ಮಡಿಕೇರಿ, ಜು.೬: ಮಡಿಕೇರಿಯ ಜ್ಞಾನದೀಪ ಮಹಿಳಾ ಸಂಘದ ‘ವಾರ್ಷಿಕ ಸಂಭ್ರಮ’ ಕಾರ್ಯಕ್ರಮ ನಡೆಯಿತು. ನಗರದ ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತ ನಾಡಿದ ಬೆಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಹೇಮಲತಾ ಸತೀಶ್, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಸಾಗಿಸಬೇಕೆಂದು ಕರೆ ನೀಡಿದರು.

ದೈವಜ್ಞ ಬ್ರಾಹ್ಮಣ ಸಮಾಜದ ಮಹಿಳೆಯರು ಸ್ವಯಂ ಉದ್ಯೋಗ ದಲ್ಲಿ ತೊಡಗಿಸಿಕೊಂಡು ಆರ್ಥಿಕ ವಾಗಿ ಸದೃಢರಾಗಬೇಕೆಂದು ಸಲಹೆ ನೀಡಿದ ಅವರು, ಸರಕಾರ ದೈವಜ್ಞ ಬ್ರಾಹ್ಮಣ ಸಮಾಜವನ್ನು ಪ್ರತ್ಯೇಕವಾಗಿ ಗುರುತಿಸುವ ಅಗತ್ಯವಿದೆ ಎಂದರು. ಸಂಘದ ಅಧ್ಯಕ್ಷೆ ಕಾಂಚನಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ವನ್ನು ಹಿರಿಯ ಸದಸ್ಯೆ ಚಂದ್ರಕಲಾ ಅರುಣ್ ಉದ್ಘಾಟಿಸಿದರು.

ಅತಿಥಿಗಳಾಗಿ ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ಟೌನ್ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷ ಬಿ.ಎಂ. ರಾಜೇಶ್, ನಿರ್ದೇಶಕ ರೋಷನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪ್ರಿಯಾ ಗುರುಕಿರಣ್ ವಾರ್ಷಿಕ ವರದಿ ಹಾಗೂ ಗೀತಾ ಮಂಜುನಾಥ್ ಲೆಕ್ಕಪತ್ರ ಮಂಡಿಸಿ ದರು. ಸಮಾಜದ ಹತ್ತನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಗದು ಮತ್ತು ಅಭಿನಂದನಾ ಪತ್ರವನ್ನು ನೀಡಿ ಪ್ರೋತ್ಸಾಹಿಸ ಲಾಯಿತು. ಪ್ರತಿಭಾ ಮಧುಕರ್ ಪ್ರಾರ್ಥಿಸಿ, ಮಾಲಾ ರೋಶನ್ ಸ್ವಾಗತಿಸಿ, ರಶ್ಮಿ ಪ್ರವೀಣ್ ವಂದಿಸಿ ದರು. ವಾರ್ಷಿಕ ಸಂಭ್ರಮಕ್ಕಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು.