ಕುಶಾಲನಗರ, ಜು. ೧೧: ಮೈಸೂರು ರಸ್ತೆಯ ಇಲವಾಲ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಲಕೊಪ್ಪೆಯ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಬೈಲುಕೊಪ್ಪೆಯ ಹೊಟೇಲ್ ಉದ್ಯಮಿ ಮೋಹನ್ (೬೨) ಮತ್ತು ಅವರ ಅಳಿಯ ತಾತ್ಕಾಲಿಕ ಪೋಸ್ಟ್ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿನೋದ್ (೨೯) ಮೃತಪಟ್ಟ ದುರ್ದೈವಿಗಳು.
ಬೈಲಕೊಪ್ಪದಿಂದ ಮೈಸೂರಿಗೆ ಮಾರುತಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇಲವಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.