ಮಡಿಕೇರಿ, ಜು. ೯: ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಪೊನ್ನಂಪೇಟೆಯಲ್ಲಿ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯ ಕೋಟ್ಪಾ ಕಾಯ್ದೆ ಉಲ್ಲಂಘನೆ ಸಂಬAಧ ಅಂಗಡಿ, ಬಾರ್ ಹಾಗೂ ಹೊಟೇಲ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಆರೋಗ್ಯ ಶಿಕ್ಷಣ ಬಗ್ಗೆ ಮಾಹಿತಿ ನೀಡಿ, ಸೆಕ್ಷನ್ ೪ ಅಡಿಯಲ್ಲಿ ಒಟ್ಟು ೧೯೦೦ ರೂ. ದಂಡವನ್ನು ಸಂಗ್ರಹಿಸಲಾಯಿತು.