ಮಡಿಕೇರಿ, ಜು. ೫: ಪ್ರಸಕ್ತ ವರ್ಷ ವಾಡಿಕೆಯಂತೆ ಮುಂಗಾರು ಆರಂಭದ ಜೂನ್ ತಿಂಗಳಿನಲ್ಲಿ ಕೊಡಗಿನಲ್ಲಿ ಮಳೆಗಾಲದ ಅನುಭವವಾಗಿರಲಿಲ್ಲ. ಆದರೆ ಜುಲೈ ತಿಂಗಳು ಆರಂಭದಿAದ ಜಿಲ್ಲೆಯಾದ್ಯಂತ ಆರ್ದ್ರಾ ಮಳೆ ಭಾರೀ ಅಬ್ಬರ ತೋರಿದೆ. ಕೊನೆಯ ಹಂತದಲ್ಲಿ ಆರ್ದ್ರಾ ಮಳೆ ನಕ್ಷತ್ರದಲ್ಲಿ ಹೆಚ್ಚು ಮಳೆಯಾಗಿದ್ದು, ಅಲ್ಲಲ್ಲಿ ಹಲವಾರು ಅನಾಹುತಗಳು ಸಂಭವಿಸಿವೆ. ಆರ್ದ್ರಾ ತಾ. ೫ ರಂದು ಮುಕ್ತಾಯಗೊಳ್ಳುತ್ತಿದ್ದು, ತಾ. ೬ ರಿಂದ (ಇಂದಿನಿAದ) ಪುನರ್ವಸು ಮಳೆ ನಕ್ಷತ್ರ ಆರಂಭವಾಗಲಿದೆ.

ಪ್ರಸಕ್ತ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ವಿವಿಧ ನದಿ-ತೋಡು, ತೊರೆಗಳು ಮೈದುಂಬಿ ಹರಿಯುತ್ತಿವೆ. ಹಲವಾರು ಕಡೆಗಳಲ್ಲಿ ಮರಗಳು ಧರೆಗುರುಳಿರುವುದು, ಬರೆ ಕುಸಿತ, ಭೂಕುಸಿತ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿ, ರಸ್ತೆ ಸಂಪರ್ಕ ಕಡಿತದಂತಹ ಪ್ರಕರಣಗಳು ಜರುಗುತ್ತಿವೆ. ಮಳೆ ಹೆಚ್ಚಾದಲ್ಲಿ ಇನ್ನಷ್ಟು ಅಪಾಯಗಳು ಎದುರಾಗುವ ಸಾಧ್ಯತೆಯಿದೆ. ಪ್ರಸಕ್ತ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸೆಸ್ಕ್, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮರೋಪಾದಿ ಯಲ್ಲಿ ಕೆಲಸ ನಿರ್ವಹಿಸುತ್ತಿವೆ. ಇದರೊಂದಿಗೆ ಹಲವು ಮುಂಜಾಗರೂಕತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

೧೧೫.೬ ಮಿ.ಮೀ.ನಿಂದ ೨೦೪.೪ ಮಿ.ಮೀ. ವರೆಗೆ ವ್ಯಾಪಕ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ತಾ. ೬ರ ಬೆಳಿಗ್ಗೆ ೮.೩೦ರ ತನಕ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕಳೆದ ಸಾಲಿನ ಪ್ರಮಾಣದತ್ತ

ಇದೀಗ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ಸುರಿದ ಮಳೆ ಕಳೆದ ವರ್ಷ ಈ ತನಕ ಸುರಿದಿದ್ದ ಮಳೆಯ ಪ್ರಮಾಣವನ್ನು ಸರಿದೂಗಿಸುವತ್ತ ಸಾಗಿದೆ. ಕಳೆದ ವರ್ಷ ಜನವರಿ ಆರಂಭದಿAದ ಈತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೩೮.೦೫ ಇಂಚು ಮಳೆಯಾಗಿದ್ದರೆ, ಈ ಬಾರಿ ೩೮.೨೭ ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈತನಕ ೫೬.೪೮ ಇಂಚು ಮಳೆಯಾಗಿದ್ದು, ಈ ಬಾರಿ ೫೫.೯೬ ಇಂಚು ದಾಖಲಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ೩೩.೦೯ ಇಂಚು ದಾಖಲಾಗಿದ್ದರೆ ಈ ಬಾರಿ ೩೧.೧೪ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ೨೫.೧೦ ಇಂಚು ಹಾಗೂ ಈ ಬಾರಿ ೨೭.೧೭ ಇಂಚು ಮಳೆಯಾಗಿದೆ.

ಕಳೆದ ೨೪ ಗಂಟೆಯಲ್ಲಿ

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೬೩ ಇಂಚಿನಷ್ಟು ಸರಾಸರಿ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ೪.೦೭, ವೀರಾಜಪೇಟೆಯಲ್ಲಿ ೨.೧೯ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೧.೬೩ ಇಂಚಿನಷ್ಟು ಸರಾಸರಿ ಮಳೆ ಸುರಿದಿದೆ.

ಹೋಬಳಿವಾರು: ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸಂಪಾಜೆ ಹಾಗೂ ಭಾಗಮಂಡಲ ಹೋಬಳಿ ಯಲ್ಲಿ ಹೆಚ್ಚು ಮಳೆಯಾಗಿದೆ. ಸಂಪಾಜೆ ಯಲ್ಲಿ ೫.೭೬ ಹಾಗೂ ಭಾಗಮಂಡಲ ದಲ್ಲಿ ೪.೯೦, ಶಾಂತಳ್ಳಿ ೪.೪೪ ಇಂಚು ದಾಖಲಾಗಿದೆ. ಉಳಿದಂತೆ ಮಡಿಕೇರಿ ಹೋಬಳಿ ೨.೫೧, ನಾಪೋಕ್ಲು ೩.೧೧, ವೀರಾಜಪೇಟೆ ೨.೬೫, ಹುದಿಕೇರಿ ೩.೫೬, ಶ್ರೀಮಂಗಲ ೨.೨೦, ಪೊನ್ನಂಪೇಟೆ ೨.೧೨, ಅಮ್ಮತ್ತಿ ೧.೧೬, ಬಾಳೆಲೆ ೧.೪೫, ಸೋಮವಾg Àಪೇಟೆ ೧.೩೩, ಶನಿವಾರಸಂತೆ ೧.೨೦, ಕೊಡ್ಲಿಪೇಟೆ ೧.೪೦, ಸುಂಟಿಕೊಪ್ಪ ಹೋಬಳಿಯಲ್ಲಿ ೧.೦೮ ಇಂಚು ಮಳೆಯಾಗಿದೆ.

ಕಣಿವೆ: ನೀರಿನ ಮಟ್ಟ ಏರಿಕೆ

ಕಣಿವೆ: ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ಶ್ರೀ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.

ಹಾರಂಗಿ ಜಲಾಶಯ ಭರ್ತಿ ಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ಅಷ್ಟೇ ಪ್ರಮಾಣದ ಒಳಹರಿವು ನೀರನ್ನು ಜಲಾಶಯದ ನಾಲ್ಕು ಕ್ರೆಸ್ಟ್ ಗೇಟುಗಳಲ್ಲಿ ಹರಿ ಬಿಡುತ್ತಿರುವ ಹಿನ್ನೆಲೆಯಲ್ಲಿ ಕೂಡಿಗೆ ಬಳಿ ಕಾವೇರಿ ನದಿಯ ಒಡಲನ್ನು ಸೇರಿ ಒಂದು ಕಿಮೀ ದೂರ ಕ್ರಮಿಸುವ ಕಾವೇರಿ ಹಾಗು ಹಾರಂಗಿ ನದಿಗಳ ನೀರು ಕಣಿವೆ ಬಳಿ ನಯನ ಮನೋಹರ ವಾಗಿ ಕಾಣುವ ಚಿತ್ರಣವನ್ನು ಕಣ್ತುಂಬಿ ಕೊಳ್ಳಲು ಅಕ್ಕ ಪಕ್ಕದ ಗ್ರಾಮಗಳ ಜನರಷ್ಟೇ ಅಲ್ಲದೇ ಪ್ರವಾಸಿಗರು ಕೂಡ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಈಗಾಗಲೇ ಕಾವೇರಿ ನದಿಗೆ ಅಡ್ಡಲಾಗಿ ನೆರೆಯ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಗಡಿ ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲವಾಗು ವಂತೆ ಕಳೆದ ೧೫ ವರ್ಷಗಳ ಹಿಂದೆ ನಿರ್ಮಿಸಿದ್ದ ತೂಗು ಸೇತುವೆ ಕಳೆದ ಮೂರು ವಷÀðಗಳಲ್ಲಿ ಬಂದ ಕಾವೇರಿಯ ಪ್ರವಾಹಕ್ಕೆ ತುತ್ತಾದ ಕಾರಣ ಒಂದಷ್ಟು ಶಿಥಿಲಾವಸ್ಥೆ ತಲುಪಿದೆ. ಆದಾಗ್ಯೂ ಇಲ್ಲಿನ ಜನರು ವಿಧಿ ಇಲ್ಲದೇ ಇದೇ ತೂಗು ಸೇತುವೆ ಮೇಲೆಯೆ ದಿನ ನಿತ್ಯದ ಸಂಚಾರಕ್ಕೆ ತೊಡಗಿಕೊಂಡಿದ್ದಾರೆ.

ನದಿಯ ತಳದಿಂದ ರಾಮಲಿಂಗೇಶ್ವರ ದೇವಾಲಯದ ಪ್ರವೇಶ ದ್ವಾರಕ್ಕೆ ೪೮ ಮೆಟ್ಟಿಲುಗಳಿದ್ದು ಈಗಾಗಲೇ ೨೮ ಮೆಟ್ಟಿಲುಗಳ ಮಟ್ಟಕ್ಕೆ ನದಿಯ ನೀರು ಕಾವೇರಿದೆ. ಇನ್ನು ಬಾಕಿ ಇರುವ ೨೦ ಮೆಟ್ಟಿಲುಗಳು ತುಂಬಿದಲ್ಲಿ ಕುಶಾಲನಗರ ಹಾಗು ಮುಳ್ಳುಸೋಗೆ ವ್ಯಾಪ್ತಿಯ ತಗ್ಗು ಪ್ರದೇಶಗಳ ಕೆಲವು ಮನೆಗಳು ಜಲಾವೃತಗೊಳ್ಳುವ ಸಂಭವವಿದೆ.ಮಡಿಕೇರಿ: ಮಂಗಳೂರು ಹೆದ್ದಾರಿಯಲ್ಲಿ ಕೆಲವೆಡೆ ರಸ್ತೆ ಬದಿ ಬರೆಕುಸಿತ ಸಂಭವಿಸಿದ್ದು, ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯವೂ ನಡೆದಿದೆ. ಎರಡನೇ ಮೊಣ್ಣಂಗೇರಿ, ಮದೆನಾಡು ವ್ಯಾಪ್ತಿಯಲ್ಲಿ, ಅಬ್ಬಿಕೊಲ್ಲಿ ಜಲಪಾತದ ಬಳಿ ಸೇರಿದಂತೆ ಅಲ್ಲಲ್ಲಿ ಮಣ್ಣು ಕುಸಿದಿದ್ದು, ಅದನ್ನು ತೆರವುಗೊಳಿಸುವುದರ ಜೊತೆಗೆ ಹೆದ್ದಾರಿ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾರ್ಯವೂ ಭರದಿಂದ ಸಾಗಿದೆ.

ಕರ್ತೊಜಿ ಬಳಿ ನೀರು ಮತ್ತು ಮಣ್ಣಿನ ಒತ್ತಡ ಹೆಚ್ಚಾಗಿ ರಸ್ತೆ ಉಬ್ಬುತ್ತಿದ್ದು, ಮಣ್ಣನ್ನು ಹಿಟಾಚಿಯ ಮೂಲಕ ತೆರವು ಮಾಡಲಾಗುತ್ತಿದೆ. ಸ್ಥಳದಲ್ಲಿ ರಾಷ್ಟಿçÃಯ ಹೆದ್ದಾರಿಯ ಕಾರ್ಯಪಾಲಕ ಅಭಿಯಂತರ ಜಿ.ಎನ್. ಹೆಗ್ಡೆ ಅವರು ಖುದ್ದು ಹಾಜರಿದ್ದು, ಮಣ್ಣು ತೆರವು ಕಾರ್ಯ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿರಂತರ ಮಳೆಯಿಂದ ನೀರು ಮತ್ತು ಮಣ್ಣಿನ ಒತ್ತಡದಿಂದ ರಸ್ತೆ ಉಬ್ಬುತ್ತಿದ್ದು, ಚರಂಡಿ ತೆಗೆದು ನೀರನ್ನು ಹರಿಯುವಂತೆ ಮಾಡುವುದರ ಜೊತೆಗೆ ಮಣ್ಣನ್ನು ಕೂಡ ತೆರವು ಮಾಡಲಾಗುತ್ತಿದೆ. ತಾತ್ಕಾಲಿಕವಾಗಿ ಈ ಕಾರ್ಯಕೈಗೊಳ್ಳಲಾಗಿದ್ದು, ಇಲ್ಲಿನ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಮಳೆಗಾಲದ ಬಳಿಕ ಇಲ್ಲಿನ ಮಣ್ಣನ್ನು ಪರೀಕ್ಷೆಗೊಳಪಡಿಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.ಆಲೂರು ಸಿದ್ದಾಪುರ: ಕಳೆದ ೫ ದಿನಗಳಿಂದ ಶನಿವಾರಸಂತೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಸುಳುಗಳಲೆ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಸ್ನಾನದ ಮನೆಯ ಗೊಡೆ ಬಿದ್ದಿದ್ದು ವೃದ್ಧೆಗೆ ಗಾಯವಾಗಿದೆ.

ವಸಂತಮ್ಮ (೭೦) ಗಾಯಗೊಂಡ ವೃದ್ಧೆ. ಶಿಥಿಲಗೊಂಡಿದ್ದ ಸ್ನಾನದ ಮನೆಯ ಗೋಡೆ ಬಾರಿ ಮಳೆಗೆ ಕುಸಿದಿದ್ದು ಗೋಡೆ ವಸಂತಮ್ಮನವರ ಮೇಲೆ ಬಿದ್ದಿದ್ದರಿಂದ ಕೈ ಕಾಲು ಹಾಗೂ ಮುಖದ ಭಾಗಕ್ಕೆ ಹೆಚ್ಚು ಗಾಯವಾಗಿದ್ದು ಶನಿವಾರಸಂತೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲಾಗಿದೆ. ಮನೆ ಕುಸಿದ ಸ್ಥಳಕ್ಕೆ ದುಂಡಳ್ಳಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ನಿತಿನ್, ಸದಸ್ಯ ಮನು ಪಿಡಿಓ ರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

ಶನಿವಾರಸಂತೆಯ ಕಾವೇರಿ ಕಾಲೇಜಿಗೆ ತೆರಳುವ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿರುವುದರಿAದ ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿರು ವುದರಿಂದ ಶಾಲಾ ಮಕ್ಕಳಿಗೆ ನಡೆದಾಡಲು ತೊಂದರೆಯಾಗುತ್ತಿದೆ. ಅನೇಕ ಬಾರಿ ಸಂಬAಧಪಟ್ಟವರ ಗಮನಕ್ಕೆ ತಂದರು ಸಹ ಪ್ರಯೋಜನಕ್ಕೆ ಬಂದಿಲ್ಲ ಎಂದು ಕಾಲೇಜು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಹೋಬಳಿಯ ದುಂಡಳ್ಳಿ, ಗೌಡಳ್ಳಿ, ನಿಡ್ತ, ಆಲೂರು ಸಿದ್ದಾಪುರ, ಕೊಡ್ಲಿಪೇಟೆ ಹಂಡ್ಲಿ. ಮುದ್ರವಳ್ಳಿ, ಬೆಳ್ಳಾರಳ್ಳಿ, ಗೊಪಾಲಪುರ ಸೇರಿದಂತೆ ಇನ್ನಿತರ ಈ ವ್ಯಾಪ್ತಿಯಲ್ಲಿ ಕಳೆದ ೪ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕೆರೆ, ಕೊಳ್ಳಗಳು ಮಳೆಗೆ ತುಂಬಿಕೊಳ್ಳುತ್ತಿವೆ. ಕೆಲವು ಕಡೆಗಳಲ್ಲಿ ಮಳೆಗಾಳಿಗೆ ರಸ್ತೆ ಮೇಲೆ ಮರ, ಮರದ ಕೊಂಬೆಗಳು ಮುರಿದುಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಮುಳ್ಳೂರು ಇಂಟಿನಾಯಕನ ಕೆರೆ, ಕಾಜೂರು ಹೊಳೆ ಹಾಗೂ ಹೆಮ್ಮನೆ ಹೊಳೆಯ ನೀರು ತುಂಬಿ ತುಳುಕುತ್ತಿದೆ.ಸಿದ್ದಾಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಉಕ್ಕಿ ಹರಿಯುತ್ತಿದ್ದು, ಕಂದಾಯ ಇಲಾಖಾಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರುತ್ತದೆ. ನದಿ ತೀರದ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ. ಸಿದ್ದಾಪುರದ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡಿನ ಇಳಿಜಾರು ಪ್ರದೇಶಗಳಲ್ಲಿ ನದಿ ನೀರು ರಭಸವಾಗಿ ಹರಿಯುತ್ತಿದೆ. ಈ ಭಾಗದಲ್ಲಿ ಚಿಕ್ಕನಹಳ್ಳಿ ಪೈಸಾರಿಗೆ ಸಂಪರ್ಕ ರಸ್ತೆಯು ಜಲಾವೃತದಿಂದ ಸಂಪರ್ಕ ಕಡಿತಗೊಂಡಿದೆ. ನೀರಿನ ಮಟ್ಟ ಏರುತಲಿದೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ್ ಅವರ ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್ ಹಾಗೂ ಗ್ರಾಮ ಸಹಾಯಕ ಕೃಷ್ಣನ್ ಕುಟ್ಟಿ ಪ್ರವಾಹಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಈಗಾಗಲೇ ನದಿ ತೀರದಲ್ಲಿ ಪ್ರವಾಹ ಏರಿಕೆಯಾದಲ್ಲಿ ಅಲ್ಲಿನ ನಿವಾಸಿಗಳಿಗೆ ಆಶ್ರಯ ಪಡೆಯಲು ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿದೆ. ಹಾಗೂ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ತಿಳಿಸಿದರು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನದಿದಡ ಕುಸಿಯುವ ಸಾಧ್ಯತೆ ಇದೆ. ಕಳೆದ ಬಾರಿಯ ಪ್ರವಾಹಕ್ಕೆ ನದಿ ತೀರದಲ್ಲಿ ಆಧಾರವಾಗಿದ್ದ ಬಿದಿರುಗಳು ನೀರಿನ ಹೊಡೆತಕ್ಕೆ ನದಿ ಪಾಲಾಗಿದ್ದು, ನದಿ ದಡದಲ್ಲಿ ಇದೀಗ ಯಾವುದೇ ಆಧಾರಗಳು ಇಲ್ಲದಂತಾಗಿದೆ.

ಪ್ರವಾಹ ಭೀತಿ: ನೆಲ್ಯಹುದಿಕೇರಿ ಭಾಗದ ಕುಂಬಾರಗುAಡಿ, ಬೆಟ್ಟದಕಾಡು ಭಾಗದ ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮಲೆಕ್ಕಿಗ ಸಚಿನ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ನೀರಿನ ಮಟ್ಟ ಏರಿಕೆಯಾಗಿ ಪ್ರವಾಹ ಬಂದಲ್ಲಿ ನದಿ ತೀರದ ನಿವಾಸಿಗಳಿಗೆ ಆಶ್ರಯ ಪಡೆಯಲು ಗ್ರಾಮದ ಸಮುದಾಯ ಭವನ ಇನ್ನಿತರ ಸಭಾಂಗಣಗಳನ್ನು ಕಂದಾಯ ಇಲಾಖಾಧಿಕಾರಿಗಳು ಗುರುತಿಸಿದ್ದಾರೆ.ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್ ಹಾಗೂ ಗ್ರಾಮ ಸಹಾಯಕ ಕೃಷ್ಣನ್ ಕುಟ್ಟಿ ಪ್ರವಾಹಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಈಗಾಗಲೇ ನದಿ ತೀರದಲ್ಲಿ ಪ್ರವಾಹ ಏರಿಕೆಯಾದಲ್ಲಿ ಅಲ್ಲಿನ ನಿವಾಸಿಗಳಿಗೆ ಆಶ್ರಯ ಪಡೆಯಲು ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿದೆ. ಹಾಗೂ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ತಿಳಿಸಿದರು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನದಿದಡ ಕುಸಿಯುವ ಸಾಧ್ಯತೆ ಇದೆ. ಕಳೆದ ಬಾರಿಯ ಪ್ರವಾಹಕ್ಕೆ ನದಿ ತೀರದಲ್ಲಿ ಆಧಾರವಾಗಿದ್ದ ಬಿದಿರುಗಳು ನೀರಿನ ಹೊಡೆತಕ್ಕೆ ನದಿ ಪಾಲಾಗಿದ್ದು, ನದಿ ದಡದಲ್ಲಿ ಇದೀಗ ಯಾವುದೇ ಆಧಾರಗಳು ಇಲ್ಲದಂತಾಗಿದೆ.

ಪ್ರವಾಹ ಭೀತಿ: ನೆಲ್ಯಹುದಿಕೇರಿ ಭಾಗದ ಕುಂಬಾರಗುAಡಿ, ಬೆಟ್ಟದಕಾಡು ಭಾಗದ ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮಲೆಕ್ಕಿಗ ಸಚಿನ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ನೀರಿನ ಮಟ್ಟ ಏರಿಕೆಯಾಗಿ ಪ್ರವಾಹ ಬಂದಲ್ಲಿ ನದಿ ತೀರದ ನಿವಾಸಿಗಳಿಗೆ ಆಶ್ರಯ ಪಡೆಯಲು ಗ್ರಾಮದ ಸಮುದಾಯ ಭವನ ಇನ್ನಿತರ ಸಭಾಂಗಣಗಳನ್ನು ಕಂದಾಯ ಇಲಾಖಾಧಿಕಾರಿಗಳು ಗುರುತಿಸಿದ್ದಾರೆ.ಸೋಮವಾರಪೇಟೆ: ತಾಲೂಕಿನÀ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ವರುಣನ ಆರ್ಭಟದಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ವಾತಾವರಣ ಶೀತಮಯವಾಗಿದ್ದು, ಎಲ್ಲೆಲ್ಲೂ ಜಲದ ಒರತೆ ಕಂಡುಬರುತ್ತಿದೆ. ರಸ್ತೆಗಳೂ ಸಹ ದುಸ್ಥಿತಿಗೆ ತಲುಪಿದ್ದು, ಬೃಹತ್ ವಾಹನಗಳ ಸಂಚಾರ ದುಸ್ತರವಾಗಿದೆ. ಕಳೆದ ವರ್ಷ ಜುಲೈ ೧ರಿಂದ ೫ರವರೆಗೆ ೧೯ ಮಿ.ಮೀ. ಮಳೆಯಾಗಿದ್ದರೆ ಪ್ರಸಕ್ತ ವರ್ಷ ಈ ಐದು ದಿನಗಳಲ್ಲಿ ೭೪.೪ ಇಂಚು ದಾಖಲೆಯ ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಸೂರ್ಲಬ್ಬಿಗೆ ೯.೧೨ ಇಂಚು ಮಳೆಯಾಗಿದೆ.

ಕಳೆದ ವರ್ಷ ಇಲ್ಲಿಯವರೆಗೆ ಸೂರ್ಲಬ್ಬಿಗೆ ೪೨.೬೪ ಇಂಚು ಸುಂಟಿಕೊಪ್ಪ: ಪಂಪ್‌ಹೌಸ್ ರಸ್ತೆಯ ಅಂಬೇಡ್ಕರ್ ಬಡಾವಣೆಯ ನಿವಾಸಿ ನಂದಿನಿ ಎಂಬವರಿಗೆÀ ಸೇರಿದ ವಾಸದ ಮನೆಯು ಗಾಳಿ-ಮಳೆಗೆ ಭಾಗಶಃ ಕುಸಿದಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಸದಸ್ಯರುಗಳಾದ ಬಿ.ಎಂ .ಸುರೇಶ್, ವಸಂತಿ, ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾಮಲೆಕ್ಕಿಗ ನಾಗೇಂದ್ರ ತೆರಳಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.ನಾಪೋಕ್ಲು: ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜೀವನದಿ ಕಾವೇರಿ ಅಪಾಯದ ಮಟ್ಟ ತಲುಪುತ್ತಿದೆ. ಕೊಟ್ಟಮುಡಿ ಬಳಿಯಲ್ಲಿ ಪ್ರವಾಹ ತುಂಬಿ ಹರಿಯುತ್ತಿದೆ. ಇದುವರೆಗೆ ಈ ವಿಭಾಗಕ್ಕೆ ಸುಮಾರು ೩೮ ಇಂಚು ಮಳೆಯಾಗಿದ್ದು, ಕಳೆದ ವಾರದಿಂದ ಮಳೆಯ ನಡುವೆ ಭೂಮಿ ನಡುಗಿದ ಘಟನೆ ನಡೆದಿದೆ. ಮಳೆಯು ನಿರಂತರವಾಗಿ ಸುರಿಯುತ್ತಿದ್ದು ಮಳೆ ಮುಂದುವರೆದರೆ ನಾಪೋಕ್ಲು ಪಟ್ಟಣ, ಮೂರ್ನಾಡು, ಬೆಟ್ಟಗೇರಿ. ಪಾರಾಣೆ, ಕಕ್ಕಬ್ಬೆ, ಬಲ್ಲಮಾವಟಿ, ಭಾಗಮಂಡಲದ ಸಂಪರ್ಕ ಕಳೆದುಕೊಂಡು ದ್ವೀಪವಾಗಲಿದೆ.ನಾಪೋಕ್ಲು: ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜೀವನದಿ ಕಾವೇರಿ ಅಪಾಯದ ಮಟ್ಟ ತಲುಪುತ್ತಿದೆ. ಕೊಟ್ಟಮುಡಿ ಬಳಿಯಲ್ಲಿ ಪ್ರವಾಹ ತುಂಬಿ ಹರಿಯುತ್ತಿದೆ. ಇದುವರೆಗೆ ಈ ವಿಭಾಗಕ್ಕೆ ಸುಮಾರು ೩೮ ಇಂಚು ಮಳೆಯಾಗಿದ್ದು, ಕಳೆದ ವಾರದಿಂದ ಮಳೆಯ ನಡುವೆ ಭೂಮಿ ನಡುಗಿದ ಘಟನೆ ನಡೆದಿದೆ. ಮಳೆಯು ನಿರಂತರವಾಗಿ ಸುರಿಯುತ್ತಿದ್ದು ಮಳೆ ಮುಂದುವರೆದರೆ ನಾಪೋಕ್ಲು ಪಟ್ಟಣ, ಮೂರ್ನಾಡು, ಬೆಟ್ಟಗೇರಿ. ಪಾರಾಣೆ, ಕಕ್ಕಬ್ಬೆ, ಬಲ್ಲಮಾವಟಿ, ಭಾಗಮಂಡಲದ ಸಂಪರ್ಕ ಕಳೆದುಕೊಂಡು ದ್ವೀಪವಾಗಲಿದೆ.ಕಣಿವೆ: ಕಾವೇರಿ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೂಡಿಗೆ ಹೆಬ್ಬಾಲೆ ಮಾರ್ಗದಲ್ಲಿ ಬರುವ ಕೇಂದ್ರೀಯ ಜಲ ಮಾಪನ ಕೇಂದ್ರದ ಬಳಿ ರೈತರ ಕೃಷಿ ಜಮೀನು ಇದ್ದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿರುವ ಚಿತ್ರಣ ಮಂಗಳವಾರ ಕಂಡು ಬಂದಿದೆ. (ನಾಲ್ಕನೇ ಪುಟಕ್ಕೆ)