ಚೆಟ್ಟಳ್ಳಿ, ಜು. ೯: ಚೆಂಬು ಗ್ರಾಮದಲ್ಲಿ ಭೂಕಂಪದಿAದ ಮನೆ ಕುಸಿದು ಸಂತ್ರಸ್ತರಾಗಿದ್ದ ಅಕ್ಕಮ್ಮ ಅವರ ಮನೆಗೆ ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೆಪಿಸಿಸಿ ವಕ್ತಾರ, ಕಾನೂನು ಘಟಕದ ಜಿಲ್ಲಾಧ್ಯಕ್ಷ ಎ.ಎಸ್ ಪೊನ್ನಣ್ಣ ಭೇಟಿ ನೀಡಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭ ಮಾತನಾಡಿದ ಪೊನ್ನಣ್ಣ ಅಧಿಕಾರಿ ವರ್ಗ ಹಾಗೂ ಸರ್ಕಾರ ಮಟ್ಟದಲ್ಲಿ ಮಾತನಾಡಿ ಸಂತ್ರಸ್ತರಿಗೆ ಮತ್ತಷ್ಟು ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.

ಪೆರಾಜೆಗೆ ತೆರಳುವ ದಾರಿಮಧ್ಯೆ ಚೆಂಬು ಗ್ರಾಮದ ಬಾಲಂಬಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪೊನ್ನಣ್ಣ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಹಕ್ಕುಪತ್ರ ವಿಷಯದಲ್ಲಿ ಇದ್ದ ತಮ್ಮ ದುಗುಡವನ್ನು ಪೊನ್ನಣ್ಣವರೊಂದಿಗೆ ಗ್ರಾಮಸ್ಥರು ಹೇಳಿಕೊಂಡರು,

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಬಶೀರ್, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಕಾನೂನು ಘಟಕದ ಮುಖ್ಯಸ್ಥ ಶ್ರೀಧರನ್ ನಾಯರ್, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಉಪಾಧ್ಯಕ್ಷ ಚಂದ್ರಶೇಖರ್, ವಕ್ತಾರ ಪಿ.ಎಲ್ ಸುರೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೊಯ್ದಿನ್, ಎನ್.ಸಿ ಮನೋಹರ್, ವಾಸು ಪೂಜಾರಿ, ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಯೋಗೀಶ್ವರ್, ಉಪಾಧ್ಯಕ್ಷೆ ಶಶಿಕಲಾ ಕಟ್ಟೆಪಾರೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾರತಿ, ಜೀವಿ ಗಣಪಯ್ಯ, ಕೆ.ಸಿ. ಸುರೇಶ್, ರಘುನಾಥ್ ಬಾಲಂಬಿ, ಮಧು ಹೊಸೂರು, ಅಜಿತ್ ಪನೇಡ್ಕ, ಗುಂಡ್ಯ ದಿನಕರ, ಕೊಪ್ಪದ ಶಿವರಾಮ ಮತ್ತಿತರರು ಇದ್ದರು.