ಪೊನ್ನಂಪೇಟೆ, ಜು. ೩: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆಗಳು ನಿಗದಿಯಾಗಿದ್ದು, ೧ನೇ ವಾರ್ಡ್ ಸಭೆ ತಾ. ೭ ರಂದು ಸಂಜೆ ೪ ಗಂಟೆಗೆ ಎಂ.ಜಿ. ನಗರದ ಸಮುದಾಯ ಭವನದಲ್ಲಿ ಆಲೀರ ಎಂ. ರಶೀದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ೨ನೇ ವಾರ್ಡ್ ಸಭೆ ತಾ. ೯ ರಂದು ಸಂಜೆ ೩ ಗಂಟೆಗೆ ನೆಹರು ಕಾಲೋನಿ ಅಂಬೇಡ್ಕರ್ ಭವನದಲ್ಲಿ ಎಂ.ಕೆ. ಮಧುಕುಮಾರ್ ಅಧ್ಯಕ್ಷತೆಯಲ್ಲಿ, ೩ನೇ ವಾರ್ಡ್ನ ಸಭೆ ತಾ. ೮ ರಂದು ಬೆಳಿಗ್ಗೆ ೧೧ ಗಂಟೆಗೆ ಜೋಡುಬೀಟಿಯ ಕೊಡವ ಕೂಟ ಸಭಾಂಗಣದಲ್ಲಿ ಕೋಳೇರ ಭಾರತಿ ಅಧ್ಯಕ್ಷತೆಯಲ್ಲಿ, ೪ನೇ ವಾರ್ಡ್ ಸಭೆ ತಾ. ೬ ರಂದು ಮಧ್ಯಾಹ್ನ ೩ ಗಂಟೆಗೆ ಶಿವಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ರವಿ ಹೆಚ್.ಎನ್. ಅಧ್ಯಕ್ಷತೆಯಲ್ಲಿ, ೫ನೇ ವಾರ್ಡ್ ಸಭೆ ತಾ. ೮ ರಂದು ಸಂಜೆ ೪ ಗಂಟೆಗೆ ಕೊಡವ ಸಮಾಜ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮಂಜುಳಾ ಮಣಿಕಂಠ ಅಧ್ಯಕ್ಷತೆಯಲ್ಲಿ, ೬ನೇ ವಾರ್ಡ್ ಸಭೆ ತಾ. ೫ ರಂದು ಸಂಜೆ ೪.೩೦ಕ್ಕೆ ಕೃಷ್ಣ ಕಾಲೋನಿಯ ರಾಮ ಮಂದಿರದಲ್ಲಿ ಅಡ್ಡಂಡ ನಿಲನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.