ಮಡಿಕೇರಿ, ಜು. ೬: ನೆಹರೂ ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಪೆರಾತ ಯುವಕ ಸಂಘ, ಅರ್ವತೋಕ್ಲು ಇದರ ಸಂಯುಕ್ತಾಶ್ರಯ ದಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿ ಯವರ ಜನ್ಮದಿನಾಚರಣೆ ಅಂಗವಾಗಿ ಉಚಿತ ರಕ್ತದಾನ ಶಿಬಿರ ನಡೆಸಲಾಯಿತು.

ಸ್ಥಳೀಯ ಜಿಲ್ಲಾಸ್ಪತ್ರೆ, ರಕ್ತನಿಧಿ, ಕೇಂದ್ರದಲ್ಲಿ ಯುವ ಒಕ್ಕೂಟ ಹಾಗೂ ಸಂಘದ ಪದಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭ ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್, ಕಾರ್ಯದರ್ಶಿ ಅರೆಯಂಡ ನೇತ್ರಾವತಿ, ಮಾಜಿ ಅಧ್ಯಕ್ಷರುಗಳಾದ ನವೀನ್ ದೇರಳ, ಕೂಡಂಡ ಸಾಬ ಸುಬ್ರಮಣಿ, ಸದಸ್ಯ ನೆರವಂಡ ನಿಖಿಲ್, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಹಾಗೂ ಜನಪದ ಕಲಾವಿದೆ ಐಮುಡಿಯಾದ ರಾಣಿ ಮಾಚಯ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಶುಶ್ರೂಷಕಿಯರು ಭಾಗವಹಿಸಿದ್ದರು.