ಮಡಿಕೇರಿ, ಜು. ೯: ಮಡಿಕೇರಿ ಮಲ್ಲಿಕಾರ್ಜುನ ನಗರ ಶ್ರೀ ಕೋದಂಡ ರಾಮ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಶುಕ್ರವಾರ ದೇವಾಲಯಕ್ಕೆ ಡಾ. ಮಂಥÀರ್ ಗೌಡ ಅವರು ಅತಿಥಿಯಾಗಿ ಆಗಮಿಸಿ ಕೆಲವು ಅಗತ್ಯ ಕಾರ್ಯಗಳಿಗೆ ತನ್ನಿಂದಾಗುವ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು. ಈ ವಿಭಾಗದ ಯುವ ಜನತೆಯ ಕ್ರಿಯಾಶೀಲತೆ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ಬಡಾವಣೆಯ ಜನತೆಯ ಸಮಸ್ಯೆಗಳ ಪರಿಹಾರಕ್ಕೆ ತಾನೂ ಕೂಡ ಕೈಜೋಡಿಸುವುದಾಗಿ ನುಡಿದರು.

ದೇವಾಲಯ ಜೀರ್ಣೋದ್ಧಾರ ಕುರಿತು ಸಮಿತಿಯ ಪರವಾಗಿ ಹೆಚ್.ಎನ್. ಮಂಜುನಾಥ್, ಎಸ್.ಎಸ್. ಸಂಪತ್‌ಕುಮಾರ್, ಜಿ. ರಾಜೇಂದ್ರ ಮೊದಲಾದವರು ಮಾಹಿತಿಯಿತ್ತರು. ಮಡಿಕೇರಿ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿದರು. ಮಾಜಿ ಸದÀಸ್ಯ ಪ್ರಕಾಶ್ ಆಚಾರ್ಯ, ರಫೂಫ್, ದೇವಾಲಯ ಸಮಿತಿಯ ತಿಮ್ಮಯ್ಯ, ನಂಜುAಡ, ಮುದ್ದುರಾಜ್, ಸುಧಾಕರ್ ಮೊದಲಾದವರಿದ್ದರು.