ಸೋಮವಾರಪೇಟೆ, ಜು. ೯: ನೆರೆಯ ಹಾಸನ ಜಿಲ್ಲೆಯಲ್ಲಿ ನಿನ್ನೆ ದಿನ ನಡೆದ ದ್ವಿಚಕ್ರ ವಾಹನ ಮತ್ತು ಲಾರಿ ಅವಘಡದಲ್ಲಿ ಜಿಲ್ಲೆಯ ಈರ್ವರು ದುರ್ಮರಣ ಕ್ಕೀಡಾಗಿದ್ದಾರೆ. ಮಗನ ವಿದ್ಯಾಭ್ಯಾಸಕ್ಕಾಗಿ ಹಾಸನದಲ್ಲಿ ನೆಲೆಸಿದ್ದ ತಾಯಿ-ಮಗ ಅಕಾಲಿಕವಾಗಿ ಸಾವನ್ನಪ್ಪಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ತಾಲೂಕಿನ ದೊಡ್ಡಮಳ್ತೆ ಗ್ರಾಮದ ಲಿಂಗರಾಜು ಹಾಗೂ ಬೋಜಮ್ಮ ಅವರ ಪುತ್ರಿ ಸೀಮಾ(೩೮) ಹಾಗೂ ಇವರ ಪುತ್ರ ಮಯೂರ್ (೧೦) ಎಂಬವರುಗಳೇ ಮೃತ ದುರ್ದೈವಿಗಳು. ಸೀಮಾ ಅವರನ್ನು ಸಕಲೇಶಪುರ ತಾಲೂಕು, ಯಸಳೂರು ಹೋಬಳಿಯ ಕರಗೂರು ಕೂಡಿಗೆ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿನೋದ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.

ಪತಿ ಹಾಗೂ ಮಕ್ಕಳೊಂದಿಗೆ ಕೊಲ್ಕತ್ತಾದಲ್ಲಿ ವಾಸವಿದ್ದ ಸೀಮಾ ಅವರು ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಮಗನ ವಿದ್ಯಾಭ್ಯಾಸಕ್ಕಾಗಿ ಹಾಸನ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಪುತ್ರ ಮಯೂರ್‌ನನ್ನು ಹಾಸನದ ಕೇಂದ್ರೀಯ ವಿದ್ಯಾಲಯಕ್ಕೆ ೫ನೇ ತರಗತಿಗೆ ಸೇರ್ಪಡೆ ಮಾಡಿದ್ದರು.

ಎಂದಿನAತೆ ನಿನ್ನೆಯೂ ಸಹ ಮಗನನ್ನು ತಮ್ಮ ಎಲೆಕ್ಟಿçಕ್ ಸ್ಕೂಟರ್‌ನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಹಾಸನದ ಅರಸೀಕೆರೆ ರಸ್ತೆಯ ಬಿ.ಟಿ.ಕೊಪ್ಪಲು ಬಳಿ ಹಿಂಬದಿಯಿAದ ಆಗಮಿಸಿದ ಲಾರಿ ಡಿಕ್ಕಿಯಾಗಿದೆ. ಈ ಸಂದರ್ಭ ತಾಯಿ ಹಾಗೂ ಮಗ ಕೆಳಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಲಾರಿ ಗುದ್ದಿದ ರಭಸಕ್ಕೆ ಸಿಮೆಂಟ್ ರಸ್ತೆಗೆ ಅಪ್ಪಳಿಸಿದ ಈರ್ವರ ದೇಹ ಕ್ಷಣಮಾತ್ರದಲ್ಲಿ ನಿಶ್ಚಲಗೊಂಡಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಸಂಚಾರಿ ಠಾಣೆಯ ಪೊಲೀಸರು ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಳೆದ ತಿಂಗಳಷ್ಟೇ ರಜೆಯ ಮೇಲೆ ಬಂದಿದ್ದ ವಿನೋದ್ ಅವರು ನಾಲ್ಕು ದಿನಗಳ ಹಿಂದಷ್ಟೇ ಮತ್ತೆ ಸೇವೆಗೆ ತೆರಳಿದ್ದರು. ಪತ್ನಿ ಹಾಗೂ ಪುತ್ರನ ಅಕಾಲಿಕ ನಿಧನದ ಸುದ್ದಿ ತಿಳಿದು ಇಂದು

(ಮೊದಲ ಪುಟದಿಂದ) ಬೆಳಿಗ್ಗೆ ಮನೆಗೆ ವಾಪಸ್ ಆಗಮಿಸಿದ ವಿನೋದ್ ಅವರು, ತಮ್ಮ ಪತ್ನಿಯ ಕೋರಿಕೆಯಂತೆ ಅವರ ನೇತ್ರಗಳನ್ನು ಸರ್ಕಾರಿ ಆಸ್ಪತ್ರೆಗೆ ನೀಡುವ ಮೂಲಕ ಸಾರ್ಥಕತೆಯ ಕ್ಷಣಗಳಿಗೆ ಸಾಕ್ಷಿಯಾದರು. ತಾಯಿ ಹಾಗೂ ಮಗನ ಮೃತದೇಹದ ಅಂತಿಮ ಸಂಸ್ಕಾರವನ್ನು ಪತಿಯ ಊರಾದ ಕರಗೂರು ಕೂಡಿಗೆಯಲ್ಲಿ ನೆರವೇರಿಸಲಾಯಿತು. ಮೃತೆ ಸೀಮಾ ಅವರು ಪತಿ ಸೇರಿದಂತೆ ೫ ವರ್ಷದ ಪುತ್ರನನ್ನು ಅಗಲಿದ್ದಾರೆ.