ಮಡಿಕೇರಿ, ಜು. ೫: ನೆಹರೂ ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಪೆರಾತ ಯುವಕ ಸಂಘ, ಅರ್ವತೋಕ್ಲು ಇದರ ಸಹಯೋಗದಲ್ಲಿ, ಶ್ಯಾಂ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಪ್ರಯುಕ್ತ ತಾ. ೬ ರಂದು (ಇಂದು) ಉಚಿತ ರಕ್ತದಾನ ಶಿಬಿರ, ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ತಿಳಿಸಿದ್ದಾರೆ.