*ಗೋಣಿಕೊಪ್ಪ, ಜು. ೬: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ಡಿಜಿ ಇಮೇಜ್ ಫೋಟೋಗ್ರಫಿ ಎಕ್ಸಲೆನ್ಸಿ ಅವಾರ್ಡನ್ನು ದಕ್ಷಿಣ ಕೊಡಗಿನ ೮ ಛಾಯಾಗ್ರಾಹಕರು ಪಡೆದುಕೊಂಡಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ೮ನೇ ವರ್ಷದ ಡಿಜಿ ಇಮೇಜ್ ೨೦೨೨ ಅಂತರರಾಷ್ಟಿçÃಯ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕಿನ ದಕ್ಷಿಣ ಕೊಡಗು ಛಾಯಾಗ್ರಾಹಕರ ಸಂಘದಿAದ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಸುರೇಶ್, ದಿ. ಬೆಸ್ಟ್ ವೀಡಿಯೋಗ್ರಾಫರ್ ಪ್ರಶಸ್ತಿಯನ್ನು ಡಾಡು ಜೋಸೆಫ್, ಅತ್ಯುತ್ತಮ ವೀಡಿಯೋ ಎಡಿಟರ್ ಹೆಚ್.ಬಿ. ರಾಜ, ಫೋಟೋ ಎಡಿಟರ್ ಪ್ರಶಸ್ತಿಯನ್ನು ದೀಪಕ್ ಪಡೆದುಕೊಂಡಿದ್ದಾರೆ.

ವೀರಾಜಪೇಟೆ ತಾಲೂಕಿನಿಂದ ಬೆಸ್ಟ್ ವೀಡಿಯೋ ಎಡಿಟರ್ ನಾಸೀರ್, ಉತ್ತಮ ಛಾಯಾಗ್ರಾಹಕ ಸತೀಶ್, ಉತ್ತಮ ವೀಡಿಯೋ ಗ್ರಾಫರ್ ರಾಮ್‌ದಾಸ್, ಫೋಟೋ ಎಡಿಟರ್ ಆಗಿ ಆನಂದ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕೊಡಗು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸುರೇಶ್ ಪೊನ್ನುಕೃಷ್ಣ, ಗೌರವಾಧ್ಯಕ್ಷ ಡಿ.ಸಿ. ರವೀಂದ್ರ ಹಾಗೂ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.