ಸಿದ್ದಾಪುರ, ಜು. ೮: ಅಗ್ನಿಪಥ್ ಯೋಜನೆ ಕೈಬಿಡಲು ಹಾಗೂ ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿ ಸಿ.ಪಿ.ಐ.(ಎಂ.) ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಧರ್ಮಗಳ ಮಧ್ಯೆ ಬಿ.ಜೆ.ಪಿ. ಒಡಕು ಮೂಡಿಸುತ್ತಿದೆ.

ಪಠ್ಯಪುಸ್ತಕ ಪರಿಷ್ಕರಣೆಯನ್ನು ತಕ್ಷಣ ಕೈಬಿಡಬೇಕು. ಅಗ್ನಿಪಥ್ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಎನ್.ಡಿ. ಕುಟ್ಟಪ್ಪ, ಮುಸ್ತಫ, ಉದಯ್ ಕುಮಾರ್, ಬೈಜು, ಚಂದ್ರ ಸೇರಿದಂತೆ ಇನ್ನಿತರರು ಇದ್ದರು.