ಮಡಿಕೇರಿ, ಜು. ೪: ಕೊಡಗು ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು, ವರುಣನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ರಸ್ತೆಯ ಮೇಲೆ ನೀರು ನಿಂತು ಅವಾಂತರ ಸೃಷ್ಟಿ ಆಗಿದ್ದರೆ, ಭೂಕುಸಿತ, ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದು ನಷ್ಟ ಸಂಭವಿಸಿದೆ.
ಜಿಲ್ಲೆಯ ೫ ತಾಲೂಕುಗಳಲ್ಲಿಯೂ ಮಳೆ ಬಿರುಸು ಪಡೆದುಕೊಂಡಿದೆ. ಭಾರೀ ಮಳೆಯ ಪರಿಣಾಮ ಮರ, ವಿದ್ಯುತ್ ಕಂಬ ಧರಶಾಯಿ ಯಾಗುತ್ತಿದೆ. ಇದರಿಂದ ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು, ಜೊತೆಗೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದಂತಾಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಕಳೆದೆರಡು ದಿನಗಳಿಂದ ತುಂಬಿ ಹರಿಯುತ್ತಿದೆ. ಸೋಮವಾರ ಕೂಡ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತ್ತು. ಭಾಗಮಂಡಲದ ಕೇಶಮುಂಡನ ಸೇರಿದಂತೆ ಸುತ್ತಮತ್ತಲಿನ ಪ್ರದೇಶ ಜಲಾವೃತಗೊಂಡಿದೆ. ಭಗಂಡೇಶ್ವರ ದೇವಾಲಯದವರೆಗೆ ನೀರು ಏರಿಕೆ ಯಾಗಿದೆ. ಧಾರಾಕಾರ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕುಂಟಾಯಿತು. ತಾಳತ್ತಮನೆ ಕಡಿತಗೊಂಡಿದ್ದು, ಜೊತೆಗೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದಂತಾಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಕಳೆದೆರಡು ದಿನಗಳಿಂದ ತುಂಬಿ ಹರಿಯುತ್ತಿದೆ. ಸೋಮವಾರ ಕೂಡ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತ್ತು. ಭಾಗಮಂಡಲದ ಕೇಶಮುಂಡನ ಸೇರಿದಂತೆ ಸುತ್ತಮತ್ತಲಿನ ಪ್ರದೇಶ ಜಲಾವೃತಗೊಂಡಿದೆ. ಭಗಂಡೇಶ್ವರ ದೇವಾಲಯದವರೆಗೆ ನೀರು ಏರಿಕೆ ಯಾಗಿದೆ. ಧಾರಾಕಾರ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕುಂಟಾಯಿತು. ತಾಳತ್ತಮನೆ ಕಡಿತಗೊಂಡಿದ್ದು, ಜೊತೆಗೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದಂತಾಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಕಳೆದೆರಡು ದಿನಗಳಿಂದ ತುಂಬಿ ಹರಿಯುತ್ತಿದೆ. ಸೋಮವಾರ ಕೂಡ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತ್ತು. ಭಾಗಮಂಡಲದ ಕೇಶಮುಂಡನ ಸೇರಿದಂತೆ ಸುತ್ತಮತ್ತಲಿನ ಪ್ರದೇಶ ಜಲಾವೃತಗೊಂಡಿದೆ. ಭಗಂಡೇಶ್ವರ ದೇವಾಲಯದವರೆಗೆ ನೀರು ಏರಿಕೆ ಯಾಗಿದೆ. ಧಾರಾಕಾರ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕುಂಟಾಯಿತು. ತಾಳತ್ತಮನೆ (ಮೊದಲ ಪುಟದಿಂದ)
ಭಾಗಮAಡಲ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರೆದಿದ್ದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲ ನಾಪೋಕ್ಲು ನಡುವಿನ ಸಂಚಾರ ಸ್ಥಗಿತಗೊಂಡಿದೆ. ಭಾನುವಾರ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿದ್ದು ಸಂಜೆ ವೇಳೆ ಮತ್ತೆ ಬಿರುಸುಗೊಂಡಿತ್ತು. ಸೋಮವಾರ ಸತತವಾಗಿ ಸುರಿದ ಮಳೆಯಿಂದ ಮಡಿಕೇರಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ನಾಪೋಕ್ಲು ಭಾಗಮಂಡಲ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಜನರಿಗೆ ಸಂಚಾರಕ್ಕಾಗಿ ರ್ಯಾಫ್ಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಮಡಿಕೇರಿ ರಸ್ತೆಯಲ್ಲಿ ಯಾಂತ್ರಿಕ ಬೋಟು ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮಾಡಲಾಗಿದ್ದು ಮಳೆ ನೀರು ಹರಿವಿನ ಪ್ರಮಾಣ ಹೆಚ್ಚಾದಲ್ಲಿ ಬೋಟಿನ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ .ಸೋಮವಾರ ಸುರಿದ ಧಾರಾಕಾರ ಮಳೆಯಿಂದ ಸ್ಥಳೀಯ ಶಾಲಾ ಕಾಲೇಜುಗಳಿಗೆ ಮಧ್ಯಾಹ್ನದ ವೇಳೆಗೆ ರಜೆ ಘೋಷಿಸಲಾಯಿತು. ಭಾಗಮಂಡಲಕ್ಕೆ ಭಾನುವಾರ ರಾತ್ರಿ ೫.೬ ಇಂಚು ಮಳೆ ದಾಖಲಾಗಿದ್ದರೆ ತಲಕಾವೇರಿಯಲ್ಲಿ ಎಂಟು ಇಂಚು ಮಳೆ ದಾಖಲಾಗಿದೆ. ಮಳೆ ಹೆಚ್ಚುತ್ತಿರುವುದರಿಂದ ಭಾಗಮಂಡಲದಲ್ಲಿ ಸ್ಥಳೀಯ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುತ್ತಿದ್ದುದು ಕಂಡು ಬಂದಿತು.ಪೊನ್ನAಪೇಟೆ : ಮಳೆಗೆ ಕಾನೂರು ಮುಖ್ಯ ರಸ್ತೆಯಲ್ಲಿ ತೂಚಮಕೇರಿ ಸಮೀಪ ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ವಿದ್ಯುತ್ ಕಂಬ ಧರೆಗುರುಳಿದೆ. ಅದೇ ಸಮಯದಲ್ಲಿ ಚಲಿಸುತ್ತಿದ್ದ ಜೀವನ್ ಎಂಬವರ ಜೀಪಿನ ಮೇಲೆ ವಿದ್ಯುತ್ ತಂತಿಗಳು ಬಿದ್ದಿವೆ. ಅದೃಷ್ಟವಶಾತ್ ಕಂಬ ಬೀಳುವ ಮೊದಲೇ ವಿದ್ಯುತ್ ಸಂಚಾರ ಕಡಿತಗೊಂಡಿದ್ದರಿAದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.ಎನ್ಡಿಆರ್ಎಫ್ ತಂಡ ಇಂದು ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳೂರು ರಸ್ತೆ ಸಮೀಪದ ತಾಳತ್ ಮನೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿತು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್, ಇನ್ಸ್ಪೆಕ್ಟರ್ ರಾಮ್ ಭಜ್, ಸಬ್ಇನ್ಸ್ಪೆಕ್ಟರ್ ಶಾಂತಿ ಲಾಲ್ ಜಾಟಿಯ ರಕ್ಷಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.ಎನ್ಡಿಆರ್ಎಫ್ ತಂಡ ಇಂದು ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳೂರು ರಸ್ತೆ ಸಮೀಪದ ತಾಳತ್ ಮನೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿತು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್, ಇನ್ಸ್ಪೆಕ್ಟರ್ ರಾಮ್ ಭಜ್, ಸಬ್ಇನ್ಸ್ಪೆಕ್ಟರ್ ಶಾಂತಿ ಲಾಲ್ ಜಾಟಿಯ ರಕ್ಷಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.ಸಿದ್ದಾಪುರ : ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳಿಗೆ ಆತಂಕ ಮನೆ ಮಾಡಿದೆ. ೨೦೧೮-೧೯ ರಲ್ಲಿ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು-ಗುಹ್ಯ ಗ್ರಾಮದಲ್ಲಿ ನೂರಾರು ಮನೆಗಳು ನೆಲಸಮಗೊಂಡಿತ್ತು. ಅಲ್ಲದೇ ನೂರಾರು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು. ಇದೀಗ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕರಡಿಗೋಡು ಭಾಗದಲ್ಲಿ ಕಾವೇರಿ ನೀರು ರಭಸದಿಂದ ಹರಿಯುತ್ತಿದ್ದು, ನೀರಿನ ಪ್ರಮಾಣ ಏರುತ್ತಿದೆ. ಪ್ರವಾಹ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರದಂದು ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಕೃಷ್ಣನ್ ಕುಟ್ಟಿ, ಸ್ಥಳೀಯ ಗ್ರಾ.ಪಂ. ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಮಳೆ ಮುಗಿಯುವವರೆಗೆ ನದಿತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಂದಾಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ನದಿತೀರದ ನಿವಾಸಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ.ಯೋಗಾನಂದ ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್ ನೇತೃತ್ವದಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಆಗಿಂದಾಗ್ಗೆ ಪ್ರವಾಹ ಪೀಡಿತ ಪ್ರದೇಶ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಕೆಲ ನಿವಾಸಿಗಳು ಪ್ರವಾಹಕ್ಕೆ ಹೆದರಿ ತಮ್ಮ ಮನೆಯ ಸಾಮಗ್ರಿಗಳನ್ನು ಕಟ್ಟಿ ಇಟ್ಟಿದ್ದಾರೆ. ಗೋಣಿಕೊಪ್ಪ ವರದಿ : ಮೈತಾಡಿ - ದೇವಣಗೇರಿ ರಸ್ತೆಯಲ್ಲಿರುವ ಮೋರಿ ಮಳೆಗೆ ಕುಸಿಯುತ್ತಿದ್ದು, ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಟಿಸಿದೆ.
ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೋರಿಗೆ ಹಾಕಿರುವ ತಡೆಗೋಡೆ ಕುಸಿದಿರುವುದರಿಂದ ದೊಡ್ಡ ಗುಂಡಿ ಬಿದ್ದಿದೆ. ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಸ್ತೆಯ ಒಳಭಾಗ ಮತ್ತು ಒಂದು ಭಾಗ ಸಂಪೂರ್ಣ ಕುಸಿದಿರುವುದು ವಾಹನ ಸಂಚಾರಕ್ಕೆ ತೊಡಕಾಗಿದೆ. ರಸ್ತೆಯು ದೇವಣಗೇರಿ, ಹಾಲುಗುಂದ, ಚೆಂಬೆಬೆಳ್ಳೂರು, ಅಮ್ಮತ್ತಿ, ಮೂರ್ನಾಡು ಗ್ರಾಮಗಳಿಗೂ ಕೂಡ ತೆರಳಬಹುದಾಗಿರುವುದರಿಂದ ನಿತ್ಯ ೪೦೦ ಕ್ಕೂ ಹೆಚ್ಚು ವಾಹನ ಸಂಚಾರವಿರುತ್ತದೆ. ನಿತ್ಯ ತೆರಳುವ ರೈತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸಂಪರ್ಕ ಕಳೆದುಕೊಳ್ಳುವ ಆತಂಕ ವ್ಯಕ್ತವಾಗಿದೆ.
ಈ ಬಗ್ಗೆ ಕದನೂರು ಗ್ರಾಮ ಪಂಚಾಯಿತಿ ಸದಸ್ಯ ಮುಂಡಚಾಡೀರ ಭರತ್ ಪ್ರತಿಕ್ರಿಯಿಸಿದ್ದು, ಎರಡು ವರ್ಷಗಳಿಂದ ಸಣ್ಣ ಮಟ್ಟಿಗೆ ಕುಸಿಯುವ ಹಂತದಲ್ಲಿ ರಸ್ತೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಸರಿಪಡಿಸಲು ಅನುದಾನವಿಲ್ಲ. ವೀರಾಜಪೇಟೆ ತಾಲೂಕು ಪಂಚಾಯಿತಿ ಪಂಚಾಯತ್ರಾಜ್ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈಗ ಸಂಪರ್ಕ ಕಳೆದುಕೊಳ್ಳುವ ಆತಂಕ ಮೂಡಿಸಿದೆ. ತಾತ್ಕಾಲಿಕ ಪರಿಹಾರಕ್ಕೆ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಗ್ರಾಮಸ್ಥರೊಂದಿಗೆ ಮಾಡಲಾಗುವುದು ಎಂದಿದ್ದಾರೆ. ಬಿರುಕುಗೊಂಡ ಮುಖ್ಯ ನಾಲೆ
ಕೂಡಿಗೆ : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದ ಮಾತ್ತಹಳ್ಳ ಎಂಬಲ್ಲಿ ಹಾರಂಗಿ ನಾಲೆಯ ಮುಖ್ಯ ಮೇಲ್ಕಾಲುವೆ ಹೋಗಿದ್ದು , ಈ ಕಾಲುವೆಯು ಕೆಲ ದಿನಗಳಿಂದ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ನಾಲೆಯಲ್ಲಿ ಸಣ್ಣ ಪ್ರಮಾಣದ ನೀರು ಹರಿಯುತ್ತಿದೆ. ನೀರು ಸಂಪೂರ್ಣವಾಗಿ ಬಿರುಕಿನ ಮೂಲಕ ಕೆಳಭಾಗಕ್ಕೆ ಬಿದ್ದು ಹಳ್ಳ ಸೇರುತ್ತಿದೆ. ಮುಂದಿನ ದಿನಗಳಲ್ಲಿ ಆಗುವ ಅನಾಹುತ ತಪ್ಪಿಸಲು ಈ ವ್ಯಾಪ್ತಿಯ ರೈತರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಹಾರಂಗಿಯಲ್ಲಿ ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳದಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ರಿAದ ಮಾಹಿತಿಯನ್ನು ಪಡೆದು ಶೀಘ್ರವಾಗಿ ಬಿರುಕು ಬಿಟ್ಟಿರುವ ಮುಖ್ಯ ನಾಲೆಯ ದುರಸ್ತಿಗೆ ಸೂಚನೆ ನೀಡಿದರು.
ಮೇಲ್ ಕಾಲುವೆ ಕಾಮಗಾರಿ ಹಾರಂಗಿ ಅಣೆಕಟ್ಟೆಯ ನಾಲೆಯ ನಿರ್ಮಾಣದ ಸಂದರ್ಭದಲ್ಲಿ ನಡೆದು ೩೦ ವರ್ಷಗಳೇ ಕಳೆದಿವೆ. ಮೇಲ್ ಕಾಲುವೆಯು ಹಳ್ಳದ ತಿರುವಿನಲ್ಲಿ ಇರುವುದರಿಂದ ನೀರಿನ ಹರಿಯುವಿಕೆಯ ರಭಸವು ಕಡಿಮೆ ಇರುವುದರಿಂದ ಮತ್ತು ಮೂರು ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಅಣೆಕಟ್ಟೆಯಿಂದ ನಾಲೆಗೆ ಹೆಚ್ಚು ನೀರನ್ನು ಹರಿಸಲಾಗುತ್ತಿದೆ. ಈ ಎಲ್ಲಾ ಸಾಧಕ ಬಾಧಕಗಳನ್ನು ನೋಡಿಕೊಂಡು ಸಂಬAಧಿಸಿದ ಇಂಜಿನಿಯರ್ ವಿಭಾಗದವರು ನಾಲೆ ನೀರನ್ನು ಹರಿಸುತ್ತಿದ್ದರು. ಇದೀಗ ಮುಖ್ಯ ನಾಲೆಯಲ್ಲಿ ಸೋರಿಕೆಯ ನೀರು ಸಹ ನಾಲೆ ಒಂದು ಭಾಗದಲ್ಲಿ ಸುರಿಯುತ್ತಿರುವ ಮಾಹಿತಿಯನ್ನು ರೈತರು ನೀಡಿದ ಮೇರೆಗೆ ಶಾಸಕರು ಶೀಘ್ರವಾಗಿ ದುರಸ್ತಿಗೆ ೨ ಲಕ್ಷ ರೂ ಅನುದಾನ ನೀಡಿದ್ದಾರೆ. ಅದರ ಬಳಕೆ ಮಾಡಿಕೊಂಡು ದುರಸ್ತಿ ಕಾರ್ಯವನ್ನು ಕೈಗೊಂಡು ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು. ಶಾಸಕರ ಸೂಚನೆಯಂತೆ ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಮಾಡಲು ಮುಂದಾಗಿದ್ದಾರೆ.ಕರಿಕೆ : ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕರಿಕೆ ಗ್ರಾಮದಲ್ಲಿ ಸೆಸ್ಕ್ ವತಿಯಿಂದ ಗುತ್ತಿಗೆದಾರ ಸಂಸ್ಥೆಯಾದ ವಿಶ್ವ ಎಲೆಕ್ಟಿçಕಲ್ಸ್ ಸುಳ್ಯ ಇವರು ಕಂಬ ಅಳವಡಿಸಿ ವಿದ್ಯುತ್ ಸಂಪರ್ಕ ಸರಿಪಡಿಸಿದರು.ಸಿದ್ದಾಪುರ : ನೆಲ್ಯಹುದಿಕೇರಿ ಗ್ರಾಮದ ಬರಡಿ ಗ್ರಾಮದಲ್ಲಿ ಗಾಳಿ ಮಳೆಗೆ ಸಿಲುಕಿ ಮರ ಜಯ ವೆಂಕಟೇಶ್ ಎಂಬವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಹಿಂಭಾಗದ ಶೌಚಾಲಯಕ್ಕೆ ಹಾನಿಯಾಗಿರುತ್ತದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮಲೆಕ್ಕಿಗ ಸಚಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಕರಡಿಗೋಡು ಭಾಗದ ಚಿಕ್ಕನಲ್ಲಿ ಪೈಸಾರಿಗೆ ತೆರಳುವ ರಸ್ತೆಯು ಜಲಾವೃತಗೊಂಡಿರುತ್ತದೆ. ನೀರಿನ ಪ್ರಮಾಣ ಏರಿಕೆಯಾದಲ್ಲಿ ಕರಡಿಗೋಡು ಚಿಕ್ಕನಹಳ್ಳಿ ಸಂಪರ್ಕದ ಕಿರು ಸೇತುವೆ ಮುಳುಗಡೆಯಾಗುವ ಸಾಧ್ಯತೆ ಕಂಡು ಬಂದಿದೆ. ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಮಾರ್ಗದರ್ಶನದಲ್ಲಿ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮಲೆಕ್ಕಿಗ ಸಚಿನ್, ಕಂದಾಯ ಇಲಾಖೆ ಸಿಬ್ಬಂದಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.ಮಡಿಕೇರಿ: ಈಗಾಗಲೇ ಮುಂಗಾರು ಚುರುಕಾಗಿದ್ದು, ಅಪಾಯ ಸಂದರ್ಭಗಳನ್ನು ಎದುರಿಸಲು ಸೂಕ್ತ ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೂಚಿಸಿದರು. ಸೋಮವಾರ ಮಡಿಕೇರಿ ತಾಲೂಕಿನ ಚೆಂಬು ಮತ್ತು ಪೆರಾಜೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇದೇ ವೇಳೆ ಗ್ರಾ.ಪಂ. ಟಾಸ್ಕ್ ಫೋರ್ಸ್ ಸಭೆಯಲ್ಲಿಯೂ ಜಿ.ಪಂ. ಸಿ.ಇ.ಒ ಅವರು ಭಾಗವಹಿಸಿದರು. ಗ್ರಾ.ಪಂ. ವತಿಯಿಂದ ಮಳೆಹಾನಿ ಎದುರಿಸಲು ಕೈಗೊಂಡ ಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಕಾಳಜಿ ಕೇಂದ್ರದ ನಿರ್ವಹಣೆ, ಸಂತ್ರಸ್ತರಿಗೆ ಒದಗಿಸಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ. ಮಟ್ಟದಲ್ಲಿ ಸ್ವಯಂ ಸೇವಕರನ್ನು ಗುರುತಿಸುವಂತೆ ತಿಳಿಸಿದರು. ಅಪಾಯದ ಸಂದರ್ಭದಲ್ಲಿ ಸ್ವಯಂ ಸೇವಕರಿಂದ ಅಗತ್ಯ ಸಹಕಾರ ಪಡೆಯಲು ತಿಳಿಸಿದರು. ಬಳಿಕ ಮಳೆಯಿಂದ ಭೂಕುಸಿತವಾದಂತಹ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ.ಹಿ.ಪ್ರಾ.ಶಾಲೆ ಚೆಂಬುವಿನಲ್ಲಿ ಗುರುತಿಸಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ಸಂತ್ರಸ್ತರಿಗೆ ಅಗತ್ಯ ಸ್ನಾನಗೃಹ ನಿರ್ಮಾಣ ಹಾಗೂ ಶೌಚಾಲಯ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಚೆಂಬು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ಭೂಕಂಪ ಸಂಬAಧ ಮಾಹಿತಿ ಪಡೆದರು. ಯಾವುದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ಜಿ.ಪಂ. ಸಿ.ಇ.ಒ ಅವರು ಭರವಸೆ ನೀಡಿದರು. ಭೂಮಿ ಕಂಪಿಸುತ್ತಿರುವ ಬಗ್ಗೆ ಶೀಘ್ರವೇ ವಿಶೇಷ ಗ್ರಾಮಸಭೆ ಮಾಡಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವಂತೆ ಸಲಹೆ ನೀಡಿದರು. ಬಳಿಕ ಪೆರಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗುರುತಿಸಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಆಗಮಿಸಿದ ವೇಳೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿ ಜೊತೆಗೆ ಚರ್ಚಿಸಲಾಯಿತು. ಇದೇ ವೇಳೆ ವಿವಿಧ ಯೋಜನೆಯಡಿ ನಿರ್ಮಿಸಿರುವ ಕಾಮಗಾರಿಗಳನ್ನು ಜಿ.ಪಂ. ಸಿ.ಇ.ಓ ಅವರು ಪರಿಶೀಲನೆ ನಡೆಸಿದರು.
ಚೆಂಬು ಗ್ರಾ.ಪಂ. ಅಧ್ಯಕೆÀ್ಷ ಕುಸುಮಾ ಎ., ಉಪಾಧ್ಯಕ್ಷೆ ಶಶಿಕಲಾ ಮತ್ತು ಆಡಳಿತ ಮಂಡಳಿ ಸದಸ್ಯರು, ಪೆರಾಜೆ ಗ್ರಾ.ಪಂ. ಅಧ್ಯಕ್ಷೆÀ್ಷ ಚಂದ್ರಕಲಾ ಬಿ.ಬಿ, ಉಪಾಧ್ಯಕ್ಷೆÀ ಜಯಲಕ್ಷ್ಮೀ ಧರಣೀಧರ್ ಮತ್ತು ಆಡಳಿತ ಮಂಡಳಿ ಸದಸ್ಯರು, ಮಡಿಕೇರಿ ತಾ.ಪಂ. ಇಒ ಶೇಖರ್, ಕಂದಾಯ ನಿರೀಕ್ಷಕ ವೆಂಕಟೇಶ್, ಪಿಡಿಒ ಮಹದೇವ ಪ್ರಭು, ಕಾರ್ಯದರ್ಶಿ ಕುಮಾರ್ ಸೇರಿದಂತೆ ಇತರರು ಇದ್ದರು.