ಗೋಣಿಕೊಪ್ಪ ವರದಿ, ಜು. ೫: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮತ್ತು ಸುಕ್ವಾನ್ ಕಾಫಿ ಇಂಡಿಯಾ ವತಿಯಿಂದ ಅವಶ್ಯವಿರುವ ರೈತರಿಗೆ ಗಿಡಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಕಾಫಿ ಮತ್ತು ಅನನ್ಯ ಜೀವ ವೈವಿಧ್ಯತೆ ಸುಸ್ಥಿರತೆಗೆ ಯೋಜನೆ ರೂಪಿಸಲಾಗಿದ್ದು, ಕಾಫಿ ಬೆಳೆಗಾರರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ. ಒಬ್ಬರಿಗೆ ೨೦ ಗಿಡದಿಂದ ಗರಿಷ್ಠ ೧೦೦ ಗಿಡ ನೀಡಲಾಗುತ್ತದೆ. ೪ ಜಾತಿಯ ಗಿಡ ಪಡೆಯಬಹುದಾಗಿದ್ದು, ಅರಣ್ಯ ಕಾಲೇಜು ನೀಡುವ ಮಾರ್ಗಸೂಚಿಯಂತೆ ನಾಟಿ ಮಾಡಬೇಕಿದೆ. ಗಿಡದ ನಿರ್ವಹಣಾ ವೆಚ್ಚ ಕೂಡ ಭರಿಸಲಾಗುತ್ತದೆ.

ಲಭ್ಯವಿರುವ ಗಿಡಗಳು: ಖಾದ್ಯಾ ಕಾಡು ಹಣ್ಣು ಗಿಡಗಳಾದ ಅಮ್ಮೆ ಹಣ್ಣು, ಹಾಲೆ ಹಣ್ಣು, ಮಜ್ಜಿಗೆ ಹಣ್ಣು, ಚೆಲ್ಲೆ ಹಣ್ಣು, ಸಂಪಿಗೆ ಹಣ್ಣು, ಕಾಡು ಮಾವು, ಹೆಬ್ಬಲಸು, ಖಾದ್ಯ ಇಳುವರಿ ಹಣ್ಣು ಗಿಡಗಳಾದ ಕಿತ್ತಳೆ, ಮಲಯನ್ ಆಪಲ್, ಎಗ್ಗ್ ಫ್ರೂಟ್, ಸೋರ್‌ಸೂಪ್, ಚೆರಿ ಸೀಬೆ, ರೋಸ್ ಆಪಲ್, ಬೆಣ್ಣೆಹಣ್ಣು, ರಂಗಪುರ್ ನಿಂಬೆ, ಕರಂಬೊಲಾ, ಗಿಡಗಳಾದ ಅಗರ್‌ವುಡ್, ಹೊನ್ನೆ, ಧೂಪ, ಮಹಾಗನಿ, ಲಿಟ್ಸಿಯಾ, ಬನಾಟೆ, ನಟ್‌ಮೆಗ್, ಬೀಟೆ, ಎಬೊನಿ, ಬಲಂಜಿ, ಹಲಸು ಗಿಡಗಳನ್ನು ನೀಡಲಾಗುತ್ತಿದೆ. ೭೩೩೭೮೨೭೨೦೩ ಸಂಪರ್ಕಿಸಬಹುದಾಗಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.