ಹೆಚ್.ಜೆ. ರಾಕೇಶ್ ಮಡಿಕೇರಿ, ಜು. ೪: ದಕ್ಷಿಣ ಕನ್ನಡ- ಕೊಡಗು ಗಡಿ ಗ್ರಾಮಗಳಲ್ಲಿ ಪದೇ ಪದೇ ಆಗುತ್ತಿರುವ ಭೂಕಂಪನಕ್ಕೆ ಕಾರಣವೇನಿರಬಹುದು ಎಂಬ ಕುತೂಹಲ ಹಾಗೂ ಆತಂಕ ಎರಡು ಕೂಡ ಜಿಲ್ಲೆಯ ಜನರನ್ನು ಕಾಡುತ್ತಿದೆ. ೮ ಬಾರಿ ಜಿಲ್ಲೆಯಲ್ಲಿ ಭೂಮಿ ಕಂಪಿಸಿದರೂ ವಿಜ್ಞಾನಿಗಳು ಮಾತ್ರ ನಿಖರ ಕಾರಣ ತಿಳಿಯಲು ನಿರಾಸಕ್ತಿ ತೋರುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಈ ಬಗ್ಗೆ ಒತ್ತಡ ಹಾಕದೆ ನಿರ್ಲಕ್ಷö್ಯ ತೋರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಬರೆ ಕುಸಿತ ಘಟನೆಗಳು ಸಂಭವಿಸುತ್ತಿವೆ. ೨೦೧೮-೧೯ರಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪ ಈ ಬಾರಿಯೂ ಕಣ್ಣ ಮುಂದೆ ಬರುತ್ತಿದ್ದು, ಜಿಲ್ಲೆಗೆ ಯಾವುದೇ ಅಪತ್ತು ಎದುರಾಗಬಾರದು ಎಂದು ದೇವರ ಮೊರೆಗೆ ಜನ ಹೋಗಿದ್ದಾರೆ. ಇಷ್ಟೆಲ್ಲ ಆತಂಕ, ದುಗುಡ ಸೃಷ್ಟಿಗೆ ಭೂಕಂಪನ ದೊಡ್ಡ ಕಾರಣವಾಗಿದೆ. ಆದರೆ, ಈ ಕಂಪನದ ಹಿಂದಿನ ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ದೊರೆತಿಲ್ಲ.

ಪದೇ ಪದೇ ಭೂಕಂಪನ

ಜೂನ್ ೨೩ ರಂದು ಮೊದಲ ಬಾರಿಗೆ ಜಿಲ್ಲೆಯಲ್ಲಿ ಲಘುಭೂ ಕಂಪನದ ಅನುಭವವಾಯಿತು. ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳು ಹಾಗೂ ಕುಶಾಲನಗರ, ಮಡಿಕೇರಿ ಬಳಿಯ ದೇವಸ್ತೂರಿನಲ್ಲಿ ಭೂಕಂಪನದ ಅನುಭವವಾಗಿತ್ತು.

ಕರಿಕೆ-ಪೆರಾಜೆ-ಚೆಂಬು-ಸAಪಾಜೆ ವ್ಯಾಪ್ತಿಯಲ್ಲಿ ಜೂನ್ ೨೫ ರಂದು ಬೆಳಿಗ್ಗೆ ೯.೧೦ಕ್ಕೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ೨.೩ ಮ್ಯಾಗ್ನಿಟ್ಯೂಡ್ ತೀವ್ರತೆ ಅಂದು ದಾಖಲಾಗಿತ್ತು. ಮೂರನೇ ಬಾರಿಗೆ ತಾ. ೨೮ ರಂದು ಬೆಳಿಗ್ಗೆ ಮಡಿಕೇರಿ ತಾಲೂಕಿನ ಸುತ್ತಮುತ್ತಲಿನ ಅನೇಕ ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ ೩ ಮ್ಯಾಗ್ನಿಟ್ಯೂಡ್ ತೀವ್ರತೆ ದಾಖಲಾಗಿತ್ತು. ಅಂದು ಸಂಜೆಯೇ ಭೂಕಂಪನವಾಗಿದ್ದ ಪೆರಾಜೆ, ಚೆಂಬು, ಕರಿಕೆ ವಿಭಾಗದಲ್ಲಿ ಮತ್ತೇ ಭೂಮಿ ಕಂಪಿಸಿದೆ. ಆ ಸಮಯದಲ್ಲಿ ೧.೦೮ ಮ್ಯಾಗ್ನಿಟ್ಯೂಡ್ ತೀವ್ರತೆ ದಾಖಲಾಗಿತ್ತು.

ಐದನೇ ಬಾರಿಗೆ ಪೆರಾಜೆ, ಚೆಂಬು, ಕರಿಕೆ ವ್ಯಾಪ್ತಿ ಸೇರಿದಂತೆ ಮಕ್ಕಂದೂರು ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮಗಳಲ್ಲಿ ಏಕಕಾಲಕ್ಕೆ ಭೂಮಿ ಕಂಪಿಸಿದೆ. ಅಂದು ನಡುರಾತ್ರಿ ಕಳೆದು ೧ ಗಂಟೆ ೧೫ ನಿಮಿಷಕ್ಕೆ ೧.೮ ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಕಂಪಿಸಿ ಬಳಿಕ ಬೆಳಿಗ್ಗೆ ೧೦ ಗಂಟೆಗೆ ೨.೧ ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಮಿ ನಡುಗಿದೆ. ಪೆರಾಜೆ-ಕರಿಕೆಯಲ್ಲಿ ತಾ. ೩ ರಂದು ಮತ್ತೊಮ್ಮೆ ಆರನೇ ಬಾರಿಗೆ ಭೂಕಂಪನವಾಯಿತು.

ಭೂಕಂಪನ ಮಾಪನ ಕೇಂದ್ರ

ಜಿಲ್ಲೆಯಲ್ಲಿ ಸರಣಿ ಭೂಕಂಪನದ ಹಿನ್ನೆಲೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಿ ಚೆಂಬು ಗ್ರಾಮದಲ್ಲಿ ಭೂಕಂಪನ ಮಾಪನ ಉಪಕೇಂದ್ರ ಸ್ಥಾಪಿಸಿತು.

ಕಾಲಕಾಲಕ್ಕೆ ಸವಿಸ್ತಾರವಾಗಿ ಭೂಕಂಪನದ ಮಾಹಿತಿ ತಿಳಿಯುವ ನಿಟ್ಟಿನಲ್ಲಿ ಯಂತ್ರೋಪಕರಣಗಳಾದ ಬ್ರಾಡ್‌ಬ್ಯಾಂಡ್ ಸೆಸ್ಮೋಮೀಟರ್, ಸ್ಟಾçಂಗ್

(ಮೊದಲ ಪುಟದಿಂದ) ಮೋಷನ್ ಆ್ಯಕ್ಸಲೆರೊಗ್ರಾö್ಯಫ್ ಅಳವಡಿಸಿ ಮೇಲ್ವಿಚಾರಣೆ ಮಾಡಲು ವಿಜ್ಞಾನಿಗಳು ಮುಂದಾದರು. ಇಬ್ಬರು ವಿಜ್ಞಾನಿಗಳಾದ ಡಾ. ರಮೇಶ್ ಹಾಗೂ ಡಾ. ಜಗದೀಶ್ ಎಂಬವರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ, ಇದುವರೆಗೂ ಭೂಕಂಪನದ ಹಿಂದಿನ ನಿಖರ ಕಾರಣ ತಿಳಿಯುವ ಒಂದೇ ಒಂದು ಪ್ರಯತ್ನ ನಡೆದಿಲ್ಲ.

ವಿಜ್ಞಾನಿಗಳ ನಿರಾಸಕ್ತಿ

೨೦೧೮ರಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಈ ಘಟನೆಗಳಿಗೆ ಪರಿಸರ ಮೇಲೆ ಮಾನವನ ಹಸ್ತಕ್ಷೇಪ ಹಾಗೂ ವಿಪರೀತ ಮಳೆ ಎಂದು ವಿಜ್ಞಾನಿಗಳು ಸವಿಸ್ತಾರ ವರದಿ ನೀಡಿದ್ದರು.

ಈ ಬಾರಿ ಸರಣಿ ಭೂಕಂಪನಗಳಿಗೆ ಕಾರಣವೇನಿರಬಹುದು ಎಂದು ತಿಳಿಯುವ ನಿಟ್ಟಿನ ಪ್ರಯತ್ನಗಳು ನಡೆಯುತ್ತಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ವಿಜ್ಞಾನಿಗಳು ಜಿಲ್ಲೆಗೆ ಬಂದು ಹೋದರೂ ಯಾಕಾಗಿ ಅಧ್ಯಯನ ಆರಂಭಿಸಿಲ್ಲ ಎಂಬ ಅಸಮಾಧಾನವೂ ಇದೆ. ಜೊತೆಗೆ ಜಿಲ್ಲಾಡಳಿತ ಕೂಡ ನಿರ್ಲಕ್ಷö್ಯ ತೋರುತ್ತಿದೆಯೇ ಎಂಬ ಅನುಮಾನವೂ ಜನರನ್ನು ಕಾಡುತ್ತಿದೆ.

ಜಿಲ್ಲೆಗೆ ಬಂದಿದ್ದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಒಬ್ಬರನ್ನು ಈ ಬಗ್ಗೆ ‘ಶಕ್ತಿ’ ವಿಚಾರಣೆ ನಡೆಸಿದಾಗ ಇನ್ನೂ ಯಾವುದೇ ಅಧ್ಯಯನ ನಡೆದಿಲ್ಲ ಎಂದು ಹೇಳಿದರು. ಯಾಕಾಗಿ ತಡ ಎಂದು ಕೇಳಿದಾಗ ಅದಕ್ಕೆ ಉತ್ತರವೇ ನೀಡಿಲ್ಲ. ವಿಜ್ಞಾನಿಗಳು ನಿರಾಸಕ್ತಿಯೊಂದಿಗೆ ಬೇಜವಾಬ್ದಾರಿ ಯನ್ನು ತೋರುತ್ತಿದ್ದಾರ? ಎಂಬ ಪ್ರಶ್ನೆ ವಿಜ್ಞಾನಿಯ ಉತ್ತರದಿಂದ ಎದ್ದಿದೆ.

ಜಿಲ್ಲಾಡಳಿತ ವಿಫಲ

ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಕಾಡುತ್ತಿರುವ ನಡುವೆಯೇ ಭೂಕಂಪನ ಆತಂಕದ ಅಲೆಯನ್ನು ಸೃಷ್ಟಿ ಮಾಡಿದೆ. ವಿಪತ್ತನ್ನು ಯಾರು ತಡೆಯಲು ಆಗುವುದಿಲ್ಲ. ಆದರೆ, ಕಾರಣ ತಿಳಿದರೆ ಆಪತ್ತಿನಿಂದ ಪಾರಾಗಲು ಮಾರ್ಗೋಪಾಯ ಕಂಡುಕೊಳ್ಳಬಹುದಾಗಿದೆ. ಪ್ರಾಕೃತಿಕ ವಿಕೋಪ ತಡೆಗೆ ಅಧಿಕಾರಿಯೊಬ್ಬರನ್ನು ಜಿಲ್ಲಾಡಳಿತ ನಿಯೋಜಿಸಿದೆ. ಅವರು ಕೂಡ ಈ ಬಗ್ಗೆ ಯಾವುದೇ ರೀತಿಯಲ್ಲಿ ಆಸಕ್ತಿ ತೋರುತ್ತಿಲ್ಲ.

ವಿಜ್ಞಾನಿಗಳು ನಿರಾಸಕ್ತಿ ತೋರಿದರೂ ಕೊಡಗು ಜಿಲ್ಲಾಡಳಿತ ಕಾಳಜಿ ವಹಿಸಿ ಒತ್ತಡ ಹಾಕಿ ಭೂಕಂಪನದ ಹಿಂದಿನ ಕಾರಣ ಅರಿಯಬೇಕಾಗಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.