ವೀರಾಜಪೇಟೆ, ಜು. ೫: ವೀರಾಜಪೇಟೆಯಲ್ಲಿ ಇದೇ ಮೊದಲ ಬಾರಿಗೆ ಎ.ಸಿ ಕೋರ್ಟ್ ಕಾರ್ಯಾರಂಭ ಮಾಡುತ್ತಲಿದ್ದು, ತಾ. ೬ ರಂದು (ಇಂದು) ಮಧ್ಯಾಹ್ನ ಮೂರು ಗÀಂಟೆಗೆ ನ್ಯಾಯಾಲಯದ ಪ್ರಕ್ರಿಯೆಗಳು ಆರಂಭವಾಗಲಿವೆ.

ಎ.ಸಿ. ಕೋರ್ಟ್ ಅನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಲಿದ್ದಾರೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದಾರೆ. ವೀರಾಜಪೇಟೆ ವಕೀಲರ ಸಂಘದ ಸತತ ಪರಿಶ್ರಮ ಹಾಗೂ ಶಾಸಕ ಕೆ.ಜಿ ಬೋಪಯ್ಯ ಅವರ ವಿಶೇಷ ಮುತುವರ್ಜಿಯಿಂದ ಎ.ಸಿ. ಕೋರ್ಟ್ ವೀರಾಜಪೇಟೆಗೆ ಜಾರಿಯಾಗುವಂತಾಯಿತು. ಇದರಿಂದ ಕಕ್ಷಿದಾರರಿಗೆ ಜಿಲ್ಲಾಕೆಂದ್ರಕ್ಕೆ ಅಲೆಯುವುದು ತಪ್ಪಿದೆ. ಅಲ್ಲದೆ ಪ್ರಕರಣಗಳ ಶೀಘ್ರ ವಿಲೇವಾರಿಗೂ ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಎ.ಸಿ. ಕೋರ್ಟ್ ವೀರಾಜಪೇಟೆಯ ಮಿನಿ ವಿಧಾನಸೌಧದ ಕಟ್ಟಡದಲ್ಲಿ ಯೇ ಸಧ್ಯಕ್ಕೆ ಕಾರ್ಯನಿರ್ವಹಿಸಲಿದೆ. ಪ್ರಾರಂಭದಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಕೋರ್ಟ್ ಪ್ರಕ್ರಿಯೆ ನಡೆಯಲಿದೆ.