ಮೋಟಾರ್ ರೇಸ್ ಕ್ರೀಡೆಯೇ ರಣರೋಚಕ ಕ್ರೀಡೆ. ತೋಟ, ಬೆಟ್ಟ-ಗುಡ್ಡಗಳ ನಡುವೆ ಏರು ತಗ್ಗುಗಳಲ್ಲಿ, ಬಯಲು ಬಾಣೆಗಳಲ್ಲಿ ಟ್ರಾö್ಯಕ್ ರಚಿಸಿ, ಜೀಪನ್ನು ಅದ್ಭುತ ಲಯದಿಂದ ತಪ್ಪುಗಳಾಗದಂತೆ ಓಡಿಸಿ ವೇಗದಿಂದ ಕಡಿಮೆ ಸಮಯದಲ್ಲಿ ಗುರಿಮುಟ್ಟಿ ಗೆಲುವು ಸಾಧಿಸುವ ಕ್ರೀಡೆಯೇ ಮೋಟಾರ್‌ರೇಸ್ ಕ್ರೀಡೆ. ಗುಡ್ಡಗಾಡಿನ ಕಠಿಣ ರಸ್ತೆಗಳಲ್ಲಿ ಜೀಪ್ ಓಡಿಸುವುದೇ ಒಂದು ರೋಮಾಂಚನ ಕಾರಿ ಅನುಭವ. ಅಂತಹುದರಲ್ಲಿ ರೇಸ್ ಸ್ಪರ್ಧೆಯಲ್ಲಿ, ಸಮಯಕ್ಕೆ ಸವಾಲೊಡ್ಡಿ, ಅಪಾಯಗಳಿಗೆ ಕೊರಳೊಡ್ಡಿ, ಎಲ್ಲವನ್ನೂ ಎದೆಗಾರಿಕೆಯಿಂದ ನಿಭಾಯಿಸಿ ಜೀಪ್ ಓಡಿಸಿ, ಗೆಲ್ಲುವ ಭಾಗವಹಿಸುವ ಮೋಟಾರ್ ರೇಸ್ ಕ್ರೀಡೆಯ ಸಾಹಸವೇ ಅದ್ಭುತ ಇಲ್ಲಿ ಆಟೋಕ್ರಾಸ್ ಹಾಗೂ ಆಪ್ ರೋಡಿಂಗ್ ಎರಡೂ ಕೂಡ ಅದ್ಭುತ ಸ್ಪರ್ಧೆಗಳೇ.

ಮೋಟಾರ್‌ರೇಸ್ ಅಂದಾಗ ಕೊಡಗಿನ ಜನರಿಗೆ ತತ್‌ಕ್ಷಣ ನೆನಪಿಗೆ ಬರುವುದೇ ಜಗತ್ ನಂಜಪ್ಪ ಹಾಗ ಅನಿತ್‌ನಂಜಪ್ಪ ಎಂಬ ದಿಗ್ಗಜರ ಹೆಸರು ಅವರೊಂದಿಗೆ ಗುರುತಾಗುವ ಮತ್ತೊಂದು ಹೆಸರೇ ಉದದಪಂಡ ಚೇತನ್. ಮೋಟೋ ರೇಸ್‌ನಲ್ಲಿ ಜೀಪನ್ನು ಲೀಲಾಜಾಲವಾಗಿ ಓಡಿಸಿ, ಸವಾಲುಗಳನ್ನು ಮೆಟ್ಟಿ ನಿಂತು, ಗೆಲುವುಗಳನ್ನೇ ದಾಖಲೆ ಮಾಡಿಕೊಂಡಿರುವ ಉದ್ದಪಂಡ ಚೇತನ್ ಸಾಧನೆಗಳ ಸರದಾರರೇ ಆಗಿದ್ದಾರೆ.

ಚೇತನ್ ಅವರು ೧೯೮೩ ಫೆಬ್ರವರಿ ೧೮ ರಂದು ಕೊಡಗಿನ ಅಮ್ಮತ್ತಿಯಲ್ಲಿ ಜನಿಸಿದರು. ಇವರ ತಂದೆ ಶಂಭು ಕಾವೇರಪ್ಪ, ತಾಯಿ ಮಲ್ಲಿಗೆ. ಬಾಲ್ಯದಲ್ಲೇ ಇವರಿಗೆ ವಾಹನ ಚಲಾಯಿಸುವುದರಲ್ಲಿ ಅತೀವ ಆಸಕ್ತಿ. ಸಣ್ಣದರಲ್ಲೇ ಜಿಪ್ ಸ್ಟೇರಿಂಗ್‌ನ್ನು ತಿರುಗಿಸಿ ತಂದೆಯ ಮಾರ್ಗದರ್ಶನ ಪಡೆದ ಸಾಹಸಿ. ಇವರ ಸಹೋದರಿ ದಿವ್ಯಅವರನ್ನು ಮೈಸೂರು ಕ್ರೀಡಾ ನಿಲಯದ ಉತ್ತಮ ಹಾಕಿ ಕ್ರೀಡಾಪಟುವಾಗಿದ್ದರು. ಬೆಳೆದಂತೆಲ್ಲಾ ಜೀಪ್ ಮತ್ತು ಇತರ ವಾಹನಗಳನ್ನು ಓಡಿಸುವ ಕಲೆಯನ್ನು ಕರಗತ ಮಾಡಿಕೊಂಡ ಇವರಿಗೆ ಮೋಟಾರ್‌ರೇಸ್ ಕ್ರೀಡೆ ಕೈಬೀಸಿ ಕರೆಯಿತು. ನಂತರ ಹಿಂತಿರುಗಿ ನೋಡದ ಉದ್ದಪಂಡ ಚೇತನ್ ಧರಿಸಿದ್ದು, ಸಾಧನೆಗಳ ಸರಮಾಲೆಯನ್ನೇ.

ಸಾಧನೆಗಳ ಸಾಹಸ: ೧೯೯೮ರಲ್ಲಿ ಮೋಟಾರ್ ರೇಸ್ ಸ್ಪರ್ಧೆಗೆ ಇಳಿದ ಇವರು ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದರು. ೨೦೦೨ರಲ್ಲೂ ಜಯಗಳಿಸಿ ಕೀರ್ತಿ ಸಂಪಾದಿಸಿ ದರು. ಮೊದಲ ಬಾರಿಗೆ ರೆಡ್‌ರೂಸ್ಟರ್‌ರವರು ಏರ್ಪಡಿಸಿದ್ದ (೨೦೦೬ರಲ್ಲಿ) ರಾಷ್ಟಿçÃಯ ಮೋಟಾರ್ ರೇಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದರು. ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಕೊಡಗಿನಲ್ಲಿ ನಡೆದ ಸ್ಥಾನೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ, ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿಕೊಂಡರು. ೨೦೧೪ರ ‘ರೈನ್‌ಫಾರೆಸ್ಟ್ ಚಾಲೆಂಜ್’’ ಎಂಬ ಪ್ರತಿಷ್ಠಿತ ಭಾರತೀಯ ಮೋಟಾರ್‌ರೇಸ್‌ನಲ್ಲಿ ದೇಶದ ಇತರೆ ರಾಜ್ಯಗಳಿಂದಲೂ ಸ್ಪರ್ಧಿಗಳು ಆಗಮಿಸುತ್ತಾರೆ. ಗೋವಾದಲ್ಲಿ ನಡೆಯುವ ಈ ಸ್ಪರ್ಧೆ ಅತ್ಯಂತ ಕಠಿಣವಾಗಿದ್ದು, ಸ್ಪರ್ಧಿಗಳಿಗೆ ಸವಾಲೊಡ್ಡುವ ಬೆಟ್ಟ-ಗುಡ್ಡ ಹಳ್ಳ, ತೋಡು ಕಲ್ಲು ಮುಂತಾದ ಕ್ಲಿಷ್ಟ ಮಾರ್ಗಗಳನ್ನು ಕ್ರಮಿಸುವಂತದ್ದಾಗಿರುತ್ತದೆ. ೨೦೧೬ರಲ್ಲಿ ಜಗತ್ ನಂಜಪ್ಪ ಅವರ ಜೊತೆಗೂಡಿ ಕಣಕ್ಕಿಳಿದು ಬೆಂಗಳೂರಿನ ಸ್ಪರ್ಧೆ ನಂತರ ಗೋವಾಗೆ ಆಯ್ಕೆಗೊಂಡು ಅಂತಿಮ ಘಟ್ಟದಲ್ಲಿ ೮ನೇ ಸ್ಥಾನಗಳಿಸಿದರು. ಹೆಮ್ಮೆಯ ವಿಷಯವೆಂದರೆ ೨೦೧೭ರಲ್ಲಿ ಇದೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ೨೦೧೮ರಲ್ಲಿ ಪ್ರಥಮ ಸ್ಥಾನಗಳಿಸಿ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟಿçÃಯ ಸ್ಪರ್ಧೆಗೆ ಆಯ್ಕೆಗೊಂಡು ಅಂತರರಾಷ್ಟಿçÃಯ ಮಟ್ಟದಲ್ಲಿ ಖ್ಯಾತಿಗಳಿಸಿ, ಕೊಡಗಿಗೆ ಅಪಾರ ಕೀರ್ತಿ ತಂದರು. ೨೦೧೯ರಲ್ಲಿ ಇದೇ ಸ್ಪರ್ಧೆಯಲ್ಲಿ ಮತ್ತೊಮ್ಮೆ ಮಹತ್ತರ ಸಾಧನೆಯನ್ನು ಚಂಡೀಘಡದ ಗುರುಮಿತ್ ವರ್ಧಿ ಸಹಚಾಲನೆಯಲ್ಲಿ ಗಳಿಸಿ, ರಾಷ್ಟç ಲಾಕ್ಡೌನ್ ಕಾಲದಲ್ಲಿ ೨೦೨೧ರಲ್ಲಿ ಕೊಯಂಬತ್ತೂರಿನಲ್ಲಿ ನಡೆದ ‘ಐ ಎನ್ ಆರ್ ಸಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, ತಮ್ಮ ಮುಂದಿನ ಸ್ಪರ್ಧೆಗಳಿಗೆ ತಯಾರಿ ನಡೆಸಿದ್ದಾರೆ.

ಸಾಧನೆಗಳಿಗೆ ತಂದೆಯೇ ಗುರು : ಯಾವುದೇ ತರಬೇತುದಾರರನ್ನು ಹೊಂದದ ಚೇತನ್‌ರಿಗೆ ತಂದೆಯೇ ಗುರು. ಅಮ್ಮತ್ತಿಯ ಗುಡ್‌ಷಫರ್ಡ್ ಶಾಲೆಯಲ್ಲಿ ೧೦ನೇ ತರಗತಿ ತನಕ ಓದಿದ ಇವರು ಪಿ.ಯು.ಸಿ.ಯನ್ನು ಸೆಂಟ್ ಜೋಸೆಫ್ಸ್ ಬೆಂಗಳೂರಿನಲ್ಲಿ ಮುಗಿಸಿದರು.

ಇತರ ಸಾಧನೆಗಳು : ತನ್ನ ೧೭ನೇ ವಯಸ್ಸಿಗೆ ಜೀಪ್ ಮೋಡಿಫಿಕೇಶನ್‌ನಲ್ಲಿ ತಮ್ಮ ಕೌಶಲ್ಯ ಮೆರೆದಿದ್ದಾರೆ. ಪ್ರಾರಂಭದಲ್ಲಿ ಎರಡು ಚಕ್ರದ ವಾಹನಗಳಲ್ಲಿ ಆಸಕ್ತಿ ಹೊಂದಿದ್ದ ಇವರು ಕ್ರಮೇಣ ಮನೆಯವರ ಮಾತಿನಂತೆ ನಾಲ್ಕು ಚಕ್ರದ ವಾಹನಗಳ ರೇಸ್‌ನಲ್ಲಿ ತೊಡಗಿಸಿಕೊಂಡು ಸಾಧನೆಗಳನ್ನು ಮೆರೆದರು. ೨೦೧೬ ಮಹೀಂದ್ರ ಕ್ಲಬ್ ಚಾಲೆಂಜ್ ಮೋಟಾರ್ ರೇಸ್‌ನಲ್ಲಿ ದ್ವಿತೀಯ ಸ್ಥಾನ ೨೦೧೭ರ ಟೀಮ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದರು.

ಸಂಘಟನೆ-ಸಾಧನೆ: ‘‘ವಿ ೫ ಆಫ್ ರೋಡರ್ಸ್ ಕೂರ್ಗ್’’ ಎಂಬ ಸಂಘಟನೆಯನ್ನು ಜಗತ್ ನಂಜಪ್ಪ, ಉದ್ದಪಂಡ ಚೇತನ್, ಚೆಪ್ಪುಡಿರ ಮಾಚು, ಸಿದಿಪೌಲ್, ಬಿದ್ದಾಟಂಡ ಗಣಪತಿ ಸೇರಿ ಸ್ಥಾಪಿಸಿದರು. ಈ ಸಂಘಟನೆ ಮೂಲಕ ೨ ಆಟೋಕ್ರಾಸ್ ಸ್ಪರ್ಧೆಗಳನ್ನು ೧೨ಕ್ಕೂ ಹೆಚ್ಚು ಆಫ್ ರೋಡಿಂಗ್ ಸ್ಪರ್ಧೆಗಳನ್ನು ಇತರೆ ಸ್ಪರ್ಧೆಗಳನ್ನು ಸಂಘಟಿಸಿದ್ದಾರೆ. ಮಹತ್ವದ ಸಂಗತಿಯೆAದರೆ ಈ ಬಾರಿಯ ಆರ್‌ಎಫ್‌ಸಿಯ ‘‘ರೈನ್ ಫಾರೆಸ್ಟ್ ಚಾಲೆಂಜ್‘‘ ಗೋವಾದಲ್ಲಿ ನಡೆಯುವ ಸ್ಪರ್ಧೆಗೆ ಬೆಂಗಳೂರಿನ ಸತೀಶ್‌ಕುಮಾರ್‌ರರಿಗೆ ಉದ್ದಪಂಡ ಚೇತನ್‌ರವರು ಕೋ-ಡೈವರ್ ಆಗಿರುತ್ತಾರೆ. ಉದ್ದಪಂಡ ಚೇತನ್‌ರವರು ಈ ಸ್ಪರ್ಧೆಯಲ್ಲಿ ಗರಿಷ್ಟ ಪೆಯಿಡ್ ಕೋ-ಡ್ರೆöÊವರ್ (ಸಹಚಾಲಕ) ರಾಗಿರುತ್ತಾರೆ. ಮುಂದೆಯೂ ಉದ್ದಪಂಡ ಚೇತನ್‌ರವರು ಮೋಟಾರ್ ರೇಸ್ ಸ್ಪರ್ಧೆಗಳಲ್ಲಿ ಜಯಭೇರಿ ಬಾರಿಸಲಿ ಕೊಡಗಿಗೆ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಲೆಂದು ಆಶಿಸೋಣ.

-ಹರೀಶ್‌ಸರಳಾಯ, ಮಡಿಕೇರಿ.