ಕರಿಕೆ, ಜು. 7: ಕೊಡಗಿನ ಪ್ರಮುಖ ಸಂಪರ್ಕ ರಸ್ತೆಯಲ್ಲೊಂದಾದ ಭಾಗಮಂಡಲ - ಕರಿಕೆ - ಪಾಣತ್ತೂರು - ಕಾಂಙಂಗಾಡ್ ಅಂತರ್ ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯ ಅಸಡ್ಡೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಭಾಗಮಂಡಲದಿಂದ ಕೇರಳ ಗಡಿಗೆ ಇಪ್ಪತ್ತೆಂಟು ಕಿ.ಮೀ. ರಸ್ತೆ ಕ್ರಮಿಸಬೇಕಿದ್ದು, ಇದರಲ್ಲಿ ಅರಣ್ಯದೊಳಗೆ ಹಾದುಹೋಗುವ ಎಂಟನೇ ಮೈಲಿನಿಂದ ಹನ್ನೊಂದನೇ ಮೈಲುವರೆಗೆ ಸುಮಾರು ನಾಲ್ಕು ಕಿ.ಮೀ. ರಸ್ತೆ ಕಳೆದ ಎರಡು ವರ್ಷದಿಂದ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ಟೆಂಡರ್ ಆಗಿದ್ದು ಮಳೆಗಾಲ
(ಮೊದಲ ಪುಟದಿಂದ) ಕಳೆಯಲಿ ಎಂಬ ಉತ್ತರ ಹೇಳುತ್ತಾ, ಇಲಾಖೆ ಮಾತ್ರ ಸರಿಪಡಿಸುವ ಗೋಜಿಗೆ ಹೋಗದಿರುವುದು ದುರಂತವೇ ಸರಿ.
ಎರಡು ವರ್ಷಗಳ ಹಿಂದೆ ಶಾಸಕ ಕೆ.ಜಿ. ಬೋಪಯ್ಯ ಅವರು ವಿಶೇಷ ಆಸಕ್ತಿ ವಹಿಸಿ ಸರಕಾರದ ಮಟ್ಟದಲ್ಲಿ ಒತ್ತಡ ಹಾಕಿ ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು ನಂತರ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಕೇಂದ್ರ ಸಚಿವರು ಇತ್ತೀಚೆಗೆ ಕೊಡಗು ಪ್ರವಾಸ ಸಂದರ್ಭದಲ್ಲಿ ಖುದ್ದಾಗಿ ಅವರನ್ನು ಭೇಟಿ ಮಾಡಿ ಈ ರಸ್ತೆ ಬಗ್ಗೆ ಮನವಿ ಸಲ್ಲಿಸಿ ಸಚಿವರಿಗೆ ಕೇರಳ ಹಾಗೂ ಮೈಸೂರು ಸಂಪರ್ಕ ರಸ್ತೆಯ ಉಪಯೋಗದ ಬಗ್ಗೆ ವಿವರಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಕ್ರಮ ವಹಿಸುವ ಭರವಸೆಯನ್ನು ಶಾಸಕರಿಗೆ ನೀಡಿದ್ದರು.
ಆದರೆ ಕಳೆದ ಎರಡು ವರ್ಷಗಳಿಂದ ಕೋಟ್ಯಂತರ (ಮೊದಲ ಪುಟದಿಂದ) ಕಳೆಯಲಿ ಎಂಬ ಉತ್ತರ ಹೇಳುತ್ತಾ, ಇಲಾಖೆ ಮಾತ್ರ ಸರಿಪಡಿಸುವ ಗೋಜಿಗೆ ಹೋಗದಿರುವುದು ದುರಂತವೇ ಸರಿ.
ಎರಡು ವರ್ಷಗಳ ಹಿಂದೆ ಶಾಸಕ ಕೆ.ಜಿ. ಬೋಪಯ್ಯ ಅವರು ವಿಶೇಷ ಆಸಕ್ತಿ ವಹಿಸಿ ಸರಕಾರದ ಮಟ್ಟದಲ್ಲಿ ಒತ್ತಡ ಹಾಕಿ ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು ನಂತರ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಕೇಂದ್ರ ಸಚಿವರು ಇತ್ತೀಚೆಗೆ ಕೊಡಗು ಪ್ರವಾಸ ಸಂದರ್ಭದಲ್ಲಿ ಖುದ್ದಾಗಿ ಅವರನ್ನು ಭೇಟಿ ಮಾಡಿ ಈ ರಸ್ತೆ ಬಗ್ಗೆ ಮನವಿ ಸಲ್ಲಿಸಿ ಸಚಿವರಿಗೆ ಕೇರಳ ಹಾಗೂ ಮೈಸೂರು ಸಂಪರ್ಕ ರಸ್ತೆಯ ಉಪಯೋಗದ ಬಗ್ಗೆ ವಿವರಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಕ್ರಮ ವಹಿಸುವ ಭರವಸೆಯನ್ನು ಶಾಸಕರಿಗೆ ನೀಡಿದ್ದರು.
ಆದರೆ ಕಳೆದ ಎರಡು ವರ್ಷಗಳಿಂದ ಕೋಟ್ಯಂತರ ಅನುದಾನ ಬಿಡುಗಡೆಯಾಗಿ ಟೆಂಡರ್ ಆಗಿದ್ದರೂ ಕಾಮಗಾರಿ ರೂಪಿಸುವಲ್ಲಿ ಲೋಕೋಪಯೋಗಿ ಇಲಾಖೆ ವಿಫಲವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮವಹಿಸಬೇಕಿದೆ.
2018 ರಲ್ಲಿ ಕೊಡಗಿನಲ್ಲಿ ಬೃಹತ್ ಪ್ರಾಕೃತಿಕ ವಿಕೋಪ ಸಂಭವಿಸಿ ಸಂಪಾಜೆಯಿಂದ ತಾಳತ್ಮನೆವರೆಗೆ ರಸ್ತೆ ಕುಸಿದಿದ್ದು ಬಂಟ್ವಾಳ - ಸಂಪಾಜೆ -ಮಡಿಕೇರಿ - ಮೈಸೂರು ಹೆದ್ದಾರಿ ಸಂಪೂರ್ಣ ಮುಚ್ಚಿಹೋದ ಪರಿಣಾಮ ಸಾರಿಗೆ ಬಸ್ ಸೇರಿದಂತೆ ವಾಹನಗಳು ಸುಳ್ಯ - ಪಾಣತ್ತೂರು - ಕರಿಕೆ ಮಾರ್ಗವಾಗಿ ಹಲವು ತಿಂಗಳ ಕಾಲ ನಿರಂತರ ಸಂಚರಿಸುತ್ತಿದ್ದವು. ಇದೀಗ ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ನಿರಂತರವಾಗಿ ರಸ್ತೆಗೆ ಗುಡ್ಡ ಕುಸಿಯುತ್ತಿದ್ದು, ಗುರುವಾರ ಕಂದಾಯ ಸಚಿವರು ಕೂಡ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಣೆ ಮಾಡಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಕರಿಕೆ ರಸ್ತೆ ಮಾತ್ರ ಸಂಚಾರಕ್ಕೆ ಮುಕ್ತವಾಗಿರುವುದು ಇಲಾಖೆಗೆ ತಿಳಿದಿರುವ ವಿಚಾರ. ಆದರೆ ಈ ರಸ್ತೆ ಡಾಮರೀಕರಣ ಮಾಡದೆ ಸಂಪೂರ್ಣ ಕೆಸರುಮಯ ಹಾಗೂ ಗುಂಡಿಬಿದ್ದ ಪರಿಣಾಮ ಸಂಚಾರಕ್ಕೆ ಅನಾನುಕೂಲವಾಗಿದ್ದು, ಅಲ್ಲದೇ ರಸ್ತೆ ಬದಿ ಕಾಡು ಬೆಳೆದು ರಸ್ತೆ ಮುಚ್ಚಿ ಹೋಗಿದೆ. ಚರಂಡಿ ನಿರ್ಮಾಣ ಮಾಡದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಇನ್ನಷ್ಟು ಹದಗೆಡುತ್ತಿದೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ತುರ್ತಾಗಿ ರಸ್ತೆ ದುರಸ್ತಿ ಮಾಡದಿದ್ದಲ್ಲಿ ಕರಿಕೆ ರಸ್ತೆ ಮುಂದಕ್ಕೆ ನೆನಪಿನಲ್ಲಿ ಮಾತ್ರ ಉಳಿಯುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಸುಧೀರ್ ಹೊದ್ದೆಟ್ಟಿ