ಮಡಿಕೇರಿ. ಜು. ೫: ಕೊಡಗು ಜಿಲ್ಲೆ ಓರ್ವ ವಸ್ತುನಿಷ್ಠ ಪತ್ರಕರ್ತನನ್ನು ಕಳೆದುಕೊಂಡಿದೆ. ಅವರ ನೆನಪು ಚಿರಸ್ಥಾಯಿಯಾಗಿ ನಿಲ್ಲುವಂತೆ ಆಗಲು ಎಲ್ಲರ ಸಹಕಾರದೊಂದಿಗೆ ಒಂದು ದತ್ತಿನಿಧಿ ಸ್ಥಾಪಿಸಿ ಅವರ ಆದರ್ಶ ಮತ್ತು ತತ್ವನಿಷ್ಠತೆಯನ್ನು ನೆನಪಿಸುವ ಕೆಲಸ ಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟಿನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ನುಡಿದರು. ಕೊಡಗು ಪತ್ರಿಕಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ್ದ ಪತ್ರಕರ್ತ ಮನುಶೆಣೈ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಪತ್ರಿಕಾ ವರದಿಯ ವಿಚಾರದಲ್ಲಿ ಯಾವುದೇ ಮುಲಾಜಿಲ್ಲದೆ, ಅಂಜಿಕೆಯಿಲ್ಲದೆ ವಸ್ತುನಿಷ್ಠವಾಗಿ ಬರೆಯುತ್ತಿದ್ದರು. ಓರ್ವ ಪ್ರಗತಿಪರ ಪತ್ರಕರ್ತನನ್ನು ಕಳೆದುಕೊಂಡಿದ್ದೇವೆ ಎಂದರು.

ಹಿರಿಯ ವಕೀಲರಾದ ಎಂ.ಎ. ನಿರಂಜನ್ ಮಾತನಾಡಿ ಮನುಶೆಣೈ ರವರು ಯಾವುದೇ ಸುದ್ದಿ ಮಾಡಿದರೂ ಆ ವಿಚಾರದ ಆಳಕ್ಕಿಳಿದು ವಿಶ್ಲೇಷಣೆ ಮಾಡುತ್ತಿದ್ದರು. ಯಾವುದೇ ಅಂಜಿಕೆ ಇಲ್ಲದ ಸತ್ಯನಿಷ್ಟ ಪತ್ರಕರ್ತರಾಗಿದ್ದರು ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳಿಧರ್ ಮಾತನಾಡಿ ಕೊಡಗು ಪತ್ರಿಕಾ ಭವನದ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದು ಪತ್ರಕರ್ತರ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದರು ಎಂದು ಸ್ಮರಿಸಿದರು

ಹಿರಿಯ ವಕೀಲರಾದ ಕೆ.ಆರ್, ವಿದ್ಯಾಧರ್, ವಕೀಲರಾದ ಕಿಶನ್ ಪೂವಯ್ಯ, ಸುನಿಲ್ ಪತ್ರಾವೊ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ, ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ಹೆಚ್.ಎಲ್. ದಿವಾಕರ್ ಮಾತನಾಡಿದರು.

ಕಸಾಪದ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ರೇವತಿ ರಮೇಶ್, ಮಡಿಕೇರಿ ತಾಲೂಕು ಕಸಾಪದ ಅಂಬೆಕಲ್ ನವೀನ್, ಕೆ.ಟಿ.ಬೇಬಿ ಮ್ಯಾಥ್ಯೂ, ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜೇಶ್, ಸದಸ್ಯರಾದ ಎಂ.ಎ.ಮೊಹಮ್ಮದ್ ಅಲಿ, ಹೆಚ್.ಎ.ವೆಂಕಟೇಶ್ ಪೈ, ವಿ.ಟಿ.ಮಂಜುನಾಥ್, ಎನ್.ಎಂ.ಷರೀಫ್ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ಸಹ ಕಾರ್ಯದರ್ಶಿ ಅಬ್ದುಲ್ ಲತೀಫ್, ಕೊಡಗು ಪತ್ರಕರ್ತರ ಸಂಘದ ಕಾರ್ಯದರ್ಶಿ ರಂಜಿತ್ ಉಜ್ವಲ್, ಪತ್ರಕರ್ತರಾದ ಎಸ್.ಎಲ್. ಶಿವಣ್ಣ, ಉಷಾ ಪ್ರೀತಮ್, ಶ್ರೀಧರ ಹೂವಲ್ಲಿ, ಜಯಪ್ಪ ಹಾನಗಲ್, ಟಿ.ಕೆ ಸಂತೋಷ್, ಪ್ರಸಾದ್ ಸಂಪಿಗೆಕಟ್ಟೆ, ಹರೀಶ್, ಯುವರಾಜ ಕೃಷ್ಣ, ರಜತ್ ರಾಜ್, ಕೌಸರ್ ಇದ್ದರು. ಮೊದಲಿಗೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಮನುಶೆಣೈ ರವರಿಗೆ ಶೃದ್ಧಾಂಜಲಿ ಅರ್ಪಿಸಿದರು. ಗಾಯಕ ಲಿಯಾಕತ್ ಆಲಿಯವರು ಮನುಶೆಣೈ ರವರಿಗೆ ನೆಚ್ಚಿನ ಹಾಡು ಹಾಡುವ ಮೂಲಕ ನುಡಿನಮನ ಸ್ಮರಿಸಿದರು.