ವೀರಾಜಪೇಟೆ, ಜು. ೮: ಸಸ್ಯ ವೈವಿಧÀ್ಯಗಳ ಮೂಲಕ ಮನುಷ್ಯನಿಗೆ ಆಹಾರ ಮತ್ತು ಔಷಧಿಗಳು ದೊರಕುತ್ತದೆ ಅದನ್ನು ಗುರುತಿಸುವ ಮೂಲಕ ಆರೋಗ್ಯಕ್ಕೆ ಉತ್ತಮವಾಗಿ ರುವುದನ್ನು ಬಳಸುವಂತಾಗಬೇಕು ಎಂದು ಸಾವಯುವ ಕೃಷಿ ಬರಹಗಾರ-ವಾಗ್ಮಿ ಮೈಸೂರಿನ ಎ.ಪಿ. ಚಂದ್ರಶೇಖರ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಶ್ರೀಮಠದ ಲಿಂಗರಾಜೇAದ್ರ ಭವನದಲ್ಲಿ ನಡೆದ ಮಾಸಿಕ ತತ್ತ÷್ವಚಿಂತನಾಗೋಷ್ಠಿ ಹೊಂಬೆಳಕು ಕಿರಣ ೨೦೦ರ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ‘ಕೃಷಿ ಜೀವನದಲ್ಲಿ ಸ್ವಾವಲಂಬನೆ' ಎಂಬ ವಿಷಯದ ಬಗ್ಗೆ ಮಾತನಾಡಿ ಪ್ರಕೃತಿಯ ಮಡಿಲಲ್ಲಿ ಅನೇಕ ಜಾತಿಯ ಗಿಡ ಮರಗಳಿಂದ ಎಲ್ಲರು ಉಪಯೋಗಿಸುವಂತ ಹಣ್ಣುಗಳು ಸಾಕಷ್ಟು ಔಷಧಿ ಗಿಡಗಳಿದ್ದು ಅದನ್ನು ಗುರುತಿಸಿ ಉಪಯೋಗಿಸುವ ಮೂಲಕ ಸ್ವಾವಲಂಬನೆ ಬದುಕು ನಡೆಸುವಂತಾಗಬೇಕು. ಈಗಾಗಲೇ ಮನೆಯ ಆವರಣದಲ್ಲಿ ನಾನು ೩,೫೦೦ ಜಾತಿ ಸಸ್ಯಗಳನ್ನು ಉಪಯೋಗಕ್ಕೆ ಬೆಳಸಿರುವುದಾಗಿ ತಿಳಿಸಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಿನ ಪಾಲಂಗಾಲ ಗ್ರಾಮದ ಪ್ರಗತಿಪರ ಕೃಷಿಕ ಪಿ.ಎನ್.ನಾಗರಾಜ್ ಮಾತನಾಡಿ, ಕೃಷಿ ಭೂಮಿಗೆ ಅತಿಯಾದ ಯಂತ್ರಗಳ ಬಳಕೆ ರಾಸಾಯನಿಕ ಗೊಬ್ಬರ, ಕೀಟ ನಾಶಕವನ್ನು ಕಡಿಮೆ ಮಾಡಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನೈಸರ್ಗಿಕ ಜೀವನ ನಡೆಸುವ ಮೂಲಕ ಕೃಷಿ ಭೂಮಿಗೆ ಮನೆಯ ತ್ಯಾಜ್ಯ, ಹಸು ದನಗಳ ಮತ್ತು ಕೋಳಿಯ ತ್ಯಾಜ್ಯ ಗಳನ್ನು ಉಪ ಯೋಗಿಸು ವಂತಾಗಬೇಕು ಆಗ ಮಾತ್ರ ಉತ್ತಮ ಬೆಳೆ ಸಾಧ್ಯ ಎಂದರು.
ಹೊAಬೆಳಕು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯರು, ಪಕ್ಷಿ ತಜ್ಞರಾದ ಡಾ. ಎಸ್.ವಿ. ನರಸಿಂಹನ್ ವಹಿಸಿ ಮಾತ ನಾಡಿದರು. ವಿದ್ಯಾರ್ಥಿ ಎ.ಎಸ್. ಪ್ರೀತು ಸ್ವಾಗತಿಸಿದರು. ದೀಪ್ತಿ ಮತ್ತು ತಂಡ ಪ್ರಾರ್ಥಿಸಿದರೆ, ಶಿಕ್ಷಕ ಕೆ.ಎಸ್. ಭೀಮಯ್ಯ ನಿರೂಪಿಸಿದರು.