ಶನಿವಾರಸಂತೆ, ಜು. ೪: ಸಮೀಪದ ಕೊಡ್ಲಿಪೇಟೆಯ ಉಪ ಪೊಲೀಸ್ ಠಾಣೆಯಲ್ಲಿ ಹೋಬಳಿ ವ್ಯಾಪ್ತಿಯ ಶ್ರೀ ಬಾಲ ತ್ರಿಪುರ ಸುಂದರಿ ದೇವಾಲಯ ಆಡಳಿತ ಮಂಡಳಿಯಿAದ ವಜಾಗೊಂಡ ಸಮಿತಿ ಹಳೆ ಸದಸ್ಯರು, ಭಕ್ತರು ಹಾಗೂ ಗ್ರಾಮಸ್ಥರು ನೂತನ ಸಮಿತಿಯ ದುರ್ನಡತೆ ಮತ್ತು ದೇವಾಲಯದ ಅವ್ಯವಹಾರದ ಬಗ್ಗೆ ಬರೆದ ಅರ್ಜಿಯ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ದೇವಾಲಯ ನೋಂದಣಿಯಾಗದಿರುವ ಬಗ್ಗೆ ಆಡಳಿತ ಮಂಡಳಿ ಸದಸ್ಯತ್ವದ ಬಗ್ಗೆ ಒಂದೇ ಕುಟುಂಬದ ಸಂಬAಧಿಕರೇ ಸದಸ್ಯರಾಗಿರುವ ಬಗ್ಗೆ, ಹಳೇ ಮತ್ತು ಹೊಸ ಸಮಿತಿ ಸದಸ್ಯರ ನೇಮಕದ ಬಗ್ಗೆ, ಖರ್ಚು - ವೆಚ್ಚದ ಬಗ್ಗೆ ಹಾಗೂ ಹಣ ದುರುಪಯೋಗದ ಬಗ್ಗೆ ಸದಸ್ಯರ ಪರ - ವಿರೋಧದ ಸುದೀರ್ಘ ಚರ್ಚೆ ನಡೆಯಿತು.
ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಅವರು ಮಾತನಾಡಿ, ದೇವಾಲಯ ಸಮಿತಿಯಲ್ಲಿ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸದಸ್ಯತ್ವ ನೀಡಬೇಕು. ಸಂಬAಧಿಸಿದ ಗ್ರಾಮಗಳ ಎಲ್ಲಾ ಸಮುದಾಯದವರಿಗೂ ಸದಸ್ಯತ್ವದ ಅವಕಾಶ ಕಲ್ಪಿಸಬೇಕು.
ಓರ್ವ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಆಡಳಿತ ಮಂಡಳಿಯ ಸದಸ್ಯತ್ವ ನೀಡಬೇಕು. ದಕ್ಷ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ಸುತ್ತಮುತ್ತಲಿನ ಗ್ರಾಮಗಳ ಪ್ರತಿನಿಧಿಗಳನ್ನು ಕರೆದು ದೇವಾಲಯ ಸಮಿತಿ ರಚಿಸುವ, ನೇಮಕವಾದ ಸದಸ್ಯರಿಗೆ ೨-೩ ವರ್ಷದ ಸದಸ್ಯತ್ವದ ಅವಧಿ ನೀಡುವ, ಮುಂದಿನ ೨೦ ದಿನಗಳಲ್ಲಿ ಎಲ್ಲಾ ಗ್ರಾಮದ ಎಲ್ಲಾ ಸಮುದಾಯದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಬಗ್ಗೆ ಲಿಖಿತ ಬರವಣಿಗೆ ಮಾಡಿ ತೀರ್ಮಾನಿಸುವ ಬಗ್ಗೆ ಗ್ರಾಮ ಮುಖಂಡರಿಗೆ ನೋಟೀಸ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಳೆಯ ಮತ್ತು ಹೊಸ ಸಮಿತಿಯ ಸದಸ್ಯರಾದ ಮದನ್ ಕುಮಾರ್, ಡಿ.ಆರ್. ಪುರುಷೋತ್ತಮ್, ಬಿ.ಬಿ. ಮಲ್ಲಪ್ಪ, ಎ.ಬಿ. ಯೋಗಪ್ಪ, ಎನ್.ವೈ. ಧರ್ಮಪ್ಪ, ಸುಂದರಮೂರ್ತಿ, ಬಿ.ಎಸ್. ವಸಂತಕುಮಾರ್, ಎಸ್. ಪ್ರಸನ್ನ, ಸಹದೇವ, ಸೋಮಶೇಖರ್, ಎ.ಎಸ್. ಚಂದ್ರಪ್ಪ, ರೇಣುಕಪ್ಪ, ಎನ್.ಎಂ. ಚಂದ್ರಶೇಖರ್, ಹರೀಶ್, ತಮ್ಮಣ್ಣಗೌಡ ಹಾಜರಿದ್ದರು.