ಜುಲೈ ೧೧ನ್ನು ವಿಶ್ವ ಜನಸಂಖ್ಯಾ ದಿನವೆಂದು ಆಚರಿಸಲಾಗುತ್ತದೆ. ಮಿತಿಮೀರಿದ ಜನಸಂಖ್ಯೆ ದೇಶದ ಅಭಿವೃದ್ಧಿಗೆ ತೊಡಕಾಗುವುದು. ಭಾರತವು ಜನಸಂಖ್ಯಾ ಸ್ಫೋಟದಿಂದ ತತ್ತರಿಸಿ ಹೋಗಿದೆ. ಇದರಿಂದ ಜೀವನ ಮಟ್ಟವು ಕುಸಿಯುವುದು. ಭಾರತದಲ್ಲಿ ಮೊದಲನೇ ಜನಗಣತಿ ಪ್ರಾರಂಭಗೊAಡು ಮುಗಿದಿದ್ದು ೧೮೭೨ ರಲ್ಲಿ. ಜನಗಣತಿಯು ಹತ್ತು ವರ್ಷಗಳಿಗೊಮ್ಮೆ ನಡೆಯುತ್ತದೆ. ೨೦೦೧ ರಲ್ಲಿ ನಡೆದ ಜನಗಣತಿ ೧೪ನೇ ಜನಗಣತಿಯಾಗಿದೆ. ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಒಂದು ದೊಡ್ಡ ಸಮಸ್ಯೆಯಾಗಿಯೇ ಪರಿಣಮಿಸಿದೆ. ಏರಿದ ಜನಸಂಖ್ಯೆಯಿAದ ನಿರುದ್ಯೋಗ ಸಮಸ್ಯೆ ಉದ್ಭವಿಸುವುದು. ಚೀನಾದಲ್ಲಿ ಪ್ರಯಾಸದಿಂದ ಕೂಡಿರುವ ಜನಗಣತಿ ನಡೆಯುವುದಿಲ್ಲ. ಅಲ್ಲಿ ಮನೆ ಮನೆಗೂ ಹೋಗಿ ಜನಗಣತಿ ಮಾಡುವುದಿಲ್ಲ. ಜನಗಣತಿಯ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಜನಗಣತಿ ಕೇಂದ್ರಗಳಿಗೆ ಹಿಂತಿರುಗಿಸುವ ಪದ್ಧತಿಯಿದೆ. ಈ ರೀತಿಯ ಜನಗಣತಿಯಿಂದ ಪೂರ್ಣ ಜನಗಣತಿ ಅಸಾಧ್ಯ. ೧೯೯೧ ರಲ್ಲಿ ಭಾರತದಲ್ಲಿ ನಡೆದ ಜನಗಣತಿ ಪ್ರಕ್ರಿಯೆಗೆ ೪೦೦ ಕೋಟಿ ವೆಚ್ಚವಾಯಿತು. ಈಗ ವಿಶ್ವದ ಜನಸಂಖ್ಯೆಯು ೬ ಬಿಲಿಯನ್‌ಕ್ಕಿಂತಲೂ ಹೆಚ್ಚಿದೆ.

ಭಾರತದಲ್ಲಿ ಸ್ವಾತಂತ್ರö್ಯ ಪೂರ್ವದಲ್ಲಿ ಇದ್ದ ಜನಸಂಖ್ಯೆ ಕೇವಲ ೩೫ ಕೋಟಿ. ೨೦೪೦ ರಲ್ಲಿ ಭಾರತದ ಜನಸಂಖ್ಯೆ ೧೫೦ ಕೋಟಿ ದಾಟಲಿದೆ. ಪ್ರಸ್ತುತ ಜನಗಣತಿಯ ಪ್ರಕಾರ ಭಾರತದ ವಿಸ್ತೀರ್ಣ ೩,೦೬,೫೨,೭೦೦ ಚದರ ಮೀಟರ್‌ಗೆ ೧೦೨,೭೦,೧೫,೨೪೭ ಜನಸಂಖ್ಯೆಯನ್ನು ಹೊಂದಿದೆ. ಈಗ ಸಾಕ್ಷರತೆಯ ಮಟ್ಟವು ಏರಿದೆ. ಜನಸಂಖ್ಯೆ ಏರಿಕೆಯಲ್ಲಿ ಬೆಂಗಳೂರು ಪ್ರಥಮ ಸ್ಥಾನ ಪಡೆದರೆ, ಕೊಡಗು ಕೊನೇ ಸ್ಥಾನ ಪಡೆದಿದೆ. ಲಿಂಗಾನುಪಾತದಲ್ಲಿ ಉಡುಪಿ ಪ್ರಥಮ, ಬೆಂಗಳೂರು ಕೊನೆಯ ಸ್ಥಾನ ಪಡೆದಿದೆ.

ದಕ್ಷಿಣ ಕನ್ನಡ, ಬೆಂಗಳೂರು, ಉಡುಪಿ ಸಾಕ್ಷರತಾ ಪ್ರಮಾಣದಲ್ಲಿ ಮೇಲಿನ ಸ್ಥಾನಗಳಲ್ಲಿವೆ. ರಾಯಚೂರು ಅತೀ ಕಡಿಮೆ ಸಾಕ್ಷರತೆ ಸಾಧಿಸಿರುವ ಜಿಲ್ಲೆಯಾಗಿದೆ. ವಿಶ್ವದಲ್ಲೆ ಜನಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ. ಚೀನಾ ಮೊದಲನೆ ಸ್ಥಾನವನ್ನು ಪಡೆದಿದೆ. ಜನಸಂಖ್ಯೆಯ ಏರಿಕೆಯಿಂದ ದೇಶ ಅಭಿವೃದ್ಧಿ ಹೊಂದುವುದಿಲ್ಲ. ನೈಸರ್ಗಿಕ ಸಂಪನ್ಮೂಲಗಳು ಬೇಗನೇ ಖರ್ಚಾಗಿ ಹೋಗುವುವು. ಬೆಲೆಗಳು ಏರುವುವು. ಬಡತನ ಮನೆ ಮಾಡುವುದು. ಆಹಾರದ ಸಮಸ್ಯೆ, ನಿರುದ್ಯೋಗದ ಸಮಸ್ಯೆಗಳು, ಅನಕ್ಷರತೆ ಸಮಸ್ಯೆಗಳು ಉಂಟಾಗುವುವು. ಭಾರತದಲ್ಲಿ ಪ್ರಥಮ ಕುಟುಂಬ ಯೋಜನಾ ಸೇವಾ ಕೇಂದ್ರವನ್ನು ರಾಮನಗರದಲ್ಲಿ ೧೯೩೦ ರಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಮತಧರ್ಮ ಮತ್ತು ಸಾಮಾಜಿಕ ಮೌಲ್ಯಗಳು ಜನಸಂಖ್ಯಾ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ. ಕೃಷಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಎಷ್ಟೇ ಕ್ರಾಂತಿಯಾದರೂ ಏರಿದ ಜನಸಂಖ್ಯೆಯಿAದಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ಭೂಮಿ ಸ್ಥಿರವಾದ ಸಂಪನ್ಮೂಲ ಹೊಂದಿದ್ದು, ಅದು ಜನಸಂಖ್ಯೆ ಬೆಳೆದಂತೆ ಬೆಳೆಯಲಾರದು. ಇದರಿಂದಾಗಿ ಒತ್ತಡ ಹೆಚ್ಚುತ್ತಾ ಹೋಗುವುದು.

ಜನಸಂಖ್ಯಾ ಹೆಚ್ಚಳದಿಂದ ವಸತಿ ಸೌಕರ್ಯದ ಕೊರತೆ, ಕಾಡುಗಳ ನಾಶ, ಪರಿಸರ ಮಾಲಿನ್ಯ ಉಂಟಾಗುವುದು. ಪ್ರಕೃತಿ ನಾಶವಾಗಿ ಪ್ರಕೃತಿ ಸೌಂದರ್ಯ ಹಾಳಾಗುವುದು.

ಜನಸಂಖ್ಯಾ ನಿಯಂತ್ರಣದ ಅರಿವು ಜನರಿಗೆ ಆಗಬೇಕು. ಅರಿವು ಮೂಡಿಸಲು ಸರಕಾರ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಸರಕಾರ ಪರಿಚಯಿಸಿದೆ. ಆದರೂ ಜನಸಂಖ್ಯಾ ನಿಯಂತ್ರಣ ಅಸಾಧ್ಯವಾಗಿದೆ. ಇಂದು ಜನಸಂಖ್ಯಾ ದಿನಾಚರಣೆಯಂದು ಮಾತ್ರ ನಾವು ಎಚ್ಚೆತ್ತುಕೊಳ್ಳಲು ಅವಕಾಶವಾಗಿದೆ. ಜನ, ಸರಕಾರ ಈ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಜನಸಂಖ್ಯಾ ಹೆಚ್ಚಳವು ಅಭಿವೃದ್ಧಿ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ದೇಶದ ಅಭಿವೃದ್ಧಿ ಸಾಧಿಸಲು ಜನಸಂಖ್ಯಾ ನಿಯಂತ್ರಣದ ಬಗ್ಗೆ ಚಿಂತಿಸುವ ಅಗತ್ಯವಿದೆ.

- ಹರೀಶ್ ಸರಳಾಯ, ಮಡಿಕೇರಿ.