ಸೋಮವಾರಪೇಟೆ, ಜು.೬: ಇಲ್ಲಿನ ಕ್ಲಬ್ರಸ್ತೆಯ ಬದಿಯಲ್ಲಿದ್ದ ಅಪಾಯಕಾರಿ ಗುಂಡಿಗಳನ್ನು ಮುಚ್ಚಿಸುವ ಮೂಲಕ ಪಟ್ಟಣ ಪಂಚಾಯಿತಿ ಸಾರ್ವಜನಿಕ ಕಾಳಜಿ ತೋರಿದೆ. ಕಾಂಕ್ರಿಟ್ ರಸ್ತೆ ಕಾಮಗಾರಿ ಸಂದರ್ಭ ಚರಂಡಿಯನ್ನು ನಿರ್ಮಿಸಲಾಗಿದ್ದು, ಇದಕ್ಕೆ ಸ್ಲಾö್ಯಬ್ಗಳನ್ನು ಅಳವಡಿಸದೇ ಹಾಗೆಯೇ ಬಿಟ್ಟಿದ್ದರಿಂದ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದವು. ಇದರೊಂದಿಗೆ ಕೃಷ್ಣ ಮೆಡಿಕಲ್ ಮುಂಭಾಗ ಅವೈಜ್ಞಾನಿಕವಾಗಿ ಸ್ಲಾö್ಯಬ್ಗಳನ್ನು ಒಂದರ ಮೇಲೊಂದರAತೆ ಇಟ್ಟಿದ್ದರಿಂದ ಹಲವಷ್ಟು ಮಂದಿ ಬಿದ್ದು ಗಾಯಗೊಂಡಿದ್ದರು. ಈ ಬಗ್ಗೆ ‘ಶಕ್ತಿ’ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿದ್ದು, ಇದಕ್ಕೆ ಸ್ಪಂದಿಸಿರುವ ಪಟ್ಟಣ ಪಂಚಾಯಿತಿ ಆಡಳಿತ, ಗುಂಡಿಗಳಿಗೆ ಮುಕ್ತಿ ನೀಡಿದೆ. ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು ಹಾಗೂ ವಾರ್ಡ್ ಸದಸ್ಯ ಬಿ.ಆರ್. ಮಹೇಶ್ ಅವರುಗಳು ಖುದ್ದು ನಿಂತು ಪ.ಪಂ. ಕಾರ್ಮಿಕರ ಮೂಲಕ ಗುಂಡಿಗಳಿಗೆ ಸ್ಲಾö್ಯಬ್ ಅಳವಡಿಸುವ ಕಾಮಗಾರಿ ನಿರ್ವಹಿಸಿದ್ದಾರೆ.