ಮಡಿಕೇರಿ, ಜು. ೧೧: ಶ್ರೀಮಂಗಲ ನಾಡು ಕೊಡವ ಸಮಾಜ ವತಿಯಿಂದ ಕೊಡವರ ಬಗ್ಗೆ, ಕಾವೇರಿ ತಾಯಿಯ ಬಗ್ಗೆ ಅವಹೇಳನಕಾರಿ ಸಂದೇಶ ಹಾಕಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಲಾಗಿದೆ. ಸಮಾಜದ ಅಧ್ಯಕ್ಷ ಚೋನಿರ ರತನ್, ಕಾರ್ಯದರ್ಶಿ ಮಚ್ಚಾಮಾಡ ವಿಜಯ್, ಕಾನೂನು ಸಲಹೆಗಾರ ಕಳ್ಳಂಗಡ ರಜಿತ್ ಪೂವಣ್ಣ, ಎಂ.ಟಿ. ಕಾರ್ಯಪ್ಪ, ಪೊಮ್ಮಕ್ಕಡ ಕೂಟ ಅಧ್ಯಕೆÀ್ಷ ನೆಲ್ಲಿರ ನೀನಾ ಪೂಣಚ್ಚ, ಕಾರ್ಯದರ್ಶಿ ನಂದಿತಾ ಕಾರ್ಯಪ್ಪ, ಉಪಾಧ್ಯಕ್ಷೆ ಕಾಳಿಮಾಡ ಸೀಮಾ ಪ್ರಶಾಂತ್, ಕಾನೂನು ಸಲಹೆಗಾರ್ತಿ ರಿಸ್ತಾ ಚಂಗಪ್ಪ, ಸದಸ್ಯರಾದ ಕರ್ತಮಾಡ ಪ್ರತಿಮಾ, ರಜೀತ, ರೋಜಿ, ಪೆಮ್ಮಂಡ ಸಬಿತ, ಕಾಳಿಮಾಡ ಚಂಚಲ್, ಕಳ್ಳಂಗಡ ಶರಣು, ಕಾಳಿಮಾಡ ಬೆಳ್ಳಿಯಪ್ಪ ಇದ್ದರು. ಪುಕಾರು ಸ್ವೀಕರಿಸಿದ ಠಾಣಾಧಿಕಾರಿ ರವಿ ಶಂಕರ್ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾ
ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿ ಮಾತೆ ಹಾಗೂ ಕೊಡವ ಯುವತಿಯರ ಬಗ್ಗೆ ಹೀನಾಯವಾಗಿ ಹೇಳಿಕೆಗಳನ್ನು ಹರಿಯಬಿಟ್ಟಿರುವುದನ್ನು ಕೊಡಗು ಜಿಲ್ಲಾ ಮಹಿಳಾ ಮೋರ್ಚಾ, ವೀರಾಜಪೇಟೆ ತಾಲೂಕು ಮಹಿಳಾ ಮೋರ್ಚಾ ಖಂಡಿಸಿದೆ.
ಮಡಿಕೇರಿ ಗೌಡ ಮಹಿಳಾ ಮೋರ್ಚಾದಿಂದ ಖಂಡಿಸುವುದಾಗಿ ನಗರ ಅಧ್ಯಕ್ಷೆ ಸವಿತಾ ರಾಕೇಶ್, ಕಾರ್ಯದರ್ಶಿ ಶ್ವೇತಾ ಪ್ರಶಾಂತ್, ಭವಾನಿ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಕೊಡವ ಕೂಟಾಳಿಯಡ ಕೂಟ
ಸಾಮಾಜಿಕ ಜಾಲತಾಣದಲ್ಲಿ ತನಗಿಷ್ಟ ಬಂದAತೆ ಕೊಡವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಯ ಬಗ್ಗೆ ಈಗಾಗಲೇ ಕೊಡವ ಸಂಘಟನೆಗಳು ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ವಿಚಾರಿಸಿರುತ್ತಾರೆಂದು ತಿಳಿದುಬಂದಿದೆ. ಇದೀಗ ಆತ ತನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದು ತನ್ನ ಬಿಡುಗಡೆಯ ರೂಪುರೇಷೆಗಳನ್ನೂ ತಯಾರಿಸಿಕೊಂಡು ಸಮರ್ಥಿಸಿಕೊಳ್ಳುವ ಯಾವುದೇ ಹೇಳಿಕೆಗಳ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಪರಾಧಕ್ಕೆ ತಕ್ಕ ಶಿಕ್ಷೆ ನೀಡಬೇಕಾಗಿ ಕೊಡವ ಕೂಟಾಳಿಯಡ ಕೂಟ ಆಗ್ರಹಿಸಿದೆ. ಇಂತಹ ಕೃತ್ಯ ಎಸಗುವ ದುಷ್ಕರ್ಮಿಗಳಿಗೆ ಪಾಠ ಕಲಿಸುವಂತೆ ಪೊಲೀಸ್ ಇಲಾಖೆಯು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೂಟದ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್, ಆಡಳಿತ ಮಂಡಳಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಬಾಳೆಲೆ ಕೊಡವ ಸಮಾಜ ಖಂಡನೆ
*ಗೋಣಿಕೊಪ್ಪ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹಗಳೊಂದಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಿಡಿಗೇಡಿತನವನ್ನು ಬಾಳೆಲೆ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕೂಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ ಅವರು, ಇತ್ತೀಚಿಗೆ ಭಾವನೆಗಳಿಗೆ ಧಕ್ಕೆ ತರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಕಾರ್ಯ ವ್ಯಾಪಕವಾಗುತ್ತಿದ್ದು, ಇದು ಖಂಡನೀಯವಾಗಿದೆ ಎಂದು ಹೇಳಿದ್ದಾರೆ.