ಮಡಿಕೇರಿ, ಜು.೪ : ಭ್ರಷ್ಟ ವ್ಯವಸ್ಥೆ ಮತ್ತು ದುರಾಡಳಿತದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ಎಲ್ಲರೂ ಮುಂದಾಗಬೇಕು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪಕ್ಷ ಬಲಿಷ್ಠಗೊಂಡರೆ ಜಿಲ್ಲೆಯಲ್ಲಿ ಸಂಘಟನೆ ಸುಲಭವೆಂದು ತಿಳಿಸಿದರು.
ಅಧಿಕಾರಿಗಳ ಕರ್ತವ್ಯಲೋಪ ದಿಂದ ಮಡಿಕೇರಿ ನಗರಸಭೆಯ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಕೆಲವು ಅಕ್ರಮಗಳನ್ನು ತೆನ್ನಿರಾ ಮೈನಾ ಮಡಿಕೇರಿ, ಜು.೪ : ಭ್ರಷ್ಟ ವ್ಯವಸ್ಥೆ ಮತ್ತು ದುರಾಡಳಿತದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ಎಲ್ಲರೂ ಮುಂದಾಗಬೇಕು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪಕ್ಷ ಬಲಿಷ್ಠಗೊಂಡರೆ ಜಿಲ್ಲೆಯಲ್ಲಿ ಸಂಘಟನೆ ಸುಲಭವೆಂದು ತಿಳಿಸಿದರು.
ಅಧಿಕಾರಿಗಳ ಕರ್ತವ್ಯಲೋಪ ದಿಂದ ಮಡಿಕೇರಿ ನಗರಸಭೆಯ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಕೆಲವು ಅಕ್ರಮಗಳನ್ನು ತೆನ್ನಿರಾ ಮೈನಾ ಸಹಕಾರದಿಂದ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ವೀಣಾ ಅಚ್ಚಯ್ಯ ಹಾಗೂ ಇತರ ಮುಖಂಡರೊAದಿಗೆ ಪ್ರತಿ ಬೂತ್ಗಳಿಗೆ ತೆರಳಿ ಪಕ್ಷ ಸಂಘಟಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷÀ ಕೊಕ್ಕಲೆರ ಸುಜು ತಿಮ್ಮಯ್ಯ ನೇಮಕಾತಿ ಪತ್ರ ಪಡೆದ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ತಕ್ಷಣ ಆರಂಭಿಸುವAತೆ ಸೂಚಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ವಕ್ತಾರÀ ತೆನ್ನೀರ ಮೈನಾ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ ಆಡಳಿತ ಹಲವು ವೈಫಲ್ಯಗಳನ್ನು ಕಂಡಿದೆ. ದಿನಕ್ಕೊಂದು ಹಗರಣ ಬೆಳಕಿಗೆ ತರುವಷ್ಟು ದುರಾಡಳಿತವಿದೆ. ಹೋರಾಟ ನಡೆಸಲು ಜಿಲ್ಲಾಧ್ಯಕ್ಷರು ಹಾಗೂ ಮುಖಂಡರ ಸಹಕಾರದ ಅಗತ್ಯವಿದೆ ಎಂದರು.
ಡಿಸಿಸಿ ಕಾರ್ಯದರ್ಶಿ ಮಂದ್ರಿರ ಮೋಹನ್ ದಾಸ್, ಬ್ಲಾಕ್ ಉಪಾಧ್ಯಕ್ಷ ಪ್ರಭುರೈ, ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸಂಘಟನಾ ಕಾರ್ಯದರ್ಶಿಗಳಾದ ರವೂಫ್ ಶೇಖ್, ರವಿಗೌಡ, ಖಜಾಂಚಿ ಬಲ್ಲಚಂಡ ಚಂದನ್, ಚೆರಿಯಮನೆ ಭಾರ್ಗವ, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ ಹಲವು ಸಲಹೆಗಳನ್ನು ನೀಡಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷÀ ಬಾನಂಡ ಪ್ರಥ್ಯು, ವಕ್ತಾರÀ ಪಿ.ಎಲ್.ಸುರೇಶ್, ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ, ಪ್ರದೀಪ್ ಕೊಟ್ಟಕೇರಿಯನ, ನಂದ, ಕೇಶವ, ಬ್ಲಾಕ್ ಪದಾಧಿಕಾರಿಗಳಾದ ಪಡಿಯೇಟಿರ ಕವಿತಾ, ಲಿಯಾಕತ್ ಆಲಿ, ಶಿವು ಮೂರ್ನಾಡು, ಮಹಮ್ಮದ್ ಆಲಿ, ಧನಂಜಯ, ವಸಂತ್ ಭಟ್, ಪೂರ್ಣಿಮಾ, ಪ್ರೇಮ, ಹನೀಫ್, ಎಂ.ಎA.ಹಫೀಝ್ ಉರ್ ರೆಹಮಾನ್, ಅಣ್ಣಚ್ಚಿರ ಸತೀಶ್, ಮಾಯಿನ್, ಹೊಟ್ಟೆಂಗಡ ಉತ್ತಯ್ಯ, ಚಿಮ್ಮಚುಮ್ಮಣ್ಣ, ಜೆ.ಸಿ.ಜಗದೀಶ್, ಸೈಮನ್ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.