ಶನಿವಾರಸಂತೆ, ಜು. ೩: ಸಮೀಪದ ಕೊಡ್ಲಿಪೇಟೆಯ ಕಲ್ಲುಮಠದ ಎಸ್.ಕೆ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಚುನಾವಣೆ ಮಠಾಧೀಶ ಮಹಾಂತ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಿತು.

ಶಾಲೆಯ ೫೧ ವಿದ್ಯಾರ್ಥಿಗಳು ವಿವಿಧ ಸ್ಥಾನಗಳಿಗೆ ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದರು. ಇವರಿಗೆ ಚುನಾವಣೆ ಚಿಹ್ನೆ ನೀಡಲಾಗಿತ್ತು. ಬ್ಯಾಲೆಟ್ ಪೇಪರ್ ಮೂಲಕ ಸಂವಿಧಾನಾತ್ಮಕವಾಗಿ ಚುನಾವಣೆ ನಡೆಸಲಾಯಿತು. ೫ ರಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಶಿಕ್ಷಕರು ಚುನಾವಣಾಧಿಕಾರಿಗಳಾಗಿದ್ದರು.

ಮತ ಎಣಿಕೆ ನಡೆದು ಶಾಲಾ ಅಧ್ಯಕ್ಷ ಜೇಸು, ಉಪಾಧ್ಯಕ್ಷ ಮೋಕ್ಷಿತ್ ಗೌಡ, ಕಾರ್ಯದರ್ಶಿ ಎ.ವೈ. ಸಾನಿಕಾ, ಹಣಕಾಸು ಮಂತ್ರಿ ಪ್ರಜ್ಞನ್, ಕೃಷಿ ಮಂತ್ರಿ ಖಲಂದರ್, ಕ್ರೀಡಾ ಮಂತ್ರಿ ಮಿಥುನ್ ರಾಜ್, ಉಪ ಕ್ರೀಡಾ ಮಂತ್ರಿ ಎಸ್.ಎಚ್. ಶೋಭಿತ್, ಆರೋಗ್ಯ ಮಂತ್ರಿ ದೀಕ್ಷಿತ್, ಉಪ ಆರೋಗ್ಯ ಮಂತ್ರಿ ಜಾನು, ಆಹಾರ ಮಂತ್ರಿ ಕೆ.ವಿ ಸಂಗೀತಾ, ಉಪ ಆಹಾರ ಮಂತ್ರಿ ಎ.ಎಸ್. ಶ್ರೇಯಾ, ಸಾಂಸ್ಕೃತಿಕ ಮಂತ್ರಿ ಸವಿತಾ, ಗ್ರಂಥಾಲಯ ಮಂತ್ರಿ ಕೆ.ಬಿ. ಹರ್ಷ ಆಯ್ಕೆಯಾಗಿದ್ದಾರೆ.