂತ್, ತಾವಳಗೇರಿ ಮೂಂದ್ ನಾಡ್ನ ನಾಡ್ ತಕ್ಕ ಕೈಬಿಲೀರ ಹರೀಶ್ ಅಪ್ಪಯ್ಯ, ಸದಸ್ಯರಾದ ಉಳುವಂಗಡ ಉದಯ, ಸಂಭ್ರಮ ಪೊಮ್ಮಕ್ಕಡ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಕಾರ್ಯದರ್ಶಿ ಉಳುವಂಗಡ ಕಾವೇರಿ ಉದಯ, ನಿರ್ದೇಶಕರಾದ ಅಜ್ಜಮಾಡ ಪ್ರಮೀಳ ಕರುಂಬಯ್ಯ, ಬೊಳ್ಳಜೀರ ಸುಶೀಲ ಅಶೋಕ್, ಸದಸ್ಯೆಯರಾದ ಮನ್ನೇರ ಸರಸ್ವತಿ ರಮೇಶ್, ಮುಕ್ಕಾಟಿರ ಉಷಾ, ಪೆಮ್ಮಂಡ ಸಬಿತಾ ಕುಶಾಲಪ್ಪ, ಕರ್ತಮಾಡ ಪ್ರತಿಮ, ಚಿಮ್ಮಚ್ಚಿರ ಹರಿಣಿ, ಮುಕ್ಕಾಟಿರ ದಿವ್ಯ ಹಾಗೂ ಸಾರ್ವಜನಿಕ ಗೌರಿ ಗಣೇಶ ಸಮಿತಿಯ ಸದಸ್ಯರು ಹಾಜರಿದ್ದರು.
ಅಂಜಿಕೇರಿ ಕೂಟ
ಸಮಾಜದ ಸ್ವಾಸ್ಥ÷್ಯ ಕದಡುವ ದುರುದ್ದೇಶ ಹೊಂದಿರುವವರನ್ನು ಕಾನೂನಾತ್ಮಾಕವಾಗಿ ಪಾರದರ್ಶಕ ರೀತಿಯಲ್ಲಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಂಜಿಕೇರಿ ಕೂಟದಿಂದ ಒತ್ತಾಯ ಮಾಡಲಾಯಿತು.
ದಕ್ಷಿಣ ಕೊಡಗಿನ ಹುದಿಕೇರಿಯ ಸಂಘದ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಲಾಯಿತು.