ಮಡಿಕೇರಿ, ಜು. ೩: ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ರಾಜ್ಯದಲ್ಲಿರುವ ೨೧ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಮೇಲ್ವಿಚಾರಕಿಯರ ತರಬೇತಿ ಕೇಂದ್ರಗಳನ್ನು (ಒಐಖಿಅ ಕೇಂದ್ರ) ಸ್ಥಗಿತಗೊಳಿಸುವಂತೆ ಸರಕಾರದ ಮೂಲಕ ಆದೇಶವಾಗಿದ್ದು, ಇದು ಈ ಕೇಂದ್ರಗಳಲ್ಲಿ ಕಳೆದ ಹಲವು ವರ್ಷಗಳಿಂದ ದುಡಿಯುತ್ತಿದ್ದ ನೌಕರರ ಬದುಕನ್ನು ಅತಂತ್ರಗೊಳಿಸಿದAತಾಗಿದೆ.

ಕಳೆದ ಮಾರ್ಚ್ ೩೧ ರಿಂದ ಈ ಕೇಂದ್ರಗಳ ಸ್ಥಗಿತಕ್ಕೆ ನಿರ್ದೇಶನ ನೀಡಲಾಗಿದೆ. ತರಬೇತಿ ಸಂಸ್ಥೆ ಪ್ರಾರಂಭವಾದಾಗಿನಿAದ ರಾಜ್ಯ ಸರಕಾರದಿಂದ ಬಿಡುಗಡೆಯಾಗಿರುವ ಆವರ್ತ/ ಅನಾವರ್ತ ಅನುದಾನದಿಂದ ಖರೀದಿಸಿದ್ದ ಹಾಗೂ ಸಂಸ್ಥೆಯಲ್ಲಿರುವ ವಸ್ತುಗಳನ್ನು ಸಂಬAಧಪಟ್ಟ ಜಿಲ್ಲಾ ಉಪನಿರ್ದೇಶಕರು, ಶಿಶು ಅಭವೃದ್ಧಿ ಯೋಜನಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಶಕ್ಕೆ ಪಡೆಯಲು ಹಾಗೂ ಸದರಿ ಪರಿಕರಗಳನ್ನು ವಶಕ್ಕೆ ಪಡೆದ ಬಗ್ಗೆ ಕೇಂದ್ರ ಕಚೇರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಒಟ್ಟು ೨೧ ಕಡೆಗಳಲ್ಲಿ ಇಂತಹ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಕಾರ್ಯಚಟುವಟಿಕೆ ಏನಿತ್ತು..?

ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾಗಿ, ಸಹಾಯಕಿಯರಾಗಿ ನೇಮಕಗೊಂಡ ಮಹಿಳೆಯರಿಗೆ ನಿರಂತರವಾಗಿ ಕಳೆದ ಹಲವು ವರ್ಷಗಳಿಂದ ಅಂದರೆ ೧೯೭೮ರಿಂದಲೇ ರಾಜ್ಯದ ೨೧ ಅಂಗನವಾಡಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಈ ತರಬೇತಿ ಕೇಂದ್ರಗಳಲ್ಲಿ ೧೮೯ ರಷ್ಟು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು, ಬೋಧನೆಯ ಹಿತದೃಷ್ಟಿಯಿಂದ ಎಂಎಸ್‌ಡಬ್ಲುö್ಯ, ಎಂ.ಎ.ಸೈಕಾಲಜಿ ಶಾಲಾ ಪೂರ್ವಶಿಕ್ಷಣ ಹಾಗೂ ಇತರ ವಿಷಯಗಳ ಬಗ್ಗೆ ಉನ್ನತ ಪದವಿಗಳನ್ನು ಪಡೆದಿರುವಂತಹ ಸಿಬ್ಬಂದಿಗಳಾಗಿದ್ದಾರೆ.

ಆದರೆ ಕೋವಿಡ್ -೧೯ರ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನೀಡಲು ಹಿನ್ನಡೆಯಾಗಿತ್ತು. ಇದೀಗ ಮಾರ್ಚ್ ೩೧ರ ನಂತರದಿAದ ಈ ಕೇಂದ್ರಗಳ ಸ್ಥಗಿತಕ್ಕೆ ಸೂಚಿಸಿರುವುದು ಸಿಬ್ಬಂದಿಗಳು ಅತಂತ್ರತೆಯಲ್ಲಿದ್ದಾರೆ. ೧೮೯ ಸಿಬ್ಬಂದಿಗಳಿಗೂ ವೇತನ ನೀಡಲು ಇಲಾಖೆಯಿಂದ ಅನುದಾನ ನೀಡಲಾಗಿಲ್ಲ. ಈ ಬಗ್ಗೆ ಮಾಡಿರುವ ಮನವಿಗಳಿಗೂ ಯಾವುದೇ ಸ್ಪಂದನ ಈ ತನಕ ಸಿಕ್ಕಿಲ್ಲ.

ಕೋವಿಡ್ ಕಾರಣದಿಂದಾಗಿ ತರಬೇತಿ ಕೇಂದ್ರಗಳಿಗೆ ಎರಡು ವರ್ಷದಿಂದ ತರಬೇತಿಗೆ ತಂಡಗಳನ್ನು ನಿಯೋಜಿಸಿರಲಿಲ್ಲ. ಕೆಲಸಮಯದ ಹಿಂದೆ ಇಲಾಖೆಯಿಂದ ನಿಯೋಜಿತ ತಂಡವೊAದು ಕೇಂದ್ರಗಳ ಮೌಲ್ಯಮಾಪನ ನಡೆಸಿ ಅನುದಾನ ಮತ್ತು ಉದ್ಯೋಗದ ಭರವಸೆ ನೀಡಿತ್ತು. ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಗೂ ರಾಜ್ಯಸರಕಾರದ ಅನುದಾನ ೬೦-೪೦ ರಂತೆ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಮಾರ್ಚ್ ೩೧ ರಿಂದ ಸ್ಥಗಿತದ ಆದೇಶವಾಗಿದ್ದು, ಸ್ವಯಂಸೇವಾಸAಸ್ಥೆಗಳ ಬದಲಾಗಿ ೪ ಕೇಂದ್ರಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು ಎಂಬ ಮಾಹಿತಿ ನೀಡಲಾಗಿದೆ. ಆದರೆ ಸಿಬ್ಬಂದಿಗಳ ವಿಚಾರ, ಈ ತನಕದ ಗೌರವಧನ, ಕಟ್ಟಡಬಾಡಿಗೆ, ಇತ್ಯಾದಿ ವೆಚ್ಚಗಳನ್ನು ಇನ್ನೂ ಭರಿಸಬೇಕಾಗಿದೆ.

ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದಲ್ಲಿರುವ ೨೧ ಅಂಗನವಾಡಿ ತರಬೇತಿ ಕೇಂದ್ರಗಳ ನಿರ್ವಹಣೆ ಮತ್ತು ತರಬೇತಿ ಕೇಂದ್ರಗಳಲ್ಲಿರುವ ಸಿಬ್ಬಂದಿಯವರ ವಿದ್ಯಾರ್ಹತೆ ತಿಳಿಯಲು ನಿವೃತ್ತ ಉನ್ನತಾಧಿಕಾರಿಗಳ ಸಮಿತಿ ರಚಿಸಿ ಅವರಿಂದ ವರದಿಯನ್ನು ಸಹ ಪಡೆಯಲಾಗಿದೆ. ಸಮಿತಿಯ ಎಲ್ಲಾ ಸದಸ್ಯರುಗಳು ಅಂಗನವಾಡಿ ತರಬೇತಿ ಕೇಂದ್ರಗಳನ್ನು ಮುಂದುವರೆಸುವ ಬಗ್ಗೆ ಹಾಗೂ ತರಬೇತಿ ಕೇಂದ್ರಗಳ ಸಿಬ್ಬಂದಿಯವರ ಮೌಲ್ಯ ಮಾಪನದ ಬಗ್ಗೆ ಉತ್ತಮವಾಗಿ ವರದಿ ನೀಡಿರುವುದಾಗಿ ತಿಳಿದು ಬಂದಿದೆ.

(ಮೊದಲ ಪುಟದಿಂದ) ಕೇಂದ್ರ ಸರ್ಕಾರ ೦೧.೦೪.೨೦೧೯ರಿಂದ ಎನ್‌ಜಿಓ ನಡೆಸುತ್ತಿರುವ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ತಿಳಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸದರಿ ವಿಷಯವನ್ನು ೩೦.೦೩.೨೦೨೨ ರಂದು ಅಂಗನವಾಡಿ ತರಬೇತಿ ಕೇಂದ್ರಗಳ ಸಂಸ್ಥೆಗಳಿಗೆ ತಿಳಿಸಿದ್ದಾರೆ. ಅಂದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ೩೦.೦೩.೨೦೨೨ರವರೆಗೆ ತರಬೇತಿ ಕೇಂದ್ರಗಳ ಸಿಬ್ಬಂದಿಯವರಿಗೆ ಕಡ್ಡಾಯವಾಗಿ ವೇತನ ನೀಡಬೇಕಾಗುತ್ತದೆ.

ಈಗಾಗಲೇ ರಾಜ್ಯ ಸರ್ಕಾರದ ಹಣಕಾಸು ವಿಭಾಗ ಸದರಿ ೨೧ ಅಂಗನವಾಡಿ ತರಬೇತಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯವರಿಗೆ ಹಾಗೂ ತರಬೇತಿ ಕೇಂದ್ರಗಳ ಬಾಡಿಗೆ ಇತ್ಯಾದಿಗಳ ಬಗ್ಗೆ ೪ ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ. ಆದರೆ ೧೮೯ ಜನ ಸಿಬ್ಬಂದಿಯವರಿಗೆ ಸದರಿ ಹಣ ಇನ್ನೂ ಪಾವತಿಯಾಗದಿರುವುದರಿಂದ ಆ ಎಲ್ಲಾ ಸಿಬ್ಬಂದಿಗಳು ಜೀವನ ನಡೆಸಲು ಕಷ್ಟವಾಗುತ್ತಿದೆ. ಸದರಿ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಹಣವನ್ನು ಸದರಿ ಸಿಬ್ಬಂದಿಯವರಿಗೆ ನೀಡುವುದಲ್ಲದೇ ಸಂಬAಧಪಟ್ಟ ೨೧ ಅಂಗನವಾಡಿ ತರಬೇತಿ ಕೇಂದ್ರಗಳ ಬಾಡಿಗೆ ಇತ್ಯಾದಿಗಳ ಬಗ್ಗೆ ಸೂಕ್ತ ಕ್ರಮವಹಿಸುವುದು ಅನಿವಾರ್ಯವಾಗಿದೆ.

ಸಿಬ್ಬಂದಿಗಳ ಬೇಡಿಕೆ

ಬರಬೇಕಾಗಿರುವ ೩ ವರ್ಷದ ಗೌರವಧನ ಬಿಡುಗಡೆ ಮಾಡುವುದು. ಹಣಕಾಸು ಇಲಾಖೆಯಿಂದ ಈಗಾಗಲೇ ಬಿಡುಗಡೆಯಾಗಿರುವ ೪ ಕೋಟಿ ಅನುದಾನವನ್ನು ಸಿಬ್ಬಂದಿಯವರ ಗೌರವಧನ, ಕಟ್ಟಡ ಬಾಡಿಗೆ, ವಿದ್ಯುತ್‌ಚ್ಛಕ್ತಿ, ವೆಚ್ಚದ ಅನುದಾನವನ್ನು ಕೂಡಲೇ ನೀಡಿ ಬಾಕಿ ಅನುದಾನವನ್ನು ಬಿಡುಗಡೆ ಮಾಡುವುದು. ರಾಜ್ಯದಲ್ಲಿರುವ ೨೧ ಅಂಗನವಾಡಿ ತರಬೇತಿ ಕೇಂದ್ರಗಳು ಹಾಲಿ ಇರುವ ಸ್ಥಳದಲ್ಲಿಯೇ ಮುಂದುವರಿಸುವುದು. ೨೧ ಅಂಗನವಾಡಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸದಿದ್ದಲ್ಲಿ ಹಾಲಿ ೧೮೯ ಸಿಬ್ಬಂದಿ ವರ್ಗದವರನ್ನು ಅವರವರ ವಿದ್ಯಾರ್ಹತೆ ಅನುಗುಣವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳುವುದು. ರಾಜ್ಯ ಸರಕಾರದಿಂದ ಹೊಸದಾಗಿ ಪ್ರಾರಂಭಿಸುತ್ತಿರುವ ೪ ತರಬೇತಿ ಕೇಂದ್ರಗಳಿಗೆ ಹಾಲಿಯಿರುವ ತರಬೇತಿ ಕೇಂದ್ರಗಳ ೧೮೯ ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಿಕೊಳ್ಳುವ ಕುರಿತು ಸಿಬ್ಬಂದಿಗಳ ಬೇಡಿಕೆಯಿದೆ. -ಶಶಿ ಸೋಮಯ್ಯ