ಕರಿಕೆ, ಜು: ೫. ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಯಲ್ಲಿ ನಿರ್ಮಾಣವಾಗುತ್ತಿರುವ ಕಸವಿಲೇವಾರಿ ಘಟಕ ಕ್ಕೆ ಕೊಡಗು ಉಪವಿಭಾಗ ಅಧಿಕಾರಿ ಯತೀಶ್ ಉಲ್ಲಾಳ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯತ್‌ಯಿAದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಹನ್ನೊಂದುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಸ ವಿಲೇವಾರಿ ಘಟಕ ನಿರ್ಮಾಣ ಹಂತದಲ್ಲಿದ್ದು, ಜಾಗ ಇನ್ನೂ ಗ್ರಾಮ ಪಂಚಾಯತಿಗೆ ಖಾತೆ ವರ್ಗಾವಣೆ ಆಗದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ಹದ್ದು ಬಸ್ತು ಸರ್ವೆ ನಡೆಸಿ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿನಲ್ಲಿ ಖಾತೆ ಮಾಡಿ ಕೊಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್‌ಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್, ಉಪ ತಹಶೀಲ್ದಾರ್ ದೊರೆ, ಕಂದಾಯ ಪರಿವೀಕ್ಷಕ ಸದಾಶಿವ, ಗ್ರಾಮ ಲೆಕ್ಕಾಧಿಕಾರಿ ಗಳಾದ ಜಟ್ಟಪ್ಪ, ಅನೂಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ, ಉಪಾಧ್ಯಕ್ಷ ಬಾಲಚಂದ್ರ ನಾಯರ್ ಹಾಜರಿದ್ದರು.