ಕುಶಾಲನಗರ, ಜು.೯: ತುಂಬಿ ಹರಿಯುತ್ತಿದ್ದ ಕಾವೇರಿ ನದಿಗೆ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಿಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಶನಿವಾರ ಮಧ್ಯಾಹ್ನದ ವೇಳೆಗೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಗ್ಯಾರೇಜ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಗಣೇಶ (೪೨) ಎಂಬಾತ ಕುಶಾಲನಗರ-ಕೊಪ್ಪ ಕಾವೇರಿ ನದಿಯ ಹಳೇ ಸೇತುವೆ ಮೇಲ್ಭಾಗದಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ (೪೨) ಎಂಬಾತ ಕುಶಾಲನಗರ-ಕೊಪ್ಪ ಕಾವೇರಿ ನದಿಯ ಹಳೇ ಸೇತುವೆ ಮೇಲ್ಭಾಗದಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ರಕ್ಷಣೆ ಪಡೆದಿದ್ದಾನೆ. ಈ ಸಂದರ್ಭ ತೆಪ್ಪವೊಂದನ್ನು ಬಳಸಿ ಕುಶಾಲನಗರದ ಸಮಾಜ ಸೇವಕರಾದ ಚಂದ್ರು, ರಾಜು, ಸಲೀಂ ಎಂಬವರುಗಳು ಗಣೇಶನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೀರಿಗೆ ಹಾರಿ ಅಸ್ವಸ್ಥನಾದ ಗಣೇಶನನ್ನು ಕುಶಾಲನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ನದಿಗೆ ಹಾರಿದ ವ್ಯಕ್ತಿಯನ್ನು ರಕ್ಷಿಸಿದ ಚಂದ್ರು ಮತ್ತು ತಂಡದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೈಲುಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.