ಗೋಣಿಕೊಪ್ಪಲು, ಜು.೧೧: ಒಂದೆಡೆ ಮಳೆ ಇನ್ನೊಂದೆಡೆ ಕಾಡಾನೆಗಳ ಉಪಟಳ ಇವೆರಡರ ಮಧ್ಯೆ ರೈತನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಷ್ಟ ಪಟ್ಟು ಬೆಳೆದ ಬಾಳೆ ಫಸಲು ಇನ್ನೇನು ಕಟಾವಿಗೆ ಬರುವ ಸಂದರ್ಭದಲ್ಲಿ ಕಾಡಾನೆಗಳು ಬೆಳೆಗಳನ್ನು ತಿಂದು ನಾಶಪಡಿಸುತ್ತಿವೆ.

ಪೊನ್ನಂಪೇಟೆ ಹೋಬಳಿಯ ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ವಾಸವಿರುವ ರೈತ ಗಿರೀಶ್ ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಫಸಲಿಗೆ ಬಂದಿದ್ದ ಬಾಳೆ ಬೆಳೆಗಳು ಹಾಳಾಗಿವೆ. ವಿಪರೀತ ಸುರಿಯುತ್ತಿರುವ ಮಳೆಯಲ್ಲಿ ರೈತರು ತಮ್ಮ ತೋಟಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ತೋಟದಲ್ಲಿ ನೆಲೆ ನಿಂತಿರುವ ಕಾಡಾನೆ ಗಳು ಒಂದು ತೋಟ ದಿಂದ ಮತ್ತೊಂದು ತೋಟಕ್ಕೆ ಯಾವುದೇ ಭಯವಿಲ್ಲದೆ ಸಂಚರಿಸುತ್ತಾ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತಿವೆೆ. ತೋಟದಲ್ಲಿರುವ ಕಾಡಾನೆಗಳನ್ನು ಓಡಿಸಲು ರೈತನಿಗೆ ಕಾಫಿ ತೋಟಕ್ಕೆ ತೆರಳಲು ಕಷ್ಟವಾಗುತ್ತಿದೆ. ಭಯದ ವಾತಾವರಣದ ನಡುವೆ ರೈತ ಕಾಡಾನೆಗಳ ಸಂಚಾರವನ್ನು ಸೂಕ್ಷö್ಮವಾಗಿ ಪರಿಶೀಲಿಸಿ ನಂತರ ತನ್ನ ಬಾಳೆ ತೋಟಕ್ಕೆ ತೆರಳುತ್ತಿ ದ್ದಾನೆ.

ಸುತ್ತ ಮುತ್ತಲಿನ ರೈತರ ತೋಟದಲ್ಲಿ ಕಾಡಾನೆಗಳು ನೆಲೆ ನಿಂತಿರುವುದರಿAದ ಈ ಭಾಗದಲ್ಲಿ ನಾಗರಿಕರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.