ಪೊನ್ನಂಪೇಟೆ, ಜು.೯: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥೆ ಬೊಳ್ತಂಡ ನಯನಾ ತಮ್ಮಯ್ಯ ಅವರಿಗೆ ಬೆಂಗಳೂರು ಜೈನ್ ಯೂನಿವರ್ಸಿಟಿಯು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಡಾ.ಉಮಾ ವಾರಿಯರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ

‘ರೋಲ್ ಆಫ್ ಮೈಂಡ್ ಫುಲ್ ನೆಸ್ ಆನ್ ಆರ್ಗನೈಜೇಷನ್ ರೋಲ್ ಸ್ಪೆçಸ್ ಲೆವೆಲ್ ಆಫ್ ಅಸೆಂಬ್ಲಿ ಲೈನ್ ವರ್ಕರ್ಸ್' ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿದೆ. ನಯನಾ ತಮ್ಮಯ್ಯ ಅವರು ವೀರಾಜಪೇಟೆ ನಿವಾಸಿಯಾಗಿದ್ದು, ಕಾಂಚೇರಿರ ತಮ್ಮಯ್ಯ ಹಾಗೂ ಡಾ.ನಳಿನಿ ದಂಪತಿಯ ಪುತ್ರಿ ಮತ್ತು ಬೊಳ್ತಂಡ ಚೇತನ್ ಮುತ್ತಣ್ಣ ಅವರ ಪತ್ನಿ.