ನಾಪೋಕ್ಲು, ಜು. ೧೦: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಮಾವಟಿ ಗ್ರಾಮದ ಕೋಟೆರ ಎಂ.ಸುಬ್ಬಯ್ಯ ಅವರ ಮನೆಯ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ಅವರ ಕುಟುಂಬಸ್ಥರು ಪುರಾತನ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಕಳ್ಳತನ ಮಾಡಿದ್ದ ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನಾಂಕ ೧೫.೦೩.೨೦೨೨ರಂದು ದೇವರ ವಿಗ್ರಹ ಕಳೆದು ಹೋಗಿರುವ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ನಾಪೋಕ್ಲು ಪೊಲೀಸರು ಕೇರಳ ಮೂಲದ ಅಬ್ದುಲ್ಲಾ ಜಾಹೀದ್ ಸುಲ್ತಾನ್ (೨೩), ಮಹಮ್ಮದ್ ಫೈರೋಜ಼್ (೩೫), ತಹಸೀನ್ ಸಭಾ (೨೩), ಪಾನ್ವಾಜ್ (೪೫) ಎಂಬ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ್ದ ಸುಮಾರು ಒಂದೂವರೆ ಲಕ್ಷ ರೂ ಬೆಲೆಬಾಳುವ ಪುರಾತನ ಕಾಲದ ಪಂಚಲೋಹ ದಂತಿರುವ ಚಾಮುಂಡೇಶ್ವರಿ ವಿಗ್ರಹ, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮೆಟಲ್ ಡಿಟೆಕ್ಟರ್, ಕೆಎಲ್-೧೧-ಎಕ್ಸ್-೫೦೦೬ ನಂಬರ್ನ ಬಿಳಿ ಬಣ್ಣದ ಕ್ರೇಟಾ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ಎ.ಅಯ್ಯಪ್ಪ, ಮಡಿಕೇರಿ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಎಂ.ಕೆ.ಸದಾಶಿವ, ಎ.ಎಸ್.ಐ ಕುಶಾಲಪ್ಪ, ಸಿಬ್ಬಂದಿಗಳಾದ ರವಿಕುಮಾರ್, ಸಾಜನ್, ಲವಕುಮಾರ್, ನವೀನ್, ಮಧುಸೂದನ್, ಮಾಚಯ್ಯ, ಶರತ್ ಕುಮಾರ್, ಗಿರೀಶ್, ಗಣೇಶ್, ರಾಜೇಶ್, ಪಂಚಲಿAಗ, ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಕಾಳಿಯಪ್ಪ, ಪ್ರೇಮ್ಕುಮಾರ್, ಶೋಭಾ ಮತ್ತು ಸಿಡಿಆರ್ ಸೆಲ್ನ ರಾಜೇಶ್, ಗಿರೀಶ್, ಪ್ರವೀಣ್ ಹಾಗೂ ಚಾಲಕರಾದ ಶರೀಫ್, ಉಮೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ಪ್ರಭಾಕರ್