ಗೋಣಿಕೊಪ್ಪಲು, ಜು. ೯: ಕೊಡಗಿನ ಕಾಫಿ ಮತ್ತು ಅನನ್ಯ ಜೀವ ವೈವಿದ್ಯಗಳನ್ನು ಸುಸ್ಥಿರವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಯೋಜನೆಯ ಆವಿಷ್ಕಾರವನ್ನು ಸುಕ್ದಾನ್ ಸಂಸ್ಥೆ ಹಾಗೂ ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಕೈಗೆತ್ತಿಕೊಂಡಿದೆ. ಈ ಯೋಜನೆ ಅನ್ವಯ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಕಾಫಿ ವ್ಯವಸಾಯಗಾರರಿಗೆ ಗಿಡಗಳನ್ನು ವಿತರಿಸಲಿದೆ. ಆಸಕ್ತ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಕಾಫಿ ವ್ಯವಸಾಯ ಮಾಡುವ ರೈತರಿಗೆ ಈ ಯೋಜನೆಗೆ ಸೀಮಿತವಾಗಿದ್ದು, ರೈತರು ೨೦೨೩ ಮತ್ತು ೨೦೨೪ರಲ್ಲಿ ಸುಕ್ದಾನ್ ಕಂಪೆನಿ ಅಥವಾ ಕಾಲೇಜಿನ ಸಿಬ್ಬಂದಿಯ ವಾರ್ಷಿಕ ಮೇಲ್ವೀಚಾರಣೆ ಭೇಟಿಗೆ ಅವಕಾಶ ಮಾಡಿಕೊಡಬೇಕು. ಸಸಿಗಳ ನಿರ್ವಹಣೆಗೆ ಬೇಕಾದ ವರ್ಷದ ವೆಚ್ಚ(ಒಂದು ಗಿಡಕ್ಕೆ ರೂ. ೧೦ ರಂತೆ)ವನ್ನು ಸೆಪ್ಟೆಂಬರ್ ೨೦೨೩ ಮತ್ತು ಸೆಪ್ಟೆಂಬರ್ ೨೦೨೪ರಲ್ಲಿ ನೀಡಲಾಗುತ್ತದೆ. ಮೊದಲು ಬಂದ ರೈತರಿಗೆ ಆದ್ಯತೆ ನೀಡಲಾಗಿದ್ದು, ಗಿಡಗಳನ್ನು ಪಡೆದುಕೊಂಡು ನೆಡದಿದ್ದಲ್ಲಿ ಅದರ ಖರ್ಚನ್ನು ರೈತರೇ ಭರಿಸಬೇಕಾಗುತ್ತದೆ. ಕನಿಷ್ಟ ೨೦ ಗರಿಷ್ಠ ೧೦೦ ಸಸಿಗಳನ್ನು ನೀಡಲಾಗುವುದು.
ನೋಂದಣಿ ಸಮಯದಲ್ಲಿ ಅರಣ್ಯ ಕಾಲೇಜು ಪೊನ್ನಂಪೇಟೆ ಒದಗಿಸಿದ ಮಾರ್ಗಸೂಚಿಗಳ ಪ್ರಕಾರ ಸಸಿ ನೆಡುವಿಕೆಯನ್ನು ಮಾಡಬೇಕಾಗಿದೆ. ಆಮೆ ಹಣ್ಣು, ಪಾಲೆಹಣ್ಣು, ಮಜ್ಜಿಗೆ ಹಣ್ಣು, ಮೂರು ಹಣ್ಣು, ಚೀಲೆಪಣ್ಣ್, ಸಂಪಿಗೆ ಹಣ್ಣು, ಕಾಡುಮಾವಿನ ಹಣ್ಣು, ಹೆಬ್ಬಲಸು, ಖಾದ್ಯ ಇಳುವರಿ ಹಣ್ಣಿನ ಗಿಡಗಳಾದ ಕಿತ್ತಳೆ, ಮಲಯನ್ ಆಪಲ್, ಎಗ್ಫ್ರೂಟ್, ಸೋರ್ ಆಪಲ್, ಅವಕಾಡೋ, ರಂಗ್ಪುರ ಲೈಮ್, ಕ್ಯಾರಂಬೊಲ ಹಾಗೂ ಅಗರ್ವುಡ್, ಹೊನ್ನೆ ಧೂಪ, ಮಹಾಗನಿ ಲಿಟ್ಸಿಯಾ ಬಟಾಟೆ ನಟ್ಮೆಗ್, ಬೀಟೆ ಎಬೋನಿ, ಬಲಂಜಿ, ಹಲಸು ಮರಗಳ ಸಸಿಗಳು ಲಭ್ಯವಿದೆ. ಸಂಪರ್ಕ ಅಧಿಕಾರಿ ಸುನೀಲಾ ಬಿ.ಟಿ. ೭೩೩೭೮೨೭೨೦೩.