ವೀರಾಜಪೇಟೆ, ಜು. ೧೨: ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್, ಸಿಬ್ಬಂದಿಗಳಾದ ಕೋಮಲ, ಐವಾನ್ ಡಿಸೋಜಾ, ನೋಡೆಲ್ ಅಧಿಕಾರಿ ಆಫ್ರದ್, ವಾರ್ಡಿನ ಸದಸ್ಯ ರಾಜೇಶ್.ಡಿ.ಪಿ ಮಲೆತಿರಿಕೆ ಬೆಟ್ಟಕ್ಕೆ ಭೇಟಿ ನೀಡಿ ಜನರ ಸುರಕ್ಷತೆಯ ದೃಷ್ಟಿಯಿಂದ ಕಾಳಜೀ ಕೇಂದ್ರಕ್ಕೆ ಬರುವಂತೆ ಮನವೊಲಿಕೆಗೆ ಮುಂದಾದರು. ಆದರೆ ಅಲ್ಲಿನ ನಿವಾಸಿಗಳು ‘ನೀವು ವರ್ಷಂಪ್ರತಿ ಮೂರು ದಿನಕ್ಕೆ ಕರೆದುಕೊಂಡು ಹೋಗುತ್ತೀರಾ ನಂತರ ಮನೆಗೆ ವಾಪಾಸ್ ಕಳುಹಿಸುತ್ತೀರಾ ನಮಗೆ ಕೆಲಸವೂ ಇಲ್ಲ, ಸಂಬಳವು ಇಲ್ಲ. ನೀವು ಬೇರೆ ಕಡೆ ಮನೆಯನ್ನೂ ಕಟ್ಟಿಕೊಡುವುದಿಲ್ಲ. ಹಾಗಾಗಿ ನಾವೂ ಎಲ್ಲಿಗೂ ಬರುವುದಿಲ್ಲ’ ಎಂದು ಹೇಳಿದರು.
ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ಮುಖ್ಯಾಧಿಕಾರಿ, ನೆಹರುನಗರದ ಏಳು ಕುಟುಂಬಗಳನ್ನು ಈಗಾಗಲೇ ಸಂತ ಅನ್ನಮ್ಮ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಮಲೆತಿರಿಕೆ ಬೆಟ್ಟದ ೫೭ ಕುಟುಂಬಗಳಿಗೆ ಈಗಾಗಲೇ ನೋಟೀಸ್ ನೀಡಿ ಖುದ್ದು ಹೋಗಿ ಕರೆದರೂ ಅವರುಗಳು ಬರಲು ಒಪ್ಪುತ್ತಿಲ್ಲ.
ಕೆಲವರು ಕಾಳಜಿ ಕೇಂದ್ರಕ್ಕೆ ಬರುವುದಿಲ್ಲ ಎಂದು ಸಂಬAಧಿಕರ ಮನೆಗೆ ತೆರಳಿದ್ದಾರೆ. ಉಳಿದವರು ಯಾರು ಬರಲು ಒಪ್ಪುತ್ತಿಲ್ಲ ಎಂದು ತಿಳಿಸಿದರು.