ಚೆಟ್ಟಳ್ಳಿ, ಜು. ೮: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಎ.ಎ., ಗೌರವಾಧ್ಯಕ್ಷರಾಗಿ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಕೆ.ಎ. ಅಬ್ದುಲ್ ರಶೀದ್ ಕುಪ್ಪೋಡಂಡ ಅವಿರೋಧ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಎಂ ಇಸ್ಮಾಯಿಲ್ ಕಂಡಕರೆ, ಸಮೀರ್ ಪಿ.ಹೆಚ್, ಉಪಾಧ್ಯಕ್ಷರಾಗಿ ಶರ್ಫುದ್ದೀನ್ ಸಿ.ಎ., ಕೋಶಾಧಿಕಾರಿ ಯಾಗಿ ಅಬ್ದುಲ್ ರಜಾಕ್ ಎಂ.ಕೆ. ಆಯ್ಕೆಯಾದರು. ನಿರ್ದೇಶಕರಾಗಿ ಹ್ಯಾರಿಸ್ ಎನ್.ಪಿ., ಆದಮ್ ಎಸ್. ಕುಶಾಲನಗರ, ಸೈಫ್ ಅಲಿ ಎಂ.ಎಸ್., ಅಶ್ರಫ್ ಪಿ.ಎ., ಸುಹೈಲ್ ಎಂ.ಎ., ಮುಜೀಬ್ ಕೆ.ಎಂ. ಹಾಗೂ ರಾಜಿಕ್ ಕುಪ್ಪೋಡಂಡ ರವರ ಮನೆಯಲ್ಲಿ ನಡೆದ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಸಮಿತಿಯ ಸಭೆಯಲ್ಲಿ ಆಯ್ಕೆಯಾದರು.
ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಧ್ವಜ ಹಸ್ತಾಂತರ
೨೦೨೩ ರಲ್ಲಿ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಹಾಗೂ ಓಯಸಿಸ್ ಹೊದವಾಡ ತಂಡದ ಆಶ್ರಯದಲ್ಲಿ ಹೊದವಾಡದಲ್ಲಿ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಕಪ್ ಧ್ವಜವನ್ನು, ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಅಬ್ದುಲ್ ರಶೀದ್ ಕುಪ್ಪೋಡಂಡ ಓಯಸಿಸ್ ಹೊದವಾಡ ತಂಡದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನೂತನ ಅಧ್ಯಕ್ಷ ಅಬ್ದುಲ್ ಖಾದರ್ ಕೆ.ಎ ಹಾಕತ್ತೂರು, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕಂಡಕರೆ, ಸಮೀರ್ ಕಡಂಗ, ಕೋಶಾಧಿಕಾರಿ ರಜಾಕ್ ಎಂ.ಕೆ ಎಡಪಲಾ, ಸುಹೈಲ್ ಎಂ.ಎ ಹಾಗೂ ಓಯಸಿಸ್ ಹೊದವಾಡ ತಂಡದ ಪದಾಧಿಕಾರಿಗಳು ಹಾಜರಿದ್ದರು.