ಮಡಿಕೇರಿ, ಜು. ೯: ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ೨೦೨೨-೨೩ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವು ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ಮಡಿಕೇರಿ ಕೊಡವ ಸಮಾಜ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಂಡುವAಡ ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಂಡAಡ ಉಷ ಜೋಯಪ್ಪ (ನಿವೃತ್ತ ಡೀನ್, ಜ್ಯೋತಿ ನಿವಾಸ ಕಾಲೇಜು, ಬೆಂಗಳೂರು) ಅವರು ಆಗಮಿಸಿದ್ದರು.
ಜ್ಯೋತಿ ಬೆಳಗುವುದರೊಂದಿಗೆ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಆರಂಭಿಸಲಾಯಿತು. ವಿವಿಧ ವಿಭಾಗಗಳ ನಾಯಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಪದಕ ಪ್ರದಾನ ಮಾಡಿದರು. ಶಾಲಾ ನಾಯಕನಾಗಿ ಚಂಗಪ್ಪ ಸಿ.ಡಿ. ಹಾಗೂ ನಾಯಕಿಯಾಗಿ ನಿಹಾರಿಕ ಓ.ಕೆ. ಆಯ್ಕೆಯಾದರು.
ಪ್ರಾಂಶುಪಾಲೆ ಸರಸ್ವತಿ ಬಿ.ಎಂ. ವಿದ್ಯಾರ್ಥಿಗಳಿಗೆ ಪ್ರತಿಜ್ಷಾ ವಿಧಿ ಬೋಧಿಸಿದರು. ಸಾಹಿತ್ಯ, ವಿಜ್ಞಾನ, ಕ್ವಿಜ್ ಹಾಗೂ ಕಲಾ ಸಂಘಗಳ ಉದ್ಘಾಟನೆ ಮಾಡಲಾಯಿತು.
ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳ ಬಗ್ಗೆ ತಿಳಿಸಿದರು. ಅಧ್ಯಕ್ಷರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಜನರಲ್ ತಿಮ್ಮಯ್ಯನವರಂತೆ ದೇಶಕ್ಕೆ ಕೀರ್ತಿ ತರುವಂತವರಾಗಬೇಕೆAದು ಹುರಿದುಂಬಿಸಿದರು.
ವಿದ್ಯಾರ್ಥಿಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಹಾಗೂ ಶಾಲಾ ಕಾರ್ಯಾಧ್ಯಕ್ಷರೂ ಆಗಿರುವ ನಂದಿನೆರವAಡ ಚೀಯಣ್ಣ, ಕರೆಸ್ಪಾಂಡೆAಟ್ ಕನ್ನಂಡ ಕವಿತಾ ಬೊಳ್ಳಪ್ಪ, ಆಡಳಿತ ಮಂಡಳಿ ಸದಸ್ಯರು ಹಾಗೂ ಕೊಡವ ಸಮಾಜದ ನಿರ್ದೇಶಕರು ಪಾಲ್ಗೊಂಡಿದ್ದರು.