ಮಡಿಕೇರಿ, ಜು. ೯: ಜಿಲ್ಲೆಯಾದ್ಯಂತ ಮಳೆ-ಚಳಿಯ ವಾತಾವರಣ ಮುಂದುವರಿದಿದೆ. ವ್ಯಾಪಕ ಮಳೆ, ಶಾಲಾ-ಕಾಲೇಜುಗಳಿಗೆ ರಜೆ ಇರುವ ಕಾರಣದಿಂದಾಗಿ ಹಾಗೂ ಎರಡನೇ ಶನಿವಾರ ರಜಾ ಹಿನ್ನೆಲೆಯಲ್ಲಿ ಈ ದಿನ ಜನ ಸಂಚಾರ ಬಹುತೇಕ ಎಲ್ಲೆಡೆ ವಿರಳವಾಗಿತ್ತು.

ಒಂದನೇ ಮೊಣ್ಣಂಗೇರಿಯಲ್ಲಿ ಅರಿಮಂಡ ಕುಟುಂಬದ ಐನ್‌ಮನೆ ನೆಲಸಮವಾದ ಘಟನೆ ನಡೆದಿದೆ. ದುಬಾರೆಯಲ್ಲಿ ಯಾಂತ್ರಿಕ ಬೋಟ್ ಸ್ಥಗಿತಗೊಂಡು ೧೦ ಮಂದಿ ಸಿಲುಕಿ ಪರದಾಡಿದ ಘಟನೆ ನಡೆದಿದೆ. ಬಳಿಕ ಬೇರೆ ಬೋಟ್ ಮೂಲಕ ಅವರನ್ನು ರಕ್ಷಿಸಲಾಯಿತು.

ಕಳೆದ ಎರಡು ದಿನಗಳ ಹಿಂದೆ ಇದ್ದಂತಹ ಮಳೆಯ ತೀವ್ರತೆ ಬೆಳಿಗ್ಗೆ ತುಸು ಇಳಿಮುಖವಾದಂತಿದ್ದರೂ, ಮಧ್ಯಾಹ್ನದ ನಂತರ ರಭಸವಾಗುತ್ತಿದೆ. ಜಿಲ್ಲೆಯಾದ್ಯಂತ ಮಳೆ ಮತ್ತಷ್ಟು ತೀವ್ರಗೊಂಡಿರುವ ಕುರಿತು ವರದಿಯಾಗಿದೆ. ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ.

ಬರೆ ಕುಸಿತ, ವಿದ್ಯುತ್ ವ್ಯತ್ಯಯದಂತಹ ಪ್ರಕರಣಗಳು ಹಲವೆಡೆ ಮತ್ತೆ ಮುಂದುವರಿದಿದ್ದು, ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨.೦೬ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೩.೪೪ ಇಂಚು, ವೀರಾಜಪೇಟೆ ೧.೪೭ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೩.೭೨ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ.

ಭಾಗಮಂಡಲ ಹೋಬಳಿಯಲ್ಲಿ ೪.೫೬, ಮಡಿಕೇರಿ ಹೋಬಳಿಯಲ್ಲಿ ೩.೧೧, ನಾಪೋಕ್ಲು ೨.೬೫, ಸಂಪಾಜೆ ಹೋಬಳಿಗೆ ಕಳೆದ ೨೪ ಗಂಟೆಯಲ್ಲಿ ೩.೪೬ ಇಂಚು ಮಳೆ ಬಿದ್ದಿದೆ. ವೀರಾಜಪೇಟೆ ಹೋಬಳಿಯಲ್ಲಿ ೨.೧೭, ಹುದಿಕೇರಿ ೧.೭೭, ಶ್ರೀಮಂಗಲ ೧.೬೪, ಪೊನ್ನಂಪೇಟೆ ೧.೪೦, ಅಮ್ಮತ್ತಿ ೧.೨೮, ಬಾಳೆಲೆಯಲ್ಲಿ ೦.೬೦ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಹೋಬಳಿಯಲ್ಲಿ ೧.೦೬, ಶನಿವಾರಸಂತೆ ೧.೦೮, ಶಾಂತಳ್ಳಿ ೨.೯೨, ಕೊಡ್ಲಿಪೇಟೆ ೦.೫೭, ಕುಶಾಲನಗರ ೦.೬೪, ಸುಂಟಿಕೊಪ್ಪ ೧.೭೬ ಇಂಚು ಮಳೆ ದಾಖಲಾಗಿದೆ.

ಮನೆ ನೆಲಸಮ

ಮಡಿಕೇರಿ: ಭಾರೀ ಮಳೆಗೆ ಅರಿಮಂಡ ಕುಟುಂಬದ ಐನ್ ಮನೆ ನೆಲಸಮವಾದ ಘಟನೆ ನಡೆದಿದೆ.

ಶನಿವಾರ ಬೆಳಿಗ್ಗಿನ ಜಾವ ೩ ಗಂಟೆ ಸುಮಾರಿಗೆ ಭಾರೀ ಗಾಳಿ-ಮಳೆಗೆ ಒಂದನೇ ಮೊಣ್ಣಂಗೇರಿಯಲ್ಲಿರುವ ಅರಿಮಂಡ ಕುಟುಂಬದ ಐನ್‌ಮನೆ ಧರಾಶಾಯಿಯಾಗಿದೆ. ಐನ್‌ಮನೆಯಲ್ಲಿ ಘಟನೆ ನಡೆದ ದಿನದಂದು ಯಾರು ಇಲ್ಲದ ಹಿನ್ನೆಲೆ ಪ್ರಾಣಾಪಾಯ ತಪ್ಪಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ತೆರಳಿ ಪರಿಶೀಲನೆ ನಡೆಸಿ ಪರಿಹಾರಕ್ಕೆ ಕ್ರಮಕೈಗೊಂಡಿದ್ದಾರೆ.

ಯಾAತ್ರಿಕ ಬೋಟ್ ಸ್ಥಗಿತ

ಕುಶಾಲನಗರ: ದುಬಾರೆ ಕಾವೇರಿ ನದಿಯಲ್ಲಿ ಯಾಂತ್ರಿಕ ಬೋಟ್‌ವೊಂದರಲ್ಲಿ ತೆರಳುತ್ತಿದ್ದ ಸಂದರ್ಭ ೧೦ ಮಂದಿ

(ಮೊದಲ ಪುಟದಿಂದ) ಅಪಾಯಕ್ಕೆ ಸಿಲುಕಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ತುಂಬಿ ಹರಿಯುತ್ತಿದ್ದ ನದಿಯಲ್ಲಿ ದುಬಾರೆ ಶಿಬಿರದ ಹಾಡಿ ನಿವಾಸಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಬೋಟ್ ಇಂಜಿನ್ ಸ್ಥಗಿತಗೊಂಡ ಕಾರಣ ಬೋಟ್ ನಡೆಸುತ್ತಿದ್ದ ಚಾಲಕ ತಕ್ಷಣ ನದಿ ನಡುವೆ ಇದ್ದ ಮರದ ಸಹಾಯದಿಂದ ಯಾವುದೇ ಅಪಾಯ ಸಂಭವಿಸದAತೆ ಎಚ್ಚರವಹಿಸಿದ್ದಾರೆ. ತಕ್ಷಣ ಮಾಹಿತಿ ತಿಳಿದ ಅರಣ್ಯ ಇಲಾಖೆ ಮತ್ತೊಂದು ಬೋಟ್ ಮೂಲಕ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು ಅರ್ಧ ಗಂಟೆಗಳ ಕಾಲ ಬೋಟ್‌ನಲ್ಲಿ ಇದ್ದ ೧೦ ಮಂದಿ ಏನೂ ತೋಚದೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ದೃಶ್ಯ ಕಂಡುಬAತು. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದುಬಾರೆ ಆನೆ ಶಿಬಿರಕ್ಕೆ ಕಳೆದ ೭ ದಿನಗಳಿಂದ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.ಮಡಿಕೇರಿ: ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಪ್ಪ ಪೂಜಾರಿ ಎಂಬವರ ವಾಸದ ಮನೆಯ ಹಿಂಭಾಗದಲ್ಲಿನ ತಡೆಗೋಡೆ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದ್ದು, ಬೀಳುವ ಹಂತದಲ್ಲಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಭಾಗಮಂಡಲ: ಭಾಗಮಂಡಲದಲ್ಲಿ ಇಂದು ಮಧ್ಯಾಹ್ನದ ನಂತರ ಮಳೆಯ ಪ್ರಮಾಣ ಜಾಸ್ತಿ ಆಗಿದ್ದು ಭಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಸಂಜೆ ವೇಳೆಗೆ ವಾಹನ ಸಂಚಾರ ಸ್ಥಗಿತಗೊಂಡಿದೆ. ತಲಕಾವೇರಿ-ಭಾಗಮಂಡಲ ರಸ್ತೆಯಲ್ಲಿ ಮರವೊಂದು ಬಿದ್ದಿದ್ದು, ಅದನ್ನು ತೆರವುಗೊಳಿಸಲಾಗಿದೆ.ಶನಿವಾರಸಂತೆ: ಮಳೆಯಿಂದ ಕೊಡ್ಲಿಪೇಟೆ-ಅರಕಲಗೂಡು ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಶನಿವಾರಸಂತೆ ವಲಯದ ಅರಣ್ಯ ಇಲಾಖಾ ಸಿಬ್ಬಂದಿ ತೆರವುಗೊಳಿಸಿದರು.ಸಿದ್ದಾಪುರ: ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಳತ್ಮಾಡು ಗ್ರಾಮದ ಚಿಕ್ಕಯ್ಯ ಎಂಬವರ ಮನೆ ಭಾಗಶಃ ಕುಸಿದು ಬಿದ್ದಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡಿಕೇರಿ: ಕೊಯನಾಡುವಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟೆ ಬದಿಯಲ್ಲಿ ನಿರ್ಮಿಸಲಾಗಿರುವ ರಕ್ಷಣಾ ತಡೆಗೋಡೆ ಮಳೆಯಿಂದಾಗಿ ಬಿರುಕುಬಿಟ್ಟಿದ್ದು, ಮಳೆಯ ರಭಸ ಮುಂದುವರಿದಲ್ಲಿ ಅಣೆಕಟ್ಟೆಗೆ ಹಾನಿಯಾಗುವ ಸಾಧ್ಯತೆ ಇದೆ.

-ಮಹಮದ್ ಕುಂಞಸಿದ್ದಾಪುರ : ಮಳೆ ಅಬ್ಬರದಿಂದ ನದಿಯ ನೀರಿನ ಪ್ರಮಾಣ ಏರಿಕೆಯಾಗಿದ್ದು ನೆಲ್ಯಹುದಿಕೇರಿಯ ಪ್ರವಾಹ ಪೀಡಿತ ಪ್ರದೇಶಗಳಾದ ಕುಂಬಾರಗುAಡಿ, ಬೆಟ್ಟದಕಾಡು ಸ್ಥಳಕ್ಕೆ ಕುಶಾಲನಗರ ತಾಲೂಕು ಉಪತಹಶೀಲ್ದಾರ್ ಮದುಸೂದನ್, ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಿಗ ಸಚಿನ್ ಭೇಟಿನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಸಮಾಲೋಚಿಸಿದರು. ಅಲ್ಲದೆ ನಿರಾಶ್ರಿತರ ಕೇಂದ್ರಗಳನ್ನು ಗುರುತಿಸಿದರು.ಕಣಿವೆ: ಹಾರಂಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚು ನೀರು ಹರಿಸಲಾಗಿದ್ದು, ಕೂಡಿಗೆ ವ್ಯಾಪ್ತಿಯ ಲೋಕೇಶ್ ಎಂಬವರ ಅಡಿಕೆ ಕೃಷಿ ಜಮೀನಿಗೆ ನೀರು ನುಗ್ಗಿದೆ.ರಸ್ತೆಯಂಚಿಗೆ ಸರಿದ ಬಸ್

ನಾಪೋಕ್ಲು: ಭಾಗಮಂಡಲ ದಿಂದ ನಾಪೋಕ್ಲು ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಾರಾಣೆ ಸಮೀಪ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿಗೆ ಸರಿದ ಘಟನೆ ನಡೆಯಿತು.ಸೋಮವಾರಪೇಟೆ, ಜು. ೯: ತಾಲೂಕು ಪಂಚಾಯಿತಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ತಾಲೂಕಿನ ೧೨ ಮಂದಿ ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ಶಾಸಕ ಅಪ್ಪಚ್ಚು ರಂಜನ್ ವಿತರಿಸಿದರು.

ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧನ, ಗಾಲಿ ಕುರ್ಚಿ, ವಾಕರ್, ಕನ್ನಡಕಗಳನ್ನು ವಿತರಿಸಲಾಯಿತು. ಈ ಸಂದರ್ಭ ಬಸವಾಪಟ್ಟಣದ ಮಠಾಧೀಶರಾದ ಶ್ರೀಸ್ವತಂತ್ರ ಬಸವಲಿಂಗ ಸ್ವಾಮೀಜಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಜಿ. ವಿಮಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ತಾಲೂಕು ನೋಡಲ್ ಅಧಿಕಾರಿ ಪ್ರದೀಪ್, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.