ವೀರಾಜಪೇಟೆ, ಜು. ೬: ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ನಿಷ್ಟೆ ಹಾಗೂ ಶಾಂತಿಯಿAದ ವರ್ತಿಸುವ ಮೂಲಕ ತಮ್ಮ ಕರ್ತವ್ಯವನ್ನು ಮಾಡಬೇಕಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಡಾ ಆರ್.ಯೋಗಾನಂದ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆ ವತಿಯಿಂದ ವೀರಾಜಪೇಟೆ, ಜು. ೬: ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ನಿಷ್ಟೆ ಹಾಗೂ ಶಾಂತಿಯಿAದ ವರ್ತಿಸುವ ಮೂಲಕ ತಮ್ಮ ಕರ್ತವ್ಯವನ್ನು ಮಾಡಬೇಕಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಡಾ ಆರ್.ಯೋಗಾನಂದ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆ ವತಿಯಿಂದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೊನ್ನಚನ ಶ್ರೀನಿವಾಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಮಡಿಕೇರಿಯಲ್ಲಿ ಸಂಘದ ಕಟ್ಟಡ ಕಟ್ಟಲು ಎಲ್ಲಾ ತಯಾರಿ ನಡೆಸಲಾಗಿದೆ. ಸರ್ಕಾರ ದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ಕಾರಿ ನೌಕರರು ಮುಂದಾಗಬೇಕು ಎಂದರು. ಸಂಘದ ವೀರಾಜಪೇಟೆ ಶಾಖಾ ಅಧ್ಯಕ್ಷ ಬಿ.ಎಸ್.ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿ ವೇತನ ನಿಗದಿ ಮಾಡಬೇಕಾಗಿದೆ ಎಂದರು. ಶಿಕ್ಷಕ ಎ.ವಿ.ಮಂಜುನಾಥ್ ಸ್ವಾಗತಿಸಿದರು. ಸಂಘದ ಖಜಾಂಚಿ ಲಲಿತಾ ವಾರ್ಷಿಕ ವರದಿ ಮಂಡಿಸಿದರು.