ವೀರಾಜಪೇಟೆ, ಜು. ೯: ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರದಲ್ಲಿ ಸಿದ್ಧಾರ್ಥ್ ಎನ್ನುವ ವ್ಯಕ್ತಿಯೋರ್ವರ ಖಾಸಗಿ ಜಾಗ ಗುಡ್ಡದ ಮೇಲಿದ್ದು, ಇತ್ತೀಚೆಗೆ ಅವರು ತೋಟಕ್ಕೆ ಗೊಬ್ಬರ ತೆಗೆದುಕೊಂಡು ಹೋಗಲು ಅನುಕೂಲವಾಗಲಿ ಎಂದು ಜೆಸಿಬಿಯಿಂದ ರಸ್ತೆ ಮಾಡಲು ಮಣ್ಣು ತೆಗೆದಿದ್ದರು ಎನ್ನಲಾಗಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡದ ಸ್ವಲ್ಪ ಭಾಗ ಕುಸಿತವಾಗಿದೆ.
ಈ ದೂರು ಸಂಬAಧ ಈ ದಿನ ತಹಶೀಲ್ದಾರ್, ಕಂದಾಯ ಪರಿವೀಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ತೆರಳಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ತೋಟದ ಮಾಲೀಕರಿಗೆ ಎಚ್ಚರಿಕೆ ನೀಡಿ ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಕಾಮಗಾರಿಯಿಂದ ಯಾವುದೇ ತೊಂದರೆಗಳು ಆದಲ್ಲಿ ಇದಕ್ಕೆ ತಗಲುವ ವೆಚ್ಚವನ್ನು ಅವರೇ ಭರಿಸುವಂತೆ ಜಾಗದ ಮಾಲೀಕರಿಂದ ಹೇಳಿಕೆ ಪಡೆಯಲಾಯಿತು ಎಂದು ಕಂದಾಯ ಅಧಿಕಾರಿ ಹರೀಶ್ ಮಾಹಿತಿ ನೀಡಿದರು.