ಗೋಣಿಕೊಪ್ಪ ವರದಿ, ಜು. ೮: ಎಂ ಟಿವಿ ಆಯೋಜಿಸಿರುವ ರಿಯಾಲಿಟಿ ಶೋ ರೋಡೀಸ್ನಲ್ಲಿ ಕೊಡಗಿನ ಬಾಳೆಯಡ ಜಶ್ವಂತ್ ಬೋಪಣ್ಣ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಆತ್ಮವಿಶ್ವಾಸ, ಪ್ರತಿಭೆ ಮತ್ತು ಕೌಶಲ್ಯ ಅನಾವರಣಕ್ಕೆ ವೇದಿಕೆಯಾಗಿರುವ ಈ ಸ್ಪರ್ಧೆಯು ಸೌತ್ ಆಫ್ರಿಕಾದಲ್ಲಿ ನಡೆಯುತ್ತಿದ್ದು, ಮಾನಸಿಕ ಮತ್ತು ದೈಹಿಕ ಕಸರತ್ತು, ಬೈಕ್ ರೈಡಿಂಗ್, ಬಂಗಿ ಜಂಪಿAಗ್, ಸ್ಕೆöÊ ಡೈವಿಂಗ್ ಸಾಕಷ್ಟು ಸ್ಪರ್ಧೆ ಎದುರಿಸಿ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ನೃತ್ಯ ಪಟು, ಮಾಡೆಲ್ ಆಗಿರುವ ಇವರು ಪಾರಾಣೆ ಗ್ರಾಮದ ಬಾಳೆಯಡ ಸತೀಶ್, ಬಿಂದು ದಂಪತಿಯ ಪುತ್ರ.