ಮಡಿಕೇರಿ, ಜು. ೧೦: ಕುಶಾಲನಗರ ತಾಲೂಕು, ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಅಂದÀಗೋವೆ, ಕಾನ್ಬೈಲು, ಬೈಚನಹಳ್ಳಿ, ನಾಕೂರು ಶಿರಂಗಾಲ, ಕಲ್ಲೂರು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯನ್ನು ತಾ. ೧೧ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ನಡೆಸಲಾಗು ವುದು. ಈ ಸಂದರ್ಭ ನಾಕೂರು ಶಿರಂಗಾಲ, ಅಂದಗೋವೆ, ಕಾನ್ಬೈಲು, ಬೈಚನಹಳ್ಳಿ, ಕಲ್ಲೂರು ಗ್ರಾಮ, ೭ನೇ ಹೊಸಕೋಟೆಯ ಕಲ್ಲುಕೋರೆ ವ್ಯಾಪ್ತಿಯ ಕಾಫಿ ತೋಟದ ಮಾಲೀಕರು, ಕಾರ್ಮಿಕರು, ವಾಹನ ಸವಾರರು, ಸಾರ್ವಜನಿಕರು ಎZ್ಚÀರಿಕೆ ಯಿಂದ ಇದ್ದು ಕಾರ್ಯಾಚರಣೆಗೆ ಸಹಕರಿಸಬೇಕೆಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಮನವಿ ಮಾಡಿದ್ದಾರೆ.