ಸೋಮವಾರಪೇಟೆ, ಜು.೪: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೈನಿಕ ಸ್ಮರಣೆಯ ಅಮರ್ ಜವಾನ್ ಪ್ರತಿಮೆ ನಿರ್ಮಾಣಕ್ಕೆ ವಿವಿಧ ಮಠಾಧೀಶರುಗಳೊಂದಿಗೆ ಶಾಸಕ ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ಇಲ್ಲಿನ ಜೇಸೀ ವೇದಿಕೆಯಲ್ಲಿ ಸಾಂಕೇತಿಕವಾಗಿ ಶಿಲಾನ್ಯಾಸ ಕಾರ್ಯಕ್ಕೆ ಚಾಲನೆ ನೀಡಿದ ರಂಜನ್ ಅವರು, ಕೊಡಗು ಜಿಲ್ಲೆ ಸೈನಿಕ ಪರಂಪರೆಯ ವಿಶೇಷ ಜಿಲ್ಲೆಯಾಗಿದೆ. ಇಲ್ಲಿನ ಸೈನಿಕರ ಕೆಚ್ಚೆದೆಯ ಹೋರಾಟಗಳನ್ನು ಭಾರತ ಮಾತ್ರವಲ್ಲದೇ ಇಡೀ ವಿಶ್ವ ಕೊಂಡಾಡುತ್ತದೆ. ದೇಶದ ಸೈನಿಕ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರವಾಗಿದೆ. ದೇಶ ಕಾಯುವ ಸೈನಿಕರ ಸ್ಮರಣೆ ಸದಾ ಆಗಬೇಕು. ಇದರೊಂದಿಗೆ ದೇಶ ಸೇವೆಯ ಕಾರ್ಯದಲ್ಲಿ ವೀರಮರಣ ಹೋರಾಟಗಳನ್ನು ಭಾರತ ಮಾತ್ರವಲ್ಲದೇ ಇಡೀ ವಿಶ್ವ ಕೊಂಡಾಡುತ್ತದೆ. ದೇಶದ ಸೈನಿಕ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರವಾಗಿದೆ. ದೇಶ ಕಾಯುವ ಸೈನಿಕರ ಸ್ಮರಣೆ ಸದಾ ಆಗಬೇಕು. ಇದರೊಂದಿಗೆ ದೇಶ ಸೇವೆಯ ಕಾರ್ಯದಲ್ಲಿ ವೀರಮರಣ ಮಹಾಂತ ಶಿವಲಿಂಗ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಅವರುಗಳು ದೀಪ ಬೆಳಗುವ ಮೂಲಕ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಿದರು.
ಅಪ್ಪಚ್ಚು ರಂಜನ್ ಅಭಿಮಾನಿಗಳ ಬಳಗದಿಂದ ಅಮರ್ ಜವಾನ್ ಸ್ಮಾರಕವನ್ನು ನಿರ್ಮಿಸಿ, ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ಸುಪರ್ದಿಗೆ ಹಸ್ತಾಂತರಿಸಲಾಗುವುದು. ಆ ಮೂಲಕ ಸೋಮವಾರಪೇಟೆ ಭಾಗದ ಮಾಜೀ ಸೈನಿಕರಿಗೆ ಗೌರವ ಸಲ್ಲಿಸಲಾಗುವುದು ಎಂದು ಪ್ರಮುಖರಾದ ಕಿಬ್ಬೆಟ್ಟ ಮಧು, ನೇಗಳ್ಳೆ ಜೀವನ್, ಪ್ರದೀಪ್ ಸೇರಿದಂತೆ ಇತರರು ತಿಳಿಸಿದರು.