ಚೆಟ್ಟಳ್ಳಿ, ಜು. ೯: ಸಮಾಜದಲ್ಲಿ ಶಿಕ್ಷಣದ ಮೂಲಕ ಕ್ರಾಂತಿ ಸೃಷ್ಟಿಸಲು ಸಾಧ್ಯ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎ. ಅಬ್ದುಲ್ಲಾ ಹೇಳಿದರು.

ಕೊಟ್ಟಮುಡಿ ಮರ್ಕಝ್‌ನಲ್ಲಿ ಕೊಡಗು ಜಿಲ್ಲಾ ಎಸ್‌ಎಸ್‌ಎಫ್ ಘಟಕದಿಂದ ನೈತಿಕತೆ, ಸಮಗ್ರತೆ, ಸಮರ್ಪಣೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲಾ ಸಹಾಯಕ ಖಾಝಿಗಳಾದ ಶಾದುಲಿ ಫೈಝಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಸ್‌ಎಸ್‌ಎಫ್ ರಾಷ್ಟಿçÃಯ ಸಮಿತಿ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಸ್ಪರ ಅಪಾರ್ಥಗಳಿಗೆ ಈಡಾಗುತ್ತಿದ್ದು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಸಮಸ್ಯೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಎಸ್‌ಎಫ್ ಕೊಡಗು ಜಿಲ್ಲಾಧ್ಯಕ್ಷ ಶಾಫೀ ಸಅದಿ ರಾಜಕೀಯ ಲಾಭಗಳಿಗಾಗಿ ವೈಯಕ್ತಿಕ ದುರಾಸೆಯಿಂದ ವಿದ್ಯಾರ್ಥಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತರಬೇತುದಾರರಾಗಿ ಎಸ್‌ಎಸ್‌ಎಫ್ ರಾಷ್ಟಿçÃಯ ಮಾಜಿ ಕಾರ್ಯದರ್ಶಿ ಮಜೀದ್ ಮಾಸ್ಟರ್ ಅರಿಯಲ್ಲೂರ್, ಕಣ್ಣೂರು ಜಿಲ್ಲಾಧ್ಯಕ್ಷ ಅನಸ್ ಅಮಾನಿ ಪುಷ್ಪಗಿರಿ, ಕೇರಳದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ನೂರುದ್ದೀನ್, ವಕೀಲ ಕುಂಞ ಅಬ್ದುಲ್ಲಾ ಕಾರ್ಯನಿರ್ವಹಿಸಿದರು.

ಸಮಾರಂಭದಲ್ಲಿ ಕೊಡಗು ಜಮೀಯತುಲ್ ಉಲಮಾ ಅಧ್ಯಕ್ಷ ಸೈಯ್ಯದ್ ಶಿಹಾಬುದ್ದೀನ್, ಅಲ್ ಹೈದ್ರೋಸಿ, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಇಲ್ಯಾಸ್ ಅಲ್ ಹೈದ್ರೋಸಿ ಎಮ್ಮೆಮಾಡು, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಮರ್ಕಝ್ ಸಂಸ್ಥೆಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಎಸ್‌ಎಸ್‌ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಹೊಸತೋಟ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಾಷ್ಟಿçÃಯ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು, ಮುಜೀಬ್ ಕಡಂಗ, ಸೌದಿ ಅರೇಬಿಯಾದ ಸಿದ್ದಿಕ್ ಝುಹ್ರಿ, ಕುವೈತ್ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ, ಎಸ್‌ಎಸ್‌ಎಫ್ ರಾಜ್ಯ ನಾಯಕರಾದ ಮುಬಷಿರ್ ಅಹ್ಸನಿ, ಅಜೀಝ್ ಸಖಾಫಿ, ಜಲೀಲ್ ಅಮೀನಿ, ಮುಜೀಬ್ ಮತ್ತಿತರರು ಹಾಜರಿದ್ದರು.

ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪುರಸ್ಕೃತರಾದ ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ. ಎ. ಅಬ್ದುಲ್ಲಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕೊಡಗು ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಜುನೈದ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಇಬ್ರಾಹಿಂ ಮಾಸ್ಟರ್ ವಂದಿಸಿದರು.