ಸೋಮವಾರಪೇಟೆ,ಜು.೫: ಬಡ ವಿದ್ಯಾರ್ಥಿಯೋರ್ವಳ ಶಾಲಾ ಶುಲ್ಕ ಭರಿಸಿ ಆಕೆಯ ಶಿಕ್ಷಣಕ್ಕೆ ನೆರವಾಗುವ ಮೂಲಕ ಇಲ್ಲಿನ ರೋಟರಿ ಇನ್ನರ್ವೀಲ್ನ ಸದಸ್ಯರೋರ್ವರು ಮಾನವೀಯತೆ ಮೆರೆದಿದ್ದಾರೆ.
ಹಿರಿಯ ವಕೀಲ ನಾಗೇಶ್ ಅವರ ಪತ್ನಿ, ಇನ್ನರ್ವೀಲ್ನ ಲತಾ ನಾಗೇಶ್ ಅವರು ಸ್ಥಳೀಯ ಜ್ಞಾನವಿಕಾಸ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವರ್ಷಿಣಿ ಎಂಬ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಪೂರ್ಣ ಶುಲ್ಕ, ಸಮವಸ್ತç ಹಾಗೂ ಪುಸ್ತಕಗಳಿಗೆ ಅಗತ್ಯವಿರುವ ಹಣವನ್ನು ಲತಾ ನಾಗೇಶ್ ಭರಿಸಿದ್ದು, ೧೬೦೦೦ ರೂ. ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಕೆ.ಲಕ್ಷಿö್ಮ ಅವರಿಗೆ ಹಸ್ತಾಂತರಿಸಿದರು.