ಮಡಿಕೇರಿ, ಜು. ೪ : ಓದುವ ಹವ್ಯಾಸ ಮಾತ್ರ ಒಬ್ಬ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ಪಟ್ಟಿದ್ದಾರೆ. ಮರಗೋಡು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ನೂತನ ಡಿಜಿಟಲ್ ಲೈಬ್ರರಿ, ಬಯಲು ಗ್ರಂಥಾಲಯ ಹಾಗೂ ಕಾವೇರಿ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಪ್ರತಿದಿನ ಪುಸ್ತಕ ಅಥವಾ ದಿನಪತ್ರಿಕೆಯನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರು ಬೆಳೆಸಿಕೊಂಡರೆ ತಮ್ಮ ಸಾಮಾನ್ಯ ಜ್ಞಾನವನ್ನು ವೃದ್ದಿಸಿಕೊಳ್ಳಬಹುದು. ಗ್ರಾಮದಲ್ಲಿ ನಿರ್ಮಿತವಾಗಿರುವ ಡಿಜಿಟಲ್ ಲೈಬ್ರರಿ, ಉದ್ಯಾನವನದಲ್ಲಿರುವ ಬಯಲು ಗ್ರಂಥಾಲಯ ಜ್ಞಾನ ದೇಗುಲದಂತೆ ಭಾಸವಾಗುತ್ತಿದೆ. ಪ್ರತಿಯೊಬ್ಬರು ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಬಳಿಕ ತಾತಪಂಡ ಐನ್ಮನೆಗೆ ತೆರಳುವ ಮಾರ್ಗದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರಂಜನ್, ಮುಂದಿನ ದಿನಗಳಲ್ಲಿ ಅಭಿವೃಧ್ದಿ ಕಾಮಗಾರಿಗಳಿಗೆ ಮತ್ತಷ್ಟು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.
ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸ್ಥಳೀಯ ವಿದ್ಯಾರ್ಥಿಗಳಾದ ಗ್ರೀಷ್ಮ, ಡಿಂಪತ್, ದೀಪಾ, ಮುತ್ತಣ್ಣ, ಚೈತನ್ಯ, ತನುಷ್, ಮಹ್ಮದ್ ಅಫ್ಸಲ್ , ಶಿಲ್ಪ, ದೀಪಕ್ ಎಂ.ಎA, ದಿವ್ಯ, ಮೀನಾಕ್ಷಿ, ಪ್ರೀತಿ, ದೀಪಕ್, ಪಯಸ್ವಿನಿ, ಶಾಹೀರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಹೊಸೋಕ್ಲು ಚಿಣ್ಣಪ್ಪ, ನಾಟಿ ವೈದ್ಯ ಪರಿಚನ ಲಕ್ಷ್ಮಣ್, ಗುತ್ತಿಗೆದಾರರಾದ ಕರುಣಾಕರ ರೈ, ರವೀಂದ್ರ.ಕೆ.ಯು, ಸಮಾಜ ಸೇವಕರಾದ ರಂಜಿತ್ ಮತ್ತು ರವೀಂದ್ರ ಪ್ರಸಾದ್.ಬಿ.ಎನ್, ಸಾರ್ವಜನಿಕ ವಲಯದಲ್ಲಿ ಸಾಧನೆ ಗೈದ ಶಶಿಕಲಾ, ರವಿ, ವೇತನ್, ಕವಿತಾ, ಕರ್ಣಯ್ಯನ ಈಶ್ವರ್, ವಸಂತಿ, ಭಾರತಿ, ಮದನ್ ಹಾಗೂ ತಿಮ್ಮಪ್ಪ ಇವರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ತಾ. ಪಂ ಸದಸ್ಯ ಅಪ್ರು ರವೀಂದ್ರ, ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗಿರ ಸತೀಶ್, ಹೊಸ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭುಶೇಖರ್, ಸದಸ್ಯ ಚಿದಂಬರA, ಮರಗೋಡು ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದರಘು, ಗ್ರಾ.ಪಂ ಉಪಾಧ್ಯಕ್ಷೆ ಚಿತ್ರಾ, ಸದಸ್ಯರುಗಳಾದ ನಂದಕುಮಾರ್, ಶರತ್, ನಾಗೇಶ್, ಲವಪ್ಪ, ಮೋಹನ್, ಕವಿತಾ, ಕುಸುಮ, ಭಾಗೀರತಿ. ಪಿಡಿಓ ಅಂಜನ್ಮೂರ್ತಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.