ಮಡಿಕೇರಿ, ಜು. ೪: ನಗರಸಭೆ ಪೌರಕಾರ್ಮಿಕರ ಸಮಸ್ಯೆಗಳ ಸಂಬAಧ ಸರಕಾರದ ಗಮನ ಸೆಳೆದು ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದರು.
ನಗರದ ನಗರಸಭೆ ಆವರಣದಲ್ಲಿ ಕೊಡಗು ಜಿಲ್ಲಾ ನಗರಸಭೆ, ಪುರಸಭೆ, ಪ.ಪಂ. ಪೌರಕಾರ್ಮಿಕರ ಮಹಾಸಭಾ, ಹೊರಗುತ್ತಿಗೆ ನೀರು ಸರಬರಾಜು ಹಾಗೂ ವಾಹನ ಚಾಲಕರ ಸಂಘದ ವತಿಯಿಂದ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಪೌರ ಕಾರ್ಮಿಕರ ಸಮಸ್ಯೆ ಆಲಿಸಿದರು.
ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಖಾಯಂ ಗೊಳಿಸ ಬೇಕು. ನೇರ ವೇತನಕ್ಕೆ ಒಳಪಡಿಸ ಬೇಕು ಹಾಗೂ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿದರು. ಈ ಸಂಬAಧ ವಿಧಾನಸಭಾ ಕಲಾಪದಲ್ಲಿ ಗಮನ ಸೆಳೆದು ಸಂಬAಧಪಟ್ಟ ಅಧಿಕಾರಿಗ ಳೊಂದಿಗೆ, ಸಚಿವರೊಂದಿಗೆ ಸಮನ್ವಯತೆ ಸಾಧಿಸಿ ಕ್ರಮಕ್ಕೆ ಮುಂದಾಗಲಾಗುವುದು. ವೇತನ ಹೆಚ್ಚಳ ಮಾಡಲಾಗುವುದು ಎಂದು ಶಾಸಕ ರಂಜನ್ ವಿಶ್ವಾಸ ವ್ಯಕ್ತಪಡಿಸಿ ದರು. ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಾಗ ಗುರುತಿಸ ಲಾಗಿದೆ. ಪ್ರಾಶಸ್ತö್ಯದಲ್ಲಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲಾಗುವುದು ಎಂದರು. ಶಾಸಕರ ಭರವಸೆಯ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ನಗರ ಸಭಾ ಸದಸ್ಯರುಗಳು, ಸಂಘಟನೆಯ ಜಿಲ್ಲಾಧ್ಯಕ್ಷ ಈರಪ್ಪ, ಜಿಲ್ಲಾ ಕಾರ್ಯದರ್ಶಿ ರಮೇಶ್, ಖಜಾಂಜಿ ಅಹಮ್ಮದ್ ಕಬೀರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪೌರಕಾರ್ಮಿಕರೊಂದಿಗೆ ಹುಟ್ಟುಹಬ್ಬ ಆಚರಣೆ: ಪೌರಕಾರ್ಮಿಕ ರೊಂದಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಕೇಕ್ ಕತ್ತರಿಸುವ ಮೂಲಕ ತಮ್ಮ ೬೬ನೇ ಹುಟ್ಟುಹಬ್ಬವನ್ನು ಆಚರಿಸಿದರು. ಪೌರಕಾರ್ಮಿಕರು ಹೂ ನೀಡಿ ಶಾಸಕರಿಗೆ ಶುಭಕೋರಿ ದರು. ಇದೇ ಸಂದರ್ಭ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಸೇರಿದಂತೆ ಸದಸ್ಯರು ಶಾಸಕರಿಗೆ ಶುಭಕೋರಿದರು.