ಸೋಮವಾರಪೇಟೆ: ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಅವಿರೋಧ ಆಯ್ಕೆ ನಡೆಯುತ್ತಿದ್ದು ಇದೇ ಪ್ರಥಮ ಬಾರಿಗೆ ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಚುನಾವಣೆ ನಡೆಯಿತು.
ಮಡಿಕೇರಿ ತಾಲೂಕಿನಲ್ಲಿ ಮಾತ್ರ ಅವಿರೋಧ ಆಯ್ಕೆ ನಡೆದಿದೆ. ಸೋಮವಾರಪೇಟೆ ತಾಲೂಕಿನ 8 ನಿರ್ದೇಶಕರ ಸ್ಥಾನಗಳಿಗೆ 18 ಮಂದಿ ಸ್ಪರ್ಧೆಯಲ್ಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ಚುನಾವಣಾಧಿಕಾರಿಯಾಗಿ ಎಂ.ಬಿ. ತಿಲೋತ್ತಮೆ ಕಾರ್ಯನಿರ್ವಹಿಸಿದರು.
ಗೋಣಿಕೊಪ್ಪಲು
ಗೋಣಿಕೊಪ್ಪಲು: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವೀರಾಜಪೇಟೆ ತಾಲೂಕು ಚುನಾವಣೆಯು ಗೋಣಿಕೊಪ್ಪಲುವಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಶಿಕ್ಷಕರಾದ ಉತ್ತಪ್ಪ ಬಿ.ಪಿ., ಈಶ್ವರ ನಾಯ್ಕ, ಕೃಷ್ಣ ಚೈತನ್ಯ, ಚಂದನ ಡಿ. ಹಾಗೂ ಅರುಣ ಆ್ಯನ್ಸಿ ಡಿಸೋಜ ಜಯಗಳಿಸಿದರು.