ಸಿದ್ದಾಪುರ, ಜು. ೧೦: ಅಮ್ಮತ್ತಿ ಹೋಬಳಿ ಮೇಕೂರು-ಹೊಸ್ಕೇರಿ ಗ್ರಾಮದ ಪೈಸಾರಿ ಸರ್ವೆ ನಂಬರ್ ೧೬೦/೫ಂ ರ ಸರ್ಕಾರಿ ಪದವಿಪೂರ್ವ ಕಾಲೇಜು ಪಾಲಿಬೆಟ್ಟ ಅವರಿಗೆ ಸಂಬAಧಿಸಿದ ಜಾಗವನ್ನು ತಹಶೀಲ್ದಾರರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸ್ ಬಂದೋಬಸ್ತಿನೊAದಿಗೆ ಅನಧಿಕೃತ ಒತ್ತುವರಿಯಾಗಿರುವ ೦.೦೨ ಸೆಂಟ್ ಜಾಗವನ್ನು ತೆರವುಗೊಳಿಸಲಾಯಿತು. ಈ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲಕ್ಕಿಗರಾದ ಬಣಕರ್, ಶ್ರೀಕಾಂತ್, ಮುತ್ತಪ್ಪ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.